1. ತೋಟಗಾರಿಕೆ

ಉತ್ತಮ ಆರೋಗ್ಯಕ್ಕೆ ವರದಾನ ಡ್ರ್ಯಾಗನ್ ಹಣ್ಣು! ಇಲ್ಲಿದೆ ಡ್ರ್ಯಾಗನ್ ಹಣ್ಣಿನ ಮಾಹಿತಿ…

Kalmesh T
Kalmesh T
Dragon fruit is a boon for good health

ಆಡು ಭಾಷೆಯಲ್ಲಿ ಪಾಪಸ್‌ಕಳ್ಳಿ ಹಣ್ಣು ಎಂದು ಕರೆಯುವ ಡ್ರ್ಯಾಗನ್ ಹಣ್ಣು ಕ್ಯಾಕ್ಟಸ್ ಜಾತಿಗೆ ಸೇರಿರುವ ಸುಧಾರಿತ ತಳಿಯಾಗಿದೆ. ಕೆಂಪು ಬಣ್ಣದಲ್ಲಿರುವ ಈ ಹಣ್ಣು ನೋಡಲು ಡ್ರ್ಯಾಗನ್ ಆಕೃತಿಯನ್ನು ಹೋಲುವುದರಿಂದ ಡ್ರ್ಯಾಗನ್ ಹಣ್ಣು”ಎಂದು ಸಹ ಕರೆಯುತ್ತಾರೆ.

ಇದನ್ನೂ ಓದಿರಿ: ಆರೋಗ್ಯದ ಗಣಿ ಈ Avocado ಹಣ್ಣು

White Bread& Brown Bread-ಬಿಳಿ ಬ್ರೆಡ್ ಹಾಗೂ ಕಂದು ಬ್ರೆಡ್..ಯಾವುದು ಉತ್ತಮ..?

ಈ ಹಣ್ಣಿನ ಮೂಲ ಮಧ್ಯ ಅಮೇರಿಕಾವಾಗಿದ್ದು, ಪ್ರಸ್ತುತ ವಿವಿಧ ದೇಶಗಳಲ್ಲಿ ಮುಖ್ಯವಾಗಿ ಉಷ್ಣವಲಯದ ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಈ ಹಣ್ಣನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ.

ಮುಖ್ಯವಾಗಿ ಪಂಜಾಬ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಕಾಣಬಹುದು. ಕರ್ನಾಟಕದಲ್ಲಿ ಉತ್ತರ ಕರ್ನಾಟಕದ ಕೊಪ್ಪಳ, ಬಳ್ಳಾರಿ ಭಾಗದಲ್ಲಿ ಸಹ ಈ ಬೆಳೆ ಹರಡಿದೆ. ಸಾಧರಾಣವಾಗಿ ಕಡುಗೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುವ ಈ ಹಣ್ಣು ಕೆಲವೊಂದು ಗುಲಾಬಿ ಅಥವಾ ಹಳದಿಯ ಬಣ್ಣಗಳಲ್ಲೂ ಸಿಗುವುದು.

ಹಣ್ಣಿನ ಒಳಭಾಗ ಬರಿ ತಿರುಳು ಒಳಗೊಂಡಿದ್ದು ಸಣ್ಣ ಸಣ್ಣ ಬೀಜಗಳು ಇರುತ್ತವೆ. ಕಿವಿ ಹಣ್ಣುತರಹದ ವಿನ್ಯಾಸ ಇರುವ ಈ ಹಣ್ಣು ರುಚಿಯಲ್ಲಿಯೂ ಹಾಗೆಯೇ ಇದೆ.

ಡ್ರ್ಯಾಗನ್ ಹಣ್ಣು ಆರೋಗ್ಯದ ಖನಿಯಾಗಿದ್ದು. ಕಡಿಮೆ ಪ್ರಮಾಣದ ಸಕ್ಕರೆ ಮತ್ತು ಕೊಬ್ಬಿನ ಅಂಶವನ್ನು ಹಾಗೂ ಹೆಚ್ಚಿನ ಪ್ರಮಾಣದ ನಾರಿನಾಂಶ, ಜೀವಸತ್ವ-ಸಿ, ಕಬ್ಬಿಣಾಂಶ, ಸಸಾರಜನಕ, ಕ್ಯಾಲ್ಸಿಯಂ, ರಂಜಕ, ಓಮೇಗಾ-3 ಮತ್ತು ಓಮೇಗಾ-6 ಕೊಬ್ಬಿನಾಮ್ಲ ಇತ್ಯಾದಿ ಅಂಶಗಳನ್ನು ಹೊಂದಿರುವ ಈ ಹಣ್ಣು ಹಲವಾರು ರೋಗಗಳಿಗೆ ರಾಮಬಾಣವಾಗಿದೆ.

ದಾಸವಾಳದ ಹೂವಿನಲ್ಲಿದೆ ಅದ್ಬುತ ರಹಸ್ಯ! ನೀವು ಇದನ್ನೂ ತಿಳಿಯಲೆಬೇಕು!

ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.

ಡ್ರ್ಯಾಗನ್ ಹಣ್ಣಿನ ಪೌಷ್ಠಿಕ ಮೌಲ್ಯ (100 ಗ್ರಾಂ)

ಪೋಷಕಾಂಶಗಳು          ಪ್ರಮಾಣ

ಕಾರ್ಬೋಹೈಡ್ರೇಟ್      11ಗ್ರಾಂ

ಪ್ರೋಟಿನ್                 1.1 ಗ್ರಾಂ

ಕೊಬ್ಬು                    0.4 ಗ್ರಾಂ

ನಾರು                      3.0 ಗ್ರಾಂ

ಕಬ್ಬಿಣಾಂಶ               1.9 ಗ್ರಾಂ

ವಿಟಮಿನ್ ಸಿ             9 ಮಿ.ಗ್ರಾಂ

ವಿಟಮಿನ್ ಬಿ             0.04 ಗ್ರಾಂ

ಕ್ಯಾಲ್ಸಿಯಂ              107 ಮಿ.ಗ್ರಾಂ

ಈ ಹಣ್ಣು ಕಡಿಮೆ ಪ್ರಮಾಣದ ಕೊಬ್ಬಿನ ಅಂಶವನ್ನು ಹೊಂದಿದ್ದು ದೇಹದ ತೂಕವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಡ್ರಾಗ್ಯನ್ ಹಣ್ಣು ಓಮೇಗಾ-3 ಕೊಬ್ಬಿನಾಂಶವನ್ನು ಹೊಂದಿರುವುದರಿಂದ ಹೃದಯ ಆರೋಗ್ಯಕ್ಕೆ ಸಹಕರಿಸುತ್ತದೆ. ದೇಹದಲ್ಲಿರುವ ಕೆಟ್ಟ ಕೊಬ್ಬಿನಾಂಶವನ್ನು ಕರಗಿಸಿ, ಹೃದಯಕ್ಕೆ ಹರಿಯುವ ರಕ್ತವನ್ನು ಶುದ್ಧೀಕರಿಸುತ್ತದೆ.

ಈ ಹಣ್ಣು ಹೆಚ್ಚಿನ ನಾರಿನಾಂಶವನ್ನು ಹೊಂದಿದ್ದು ಇದು ದೇಹದ ಕೆಟ್ಟ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನು ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಜೀವಸತ್ವ-ಸಿ ಅಂಶವು ಚರ್ಮದ ಕಳೆಗುಂದುವಿಕೆ ವಿರುದ್ಧ ಸೆಣಸುತ್ತದೆ. ದಂತ ಮತ್ತು ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ.

ಈ ಹಣ್ಣು ಅತ್ಯಧಿಕ ಖನಿಜಾಂಶಗಳನ್ನು ಹಾಗೂ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ದೇಹದರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಮತ್ತು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅಲ್ಲದೇ ಕ್ಯಾನ್ಸರ್ ಕಣಗಳನ್ನು ನಾಶ ಮಾಡುವುದರಿಂದ ಈ ಹಣ್ಣು ಕ್ಯಾನ್ಸರ್ ರೋಗಕ್ಕೆ ರಾಮ ಬಾಣವಾಗಿದೆ.

Cucumber Farming ನಿಂದ ರೈತರು ಇಡೀ ವರ್ಷ ಗಳಿಸಬಹುದು!!

Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ

ಡ್ರ್ಯಾಗನ್ ಹಣ್ಣಿನಲ್ಲಿ ಜೀವಸತ್ವ-ಸಿ ಮತ್ತುಜೀವಸತ್ವ-ಎ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ಮೆದುಳನ್ನು ಚುರುಕುಗೊಳಿಸುತ್ತದೆ. ಈ ಹಣ್ಣಿನ ಸೇವನೆಯಿಂದ ಶ್ವಾಸಕೋಶ ಸಮಸ್ಯೆ ಹಾಗೂ ರಕ್ತಹೀನತೆ ಉಪಶಮನವಾಗುತ್ತದೆ. ಅಲ್ಲದೇ ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಈ ಹಣ್ಣು ಉಪಯುಕ್ತವಾಗಿದೆ.

ಇದು ಗರ್ಭೀಣಿಯರಿಗೆ ಹೆಚ್ಚಿನ ಪೌಷ್ಠಿಕಾಂಶವನ್ನು ಒದಗಿಸುತ್ತದೆ. ಇದು ಬಿಳಿಯ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಈ ಡೆಂಗ್ಯೂ ಜ್ವರದಂತಹ ರೋಗಗಳಿಗೆ ಈ ಹಣ್ಣು ಸಿದ್ಧ ಔಷಧಿಯಾಗಿದೆ ಎಂದು ಹೇಳಲಾಗುತ್ತದೆ. 

ಡ್ರ್ಯಾಗನ್ ಹಣ್ಣನ್ನು ಕೇವಲ ತಾಜಾ ಹಣ್ಣಲ್ಲದೆ. ಅನೇಕ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಿ ಉಪಯೋಗಿಸಬಹುದು. ಅವುಗಳಲ್ಲಿ ಈ ಕೆಳಗೆ ವಿವರಿಸಿದೆ.

ಲೇಖನ: ಡಾ.ಕವಿತಾ ಯು. ಉಳ್ಳಿಕಾಶಿ, ವಿಜ್ಞಾನಿ (ಗೃಹ ವಿಜ್ಞಾನ ,ಡಾ. ಜ್ಯೋತಿಆರ್. ವಿಜ್ಞಾನಿ (ತೋಟಗಾರಿಕೆ) ಶ್ರೀ ರಾಘವೇಂದ್ರ ಎಲಿಗಾರ್, ವಿಜ್ಞಾನಿ (ಕೃಷಿ ಕೀಟಶಾಸ್ತ್ರ), ಐ.ಸಿ.ಎ.ಆರ್-ಕೃಷಿ ವಿಜ್ಞಾನಕೇಂದ್ರ, ಗಂಗಾವತಿ

Published On: 29 May 2022, 02:23 PM English Summary: Dragon fruit is a boon for good health

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.