1. ಆರೋಗ್ಯ ಜೀವನ

ಅಧಿಕ ರಕ್ತದೊತ್ತಡ ತಪ್ಪಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್‌!

Hitesh
Hitesh
Here are simple tips to avoid high blood pressure!

ಅಧಿಕ ರಕ್ತದೊತ್ತಡ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಮಾಮೂಲಿ ಸಮಸ್ಯೆ ಎನ್ನುವಂತೆ ಹಲವರಲ್ಲಿ ಕಾಣಿಸಿಕೊಳ್ಳುತ್ತಿದೆ.  

ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡದ ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರವು ಮುಖ್ಯವಾಗಿದೆ.

ಆಂಧ್ರಪ್ರದೇಶದಲ್ಲಿ 10,500 ಕೋಟಿ ರೂ. ಯೋಜನೆಗಳಿಗೆ ಮೋದಿ ಚಾಲನೆ! 

ನೀವು ಸೇವಿಸುವ ಆಹಾರದಲ್ಲಿ ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಂನಂತಹ ಪೋಷಕಾಂಶಗಳನ್ನು ಸೇರಿಸುವುದರಿಂದ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು.

Water Bell: ಶಾಲೆಯಲ್ಲಿ ನೀರು ಕುಡಿಯಲು ಮೂರು ಬೆಲ್‌! 

ಅಧಿಕ ರಕ್ತದೊತ್ತಡ ಸಮಸ್ಯೆ ತಪ್ಪಿಸುವುದು ಹೇಗೆ, ಯಾವೆಲ್ಲ ಆಹಾರವನ್ನು ಸೇವಿಸಿದರೆ, ಈ ಸಮಸ್ಯೆಯಿಂದ ದೂರ ಇರಬಹುದು ಎನ್ನುವುದಕ್ಕೆ ಇಲ್ಲಿದೆ ಟಿಪ್ಸ್‌

ರಾಜ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ: ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌!

 ಕುಂಬಳಕಾಯಿ ಬೀಜ ಸೇವಿಸಿ

ರಕ್ತದೊತ್ತಡ ನಿಯಂತ್ರಣಕ್ಕೆ ಮುಖ್ಯವಾದ ಪೋಷಕಾಂಶಗಳಾದ ಮೆಗ್ನೀಸಿಯಂ, ಪೊಟ್ಯಾಸಿಯಂ ಮತ್ತು ಅರ್ಜಿನೈನ್ನ ಅಂಶಗಳು ಕುಂಬಳಕಾಯಿಯಲ್ಲಿದೆ.

ಅಲ್ಲದೇ ಕುಂಬಳಕಾಯಿ ಬೀಜದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಅಗತ್ಯವಾದ ಅಮೈನೋ ಆಮ್ಲವು, ರಕ್ತನಾಳಗಳ ವಿಶ್ರಾಂತಿ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿ ಆಗಿದೆ.  

ಇದನ್ನೂ ಓದಿರಿ: ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿ ಎತ್ತರದ  ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ  

ಕುಂಬಳಕಾಯಿ ಬೀಜ

ಬೆರ್ರಿ ಹಣ್ಣುಗಳು

ಅಧಿಕ ರಕ್ತದೊತ್ತಡ ಸಮಸ್ಯೆಯು ಕೆಲವೊಮ್ಮೆ ಹೃದ್ರೋಗ ಸಮಸ್ಯೆಗೂ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಬೆರ್ರಿಗಳು ಸಹಕಾರಿ ಆಗಿದೆ.

ಬ್ಲೂಬೆರ್ರಿ, ರಾಸ್‌ಬೆರ್ರಿ, ಚೋಕ್‌ಬೆರ್ರಿ, ಕ್ಲೌಡ್‌ಬೆರ್ರಿ ಮತ್ತು ಸ್ಟ್ರಾಬೆರಿಗಳು ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ.

ಇದನ್ನೂ ಓದಿರಿ: ರಾಜೀವ್‌ ಗಾಂಧಿ ಹಂತಕರ ಬಿಡುಗಡೆ: ಸೋನಿಯಾಗಾಂಧಿ ಕ್ಷಮಾಪಣೆ, ಬಿಡುಗಡೆ ಹಿನ್ನೆಲೆ ಗೊತ್ತೆ? 

ಕ್ಯಾರೆಟ್‌ಗಳು

ಕ್ಯಾರೆಟ್‌ ಕೇವಲ ರಕ್ತದೊತ್ತಡ ಮಾತ್ರವಲ್ಲ ಕಣ್ಣಿನ ಸಮಸ್ಯೆ ಪರಿಹಾರಕ್ಕೂ ಇದು ಸಹಕಾರಿ ಆಗಿದೆ.  ಕ್ಲೋರೊಜೆನಿಕ್, ಪಿ-ಕೌಮರಿಕ್ ಮತ್ತು ಕೆಫೀಕ್ ಆಮ್ಲಗಳಂತಹ ಫೀನಾಲಿಕ್‌ಗಳು ಇದರಲ್ಲಿ ಸೇರಿವೆ.

ಕ್ಯಾರೆಟ್, ರಕ್ತನಾಳಗಳಿಗೆ ವಿಶ್ರಾಂತಿ ನೀಡಲು ಮತ್ತು ಉರಿಯೂತವನ್ನು ಕಡಿಮೆ ಮಾಡುವುದಲ್ಲದೇ  ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ ಆಗಿದೆ.

ರಾಜೀವ್‌ ಗಾಂಧಿ ಹತ್ಯೆಗೆ ಕಾರಣವೇನು, ಸಂಚು ರೂಪಿಸಿದ್ದೇಗೆ ?  

ಕ್ಯಾರೆಟ್‌

ಟೊಮೆಟೊ  

ಟೊಮೆಟೊ ಮತ್ತು ಟೊಮೆಟೊದಿಂದ ಮಾಡಿದ ಉತ್ಪನ್ನಗಳಲ್ಲಿ ಪೊಟ್ಯಾಸಿಯಂ ಮತ್ತು ಕ್ಯಾರೊಟಿನಾಯ್ಡ್ ಪಿಗ್ಮೆಂಟ್ ಲೈಕೋಪೀನ್ ಸೇರಿದಂತೆ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿವೆ.

ಲೈಕೋಪೀನ್ ಹೃದಯದ ಆರೋಗ್ಯದ ಮೇಲೆ  ಇವು ಬಹುವಾಗಿ ಪ್ರಭಾವ ಬೀರುತ್ತವೆ. ಹೀಗಾಗಿ, ಟೊಮೆಟೊ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡದಂತ ಹೃದಯ ಸಂಬಂಧಿ ಸಮಸ್ಯೆಯನ್ನು ತಪ್ಪಿಸಬಹುದಾಗಿದೆ.

ಇದನ್ನೂ ಓದಿರಿ: ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿ ಎತ್ತರದ  ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ  

ಟೊಮೆಟೊ

ಪಾಲಕ್ ಸೊಪ್ಪು

ಪಾಲಕ್ ಸೊಪ್ಪಿನಲ್ಲಿ ನೈಟ್ರೇಟ್ ಅಧಿಕವಾಗಿರುತ್ತದೆ. ಇದು ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂಗಳಿಂದ ಕೂಡಿದೆ. ಇದು ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ನೆರವಾಗಬಲ್ಲದಾಗಿದೆ.   

ಪಾಲಕ್ ಸೊಪ್ಪು

ಸಿಟ್ರಸ್ ಹಣ್ಣುಗಳು

ದ್ರಾಕ್ಷಿ, ಕಿತ್ತಳೆ ಮತ್ತು ನಿಂಬೆಹಣ್ಣು ಸೇರಿದಂತೆ ಸಿಟ್ರಸ್ ಹಣ್ಣುಗಳು ರಕ್ತದೊತ್ತಡ ಕಡಿಮೆಗೊಳಿಸುವ ಶಕ್ತಿಯನ್ನು ಹೊಂದಿವೆ.

ಇವು ವಿಟಮಿನ್‌ಗಳು, ಖನಿಜಗಳು ಮತ್ತು ಸಸ್ಯ ಸಂಯುಕ್ತಗಳಿಂದ ತುಂಬಿವೆ. ಹೀಗಾಗಿ ಇವು ಅಧಿಕ ರಕ್ತದೊತ್ತಡದಂತಹ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ಆರೋಗ್ಯಕ್ಕೆ ಸಹಕಾರಿ ಆಗಿದೆ. 

ಸಿಟ್ರಸ್‌

ಸಾಲ್ಮನ್ ಮತ್ತು ಇತರ ಫ್ಯಾಟಿ ಮೀನು

ಫ್ಯಾಟಿ ಮೀನುಗಳು ಒಮೆಗಾ-3 ಕೊಬ್ಬಿನ ಅಂಶವನ್ನು ಒಳಗೊಂಡಿದೆ. ಇದು ಹೃದಯದ ಆರೋಗ್ಯಕ್ಕೆ ನೆರವಾಗುವ ಹಲವು ಪ್ರಯೋಜನಗಳನ್ನು ಹೊಂದಿದೆ.

ಈ ಎರಡನ್ನು ಸೇವನೆ ಮಾಡುವುದರಿಂದ ರಕ್ತದೊತ್ತಡದ ಮಟ್ಟವು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತದೆ.

ಫ್ಯಾಟಿ ಮೀನು

ಸಂಶೋಧನೆಯು ಒಮೆಗಾ-3-ಸಮೃದ್ಧ ಫ್ಯಾಟಿ ಮೀನುಗಳ ಹೆಚ್ಚಿನ ಸೇವನೆಯು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತವೆ ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿದೆ.

ರಾಜೀವ್‌ ಗಾಂಧಿ ಹಂತಕರ ಬಿಡುಗಡೆ: ಸೋನಿಯಾಗಾಂಧಿ ಕ್ಷಮಾಪಣೆ, ಬಿಡುಗಡೆ ಹಿನ್ನೆಲೆ ಗೊತ್ತೆ?

Published On: 12 November 2022, 03:24 PM English Summary: Here are simple tips to avoid high blood pressure!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.