1. ಸುದ್ದಿಗಳು

Water Bell: ಶಾಲೆಯಲ್ಲಿ ನೀರು ಕುಡಿಯಲು ಮೂರು ಬೆಲ್‌!

Hitesh
Hitesh
Water Bell: Three bells to drink water in school!

ಕೇರಳದ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ವಾಟರ್‌ ಬೆಲ್‌ ಪರಿಕಲ್ಪನೆಯನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ: ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌!

ಮಕ್ಕಳಲ್ಲಿ ನೀರಿನ ಅಂಶದ ಕೊರತೆ ನೀಗಿಸುವ ಉದ್ದೇಶದಿಂದ ಹಾಗೂ ನಿಯಮಿತವಾಗಿ ವಿದ್ಯಾರ್ಥಿಗಳಿಗೆ ನೀರು ಕುಡಿಯುವಂತೆ

ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದ್ದು, ಶಾಲೆಗಳಲ್ಲಿ ದಿನಕ್ಕೆ ಮೂರು ಬಾರಿ ನೀರಿನ ಬೆಲ್‌ ಮೊಳಗಿಸಲು ನಿರ್ದೇಶನ ನೀಡಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯಾದ್ಯಂತ ಎಲ್ಲಾ ಮಂಡಳಿಗಳಿಗೆ ಸಂಯೋಜಿತವಾದ ಶಾಲೆಗಳಲ್ಲಿ ಈ ಹೊಸ ವ್ಯವಸ್ಥೆ ತರಲು ನಿರ್ಧರಿಸಿದೆ.

ರಾಜೀವ್‌ ಗಾಂಧಿ ಹತ್ಯೆಗೆ ಕಾರಣವೇನು, ಸಂಚು ರೂಪಿಸಿದ್ದೇಗೆ ?  

ಕೇರಳ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಗೆ ಮಾಡುವ ಸಂಬಂಧ ಚರ್ಚೆ ನಡೆದಿತ್ತು.  

2019ರಲ್ಲಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರಿಚಯಿಸಿದ್ದರು. ಆದರೆ ಕೋವಿಡ್ ಹಿನ್ನೆಲೆ ಈ ಪರಿಕಲ್ಪನೆ ಅನುಷ್ಠಾನ ಸಾಧ್ಯವಾಗಿರಲಿಲ್ಲ.  

ಶಾಲೆಗಳಲ್ಲಿ ನೀರಿನ ಗಂಟೆ (water bell in school) ಕುರಿತು ಸಚಿವ ಬಿ.ಸಿ.ನಾಗೇಶ್ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.  

ಇದನ್ನೂ ಓದಿರಿ: ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿ ಎತ್ತರದ  ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ  

ಶಾಲಾ ಮಕ್ಕಳಲ್ಲಿ ನೀರಿನ ಕೊರತೆಯಿಂದ ನಿರ್ಜಲೀಕರಣ, ಹೊಟ್ಟೆ ನೋವು, ಒಣ ಗಂಟಲು ಮತ್ತು ತಲೆನೋವಿನಂಥ

ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಈ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ನೀರಿನ ಬಾಟಲ್‌ ಗಂಟೆ ಬಾರಿಸಲು ನಿರ್ಧರಿಸಿದೆ.  

Water Bell

ಈ ಹೊಸ ವ್ಯವಸ್ಥೆಯಡಿ ರಾಜ್ಯದ ಶಾಲೆಗಳಲ್ಲಿ ಇನ್ನು ಮುಂದೆ ದಿನಕ್ಕೆ ಮೂರು ಬಾರಿ ನೀರಿನ ಗಂಟೆ ಬಾರಿಸಲು ಸೂಚನೆ ನೀಡಲಾಗಿದೆ.  

ಶಾಲೆಗಳಲ್ಲಿ ಬೆಳಗ್ಗೆ 10.35ಕ್ಕೆ ಮೊದಲ ಗಂಟೆ, ಎರಡನೆಯದ್ದು ಮಧ್ಯಾಹ್ನ 12ಕ್ಕೆ ಮತ್ತು ಮಧ್ಯಾಹ್ನ 2 ಗಂಟೆಗೆ ಮೂರನೇ ಗಂಟೆಗೆ ಬಾರಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.  

ರಾಜೀವ್‌ ಗಾಂಧಿ ಹಂತಕರ ಬಿಡುಗಡೆ: ಸೋನಿಯಾಗಾಂಧಿ ಕ್ಷಮಾಪಣೆ, ಬಿಡುಗಡೆ ಹಿನ್ನೆಲೆ ಗೊತ್ತೆ? 

Published On: 12 November 2022, 12:37 PM English Summary: Water Bell: Three bells to drink water in school!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.