1. ಆರೋಗ್ಯ ಜೀವನ

ಹೃದಯಾಘಾತ ತಡೆಗಟ್ಟಲು ಇಲ್ಲಿದೆ ಕಿರು ಮಾಹಿತಿ..

ಒಂದು ಕ್ಷಣವೂ ವಿರಾಮವಿಲ್ಲದೆ ಹಗಲುರಾತ್ರಿ ನಿರಂತರವಾಗಿ ಚಲನೆಯಲ್ಲಿರುತ್ತದೆ ಹೃದಯ. ಲಬ್ ಡಬ್ ಲಬ್ ಡಬ್ ಎಂದು ಕೇಳಿ ಬರುವ ಹೃದಯ ಒಂದು ಕ್ಷಣ ತನ್ನ ಕೆಲಸ ನಿಲ್ಲಿಸಿದರೆ ಸಾಕು. ಉಸಿರೇ ನಿಂತುಹೋಗುತ್ತದೆ. ದೇಹದ ಸೂಕ್ಷ್ಮವಾದ ಈ ಅಂಗಕ್ಕೆ ನಾವು ಕಾಳಜಿವಹಿಸದೆ ಇರುವುದರಿಂದಾಗಿ ಹೃದಯಾಘಾತಗಳು ಹೆಚ್ಚಾಗುತ್ತಿವೆ.

ಇತ್ತೀಚೆಗೆ ಹೃದಯಾಘಾತ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತಿದೆ. ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ಓದು, ಪರೀಕ್ಷೆ ಅಂತ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ, ಬೆಳೆಯುತ್ತಿದ್ದಂತೆ ಕೆಲಸದ ಒತ್ತಡ, ಜಾಬ್ ಸಿಗಲಿಲ್ಲವೆಂಬ ಕೊರತೆ ಹೀಗೆ ಹತ್ತುಹಲವಾರು ಸಮಸ್ಯೆಗಳು ಯುವಕರ ಹೆಗಲಿಗೇರುವ ಜವಾಬ್ದಾರಿ ಇವೆಲ್ಲಾ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಇನ್ನು ಅನಾರೋಗ್ಯಕರ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಇವೆಲ್ಲಾ ಹೃದಯಾಘಾತ  ಪ್ರಮುಖ ಕಾರಣಗಳಾಗಿವೆ. ಹೃದಯಾಘಾತದ ಲಕ್ಷಣಗಳು ಹಾಗೂ ಉಂಟಾದಾಗ ಏನು ಮಾಡಬೇಕೆಂಬ ಮಾಹಿತಿ ನೋಡಿ ಇಲ್ಲಿದೆ.

ಹೃದಯವು ದೇಹದ ಅತ್ಯಂತ ಸೂಕ್ಷ್ಮವಾದ ಭಾಗ. ಆದಕಾರಣ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಹೆಚ್ಚಾಗಿ ಹೃದಯಾಘಾತದ ಸಮಸ್ಯೆ 45 ವರ್ಷಗಳ ನಂತರ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚೆಗೆ ಆಹಾರಪದ್ಧತಿ ಕೆಲಸದ ಒತ್ತಡದಿಂದಾಗಿ ಚಿಕ್ಕಮಕ್ಕಳಿಗೂ ಹೃದಯಾಘಾತವಾಗುತ್ತಿದೆ.

ಹೃದಯಾಘಾತದ ಲಕ್ಷಣಗಳು

  • ಕೆಲವರಿಗೆ ಎದೆ ನೋವು ಕಾಡಲು ಶುರುವಾಗುತ್ತದೆ. ಆದರೆ ಕೆಲವರು ಅದನ್ನು ಆಸಿಡಿಟಿ ಸಮಸ್ಯೆಯಿಂದ ಬರುತ್ತದೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಎದೆನೋವು ಕಾಣಿಸಿಕೊಂಡಾಗ ನೀವು ತುಂಬಾ ಬೆವರಲು ಶುರು ಮಾಡಿದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ.
  • 30 ನೇ ವಯಸ್ಸಿನ ನಂತರ ಮೆಟ್ಟಿಲು ಹತ್ತುವಾಗ ಅಥವಾ ಭಾರವಾದ ಕೆಲಸಗಳನ್ನು ಮಾಡುವಾಗ ತುಂಬಾ ದಣಿವಾದರೆ, ಉಸಿರಾಡಲು ಕಷ್ಟಕರವಾದರೆ ಇದು ಹೃದಯದ ಸಮಸ್ಯೆಯ ಸೂಚನೆ.
  • 30-35 ನೇ ವಯಸ್ಸಿಗೆ ನಿದ್ರೆ ಮಾಡುವಾಗ ಗೊರಕೆ ಸಮಸ್ಯೆ ಕಾಡುತ್ತಿದ್ದರೆ ಇದು ಉಸಿರಾಟದ ತೊಂದರೆ. ಇದರರ್ಥ ನಿಮ್ಮ ಹೃದಯ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸೂಚನೆ.
  • ಕೊಲೆಸ್ಟ್ರಾಲ್ ಕೂಡ ಹೃದಯದ ಸಮಸ್ಯೆಗೆ ಒಂದು ಕಾರಣವಾಗಿದೆ. ಕೊಲೆಸ್ಟ್ರಾಲ್ ತುಂಬಾ ಹೆಚ್ಚಾಗಿದ್ದರೆ ರಕ್ತ ಸಂಚಾರ ತಡೆಯಾಗಿ ದೇಹದ ಕೆಲವು ಭಾಗಗಳಲ್ಲಿ ನಿರಂತರವಾಗಿ ಜುಮ್ಮೆನಿಸುಂತಹ ಸಮಸ್ಯೆ ಕಾಡುತ್ತದೆ. ಇದು ಕೂಡ ಹೃದಯದ ಸಮಸ್ಯೆಯ ಪೂರ್ವ ಸೂಚನೆಯಾಗಿದೆ.

ಹೃದಯದ ಆರೋಗ್ಯಕ್ಕೆ ಜೀವನಶೈಲಿ ಹಾಗೂ ಜೀವನಶೈಲಿ:

ವ್ಯಾಯಾಮ: ಕೂತು ಕೆಲಸ ಮಾಡುವವರು ದೈಹಿಕ ವ್ಯಾಯಾಮದ ಕಡೆಗೆ ಗಮನ ಕೊಡಬೇಕು. ದಿನದಲ್ಲಿ ಅರ್ಧ ಗಂಟೆ ಕಡ್ಡಾಯವಾಗಿ ವ್ಯಾಯಾಮಕ್ಕೆ ಮೀಸಲಿಡಿ. ದೈಹಿಕ ವ್ಯಾಯಾಮ ಮಾಡುವುದರಿಂದ ಬೊಜ್ಜು ಮೈ ಕರಗುವುದು, ಫಿಟ್ನೆಸ್‌ ಹಾಗೂ ಆರೋಗ್ಯ ಪಡೆಯಬಹುದು.

ಲೇಖಕರು: ಶಗುಪ್ತಾ ಅ.ಶೇಖ

Published On: 11 November 2020, 08:38 PM English Summary: heart problem

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.