1. ಆರೋಗ್ಯ ಜೀವನ

ಬರಿಗಾಲ ನಡಿಗೆಯ ಮಹತ್ವ, ಉತ್ತಮ ಆರೋಗ್ಯಕ್ಕೆ ಅದರ ಅಗತ್ಯ

ಹೊರಗೆ ಹೋಗುವಾಗ ನಾವು ಏನೆಲ್ಲಾ ಮರೆತರೂ ಚಪ್ಪಲಿ ಧರಿಸುವುದನ್ನು ಮಾತ್ರ ಮರೆಯುವುದಿಲ್ಲ. ಚಪ್ಪಲಿ ಧರಿಸುವುದು ಸಹ ಒಂದು ಪ್ರತಿಷ್ಠೆಯ ಸಂಕೇತವೂ ಆಗಿವೆ . ಚಪ್ಪಲಿ ಧರಿಸದೆ ಹೋದರೆ ಎಲ್ಲರೂ ನಿಮ್ಮನೇ ನೋಡುತ್ತ ಇರುತ್ತಾರೆ. ಅಲ್ಲದೇ ಏಕೆ ಚಪ್ಪಲಿ ಹಾಕೊಂಡಿಲ್ಲ ಎಂದು ಅಹ ಕೇಳುತ್ತಾರೆ. ಆದರೆ ಬರಿಗಾಲಿನಲ್ಲಿ ನಡೆಯುವುದರಿಂದ ಆಗುವ ಪ್ರಯೋಜನ ಮಾತ್ರ ಅನೇಕ.

ಪ್ರಕೃತಿಯ ಜೊತೆಗೆ ನೇರವಾಗಿ ಸಂಪರ್ಕ ಸಾಧಿಸುವ ಒಂದು ಉತ್ತಮ ಮಾರ್ಗವೆಂದರೆ ಬರಿಗಾಲಿನಿಂದ ನಡೆಯುವದು. ಮಣ್ಣಿನ ಮೇಲೆ ಬರಿಗಾಲಿನಿಂದ ನಡೆದಾಡುವದರಿಂದ ನಮಗೆ ತಾಜಾತನ, ಶಾಂತಿ ಹಾಗೂ ಸುರಕ್ಷತೆಯ ಅನುಭವಉಂಟಾಗುತ್ತದೆ. ಸೊಂಪಾದ ತೋಟಗಳಲ್ಲಿ, ಗುಡ್ಡುಗಾಡು ಪ್ರದೇಶಗಳಲ್ಲಿ ಅಥವಾ ಸಮುದ್ರ ತೀರದಲ್ಲಿ  ನಡೆಯುವದರಿಂದ ಆಗುವ ಉಪಯೋಗದ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ನೀವು ಪ್ರಕೃತಿಗೆ ಹತ್ತಿರವಿರುವದೇ ಇದಕ್ಕೆ ಮುಖ್ಯಕಾರಣ. ನೀವು ಪ್ರಕೃತಿಯೊಂದಿಗೆ ಹತ್ತಿರವಾಗಿದ್ದರೆ ನೀವು ಸಂತೋಷ ಮತ್ತು ಆರೋಗ್ಯವಾಗಿರುತ್ತೀರಿ ಎಂದೇ ಅರ್ಥ.  ಆದರೆ ನಮ್ಮ ಆಧುನಿಕ ಜೀವನಶೈಲಿ ಇಂತಹ ಸಂಪರ್ಕದಿಂದ ನಮ್ಮನ್ನು ಪ್ರತ್ಯೇಕಿಸುತ್ತದೆ.

ರಕ್ತದೊತ್ತಡ ಕಡಿಮೆಯಾಗುತ್ತದೆ:

ಮಣ್ಣಿನ ಮೇಲೆ ಬರಿಗಾಲಿನಿಂದ ನಡೆದಾಡುವದರಿಂದ ನಮಗೆ ತಾಜಾತನ, ಶಾಂತಿ ಹಾಗೂ ಸುರಕ್ಷತೆಯ ಅನುಭವಉಂಟಾಗುತ್ತದೆ. ಹೀಗಾಗಿ ರಕ್ತದೊತ್ತಡ ಮೇಲೆ ಇದರಿಂದ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಪ್ರಾಕೃತಿಕ ಚಿಕಿತ್ಸೆಗಳಲ್ಲಿ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರಲು 10-15 ನಿಮಿಷ ಬರಗಾಲಿನಿಂದ ನಡೆದಾಡುವ ಸಲಹೆ ನೀಡಲಾಗುತ್ತದೆ.

ನೋವು ಹಾಗೂ ಬಾವು ಕಡಿಮೆಯಾಗುತ್ತದೆ:

ನೆಲದಲ್ಲಿ ಒಂದು ವಿಶೇಷ ರೀತಿಯ ಶಕ್ತಿ ಇರುತ್ತದೆ. ವಿಜ್ಞಾನದ ಪ್ರಕಾರ ಬರಿಗಾಲಿನಿಂದ ನಡೆಯುವದು ಭೂಮಿಯ ಋಣಾತ್ಮಕ ಅಯಾನುಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನೇರ ಭೌತಿಕ ಸಂಪರ್ಕದಿಂದಾಗಿ ನೆಲದ ಮೇಲ್ಮೈಯಿಂದ ಎಲೆಕ್ಟ್ರಾನ್ ಗಳ ಅಪಾರ ಪೂರೈಕೆಯಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:

ನೆಲದಲ್ಲಿ ಕಂಡು ಬರುವ ಶಕ್ತಿಯೂತ ಸೂಕ್ಷ್ಮ ಜೀವಿಗಳು. ನೆಲದಲ್ಲಿ ಕಂಡುಬರುವ ಶಕ್ತಿಯುತ ಸೂಕ್ಷ್ಮ ಜೀವಿಗಳು ನೈಸರ್ಗಿಕ ರೀತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಸೂಕ್ಷ್ಮ ಜೀವಿಗಳು ಚರ್ಮ ಹಾಗೂ ಉಗುರುಗಳ ಮೂಲಕ ನಮ್ಮದೇಹವನ್ನು ಪ್ರವೇಶೀಸುತ್ತವೆ. ದೇಹವನ್ನು ತಲುಪಿದ ನಂತರ ಅವು ನಮ್ಮ ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳಿಗೆ ಒಂದು ಪ್ರಮಾಣವನ್ನು ನೀಡುತ್ತವೆ. ಕರುಳಿನಲ್ಲಿರುವ ಮೈಕ್ರೋಫ್ಲೊರಾ ಸೂಕ್ಷ್ಮಜೀವಿಯ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 ಲೇಖಕರು: ಶಗುಪ್ತಾ ಅ.ಶೇಖ 

Published On: 11 November 2020, 01:36 PM English Summary: health benefits of bare foot walking

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.