1. ಆರೋಗ್ಯ ಜೀವನ

ಉತ್ತಮ ಆರೋಗ್ಯಕ್ಕೆ ದ್ರಾಕ್ಷಿ ಸೇವನೆ ಅತ್ಯವಶ್ಯಕ

ದ್ರಾಕ್ಷಿಯನ್ನು ಸಾಮಾನ್ಯವಾಗಿ "ಹಣ್ಣುಗಳ ರಾಣಿ" ಎಂದು ಕರೆಯುತ್ತಾರೆ, ದ್ರಾಕ್ಷಿ ಎಂದ ಕೂಡಲೆ ನಮಗೆ ಹುಳಿಯ ನೆನಪಾಗಿ ಬಾಯಲ್ಲಿ ನೀರುರುವುದೇ ಇರದು.. ಇದೇ ದ್ರಾಕ್ಷಿಯ ಮೂಲ ಗುಣ ಎನ್ನಬಹುದು.  ದ್ರಾಕ್ಷಿಯಲ್ಲಿ ಕೆಂಪು, ಹಸಿರು ಹಾಗೂ ನೀಲಿ/ಕಪ್ಪು. ಈ ಅದ್ಭುತ ಮತ್ತು ಸ್ವಾದಿಷ್ಟವಾದ ಹಣ್ಣು ಇರುತ್ತದೆ. ಇತ್ತೀಚೆಗೆ  ಬೀಜರಹಿತ ದ್ರಾಕ್ಷಿಗಳು ಬರುತ್ತಿವೆ. ದ್ರಾಕ್ಷಿ ಜೆಲ್ಲಿ, ದ್ರಾಕ್ಷಿ ಜ್ಯಾಮ್, ದ್ರಾಕ್ಷಿ ರಸ ಒಣದ್ರಾಕ್ಷಿ ಮತ್ತು ವೈನ್ ಗಳ ರೂಪದಲ್ಲಿ ದ್ರಾಕ್ಷಿಯು ಸಿಗುತ್ತದೆ.

ಉರಿಯೂತ ಕಡಿಮೆ ಮಾಡುತ್ತದೆ ದ್ರಾಕ್ಷಿಯು ವಿಟಾಮಿನ್ ಸಿ ಅನ್ನು ಹೇರಳವಾಗಿ ಹೊಂದಿದೆ ಹಾಗೂ ತಕ್ಷಣ ಶಕ್ತಿಯನ್ನು ಒದಗಿಸುವ ಸಕ್ಕರೆಯ ಅಂಶವನ್ನು ಸಹ ಹೊಂದಿದೆ ಹಾಗೂ ಉರಿಯೂತ ಕಡಿಮೆ ಮಾಡುವ ಗುಣ ಕೂಡಾ ಇದಕ್ಕೆ ಇದೆ. ಇದು ಹೃದಯ ಮತ್ತು ಕರುಳಿನ ಕಾಯಿಲೆಗಳಿಂದ ರಕ್ಷಿಸುತ್ತದೆ.

ಮೂಳೆ ಆರೋಗ್ಯಕ್ಕೆ ಉತ್ತಮ: ಕ್ಯಾಲ್ಸಿಯಂ, ಮೆಗ್ನಿಸಿಯಂ, ರಂಜಕ, ವಿಟಮಿನ್ ಕೆ ಸೇರಿದಂತೆ ಮೂಳೆಗಳ ಆರೋಗ್ಯಕ್ಕೆ ದ್ರಾಕ್ಷಿಗಳು ಅನೇಕ ಪೋಷಕಾಂಶಗಳನ್ನು ನೀಡುತ್ತದೆ. ವಿಶೇಷವಾಗಿ ಸಂಧಿವಾತದ ರೋಗಲಕ್ಷಣವನ್ನು ಹೊಂದಿರುವ ಜನರಿಗೆ ದ್ರಾಕ್ಷಿಯು ಸಂಜೀವಿನಿ ಇದ್ದಂತೆ. ಕೀಲುಗಳ ನಮ್ಯತೆ ಮತ್ತು ಚಲನಶೀಲತೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ

ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ: ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವುದರಲ್ಲಿ ರೆಸ್ವೆರಾಟ್ರೋಲ್ ಸಹಾಯ ಮಾಡುತ್ತದೆ.  ದ್ರಾಕ್ಷಿಯಲ್ಲಿ ಸಂಯುಕ್ತಗಳು  ಮೆಮೊರಿ,  ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತವೆ.

ಕಣ್ಣುಗಳಿಗೆ ಉತ್ತಮ: ದ್ರಾಕ್ಷಿಯಲ್ಲಿ ರೆಸ್ವೆರಾಟ್ರೊಲ್ ಮತ್ತು ಲುಟೀನ್ ನಂತಹ ಹಲವಾರು ಸಂಯುಕ್ತಗಳಿವೆ.ಇದು ವಯಸ್ಸಿಗೆ ಸಂಬಂಧಿಸಿದ ಮ್ಯಾಕುಲರ್ ಡಿಜನರೇಶನ್, ಕಣ್ಣಿನ ಪೋರೆ ಮತ್ತು ಗ್ಲುಕೋಮಾ ಸೇರಿದಂತೆ ಸಾಮಾನ್ಯ ಕಣ್ಣಿನ ಕಾಯಿಲೆಗಳಿಂದ ರಕ್ಷಿಸುತ್ತದೆ. ರೆಟಿನಾಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ಗಳನ್ನು ಉಂಟುಮಾಡುತ್ತದೆ.

ಕೊಲೆಸ್ಟ್ರಾಲ್ ಕಡಿಮೆ: ದ್ರಾಕ್ಷಿಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ಬರದಂತೆ ತಡೆಯುತ್ತದೆ:  ದ್ರಾಕ್ಷಿಯಲ್ಲಿ ಅನೇಕ ಪ್ರಯೋಜನಕಾರಿ ಸಸ್ಯ ಸಂಯುಕ್ತಗಳಿವೆ, ಉದಾಹರಣೆಗೆ ರೆಸ್ವೆರಾಟ್ರೊಲ್,, ಇದು ಕರುಳಿನ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸ್ರರ್ ಗಳಿಂದ ರಕ್ಷಿಸುತ್ತದೆ.

ಲೇಖಕರು: ಶಗುಪ್ತಾ ಆ. ಶೇಖ

Published On: 28 October 2020, 07:59 PM English Summary: health benefit of grapes

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.