1. ಆರೋಗ್ಯ ಜೀವನ

ಸೇಬು ಹಣ್ಣಿನಲ್ಲಿ ಅಡಗಿರುವ ಆರೋಗ್ಯದ ಗುಟ್ಟು ನಿಮಗೆ ಗೊತ್ತೇ.......

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪ್ರತಿಯೊಬ್ಬರು ಸೇಬು ಹಣ್ಣನ್ನು ಇಷ್ಟ ಪಟ್ಟು ತಿನ್ನುತ್ತಾರೆ. ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎಂಬ ನಾಣ್ಣುಡಿ ನಮಗೆಲ್ಲಾ ಚಿರಪರಿಚಿತವಾಗಿದೆ. ಇದು ನಿಜವಾದರೂ ಇದನ್ನು ಪಾಲಿಸಿಕೊಂಡು ಹೋಗುವವರು ತುಂಬಾ ಕಡಿಮೆ. ಸೇಬಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಸೇಬಿನಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳಾಗಿರುವಂತಹ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಪೊಟಾಶಿಯಂ ಇದೆ. ಸೇಬು ಹಣ್ಣು ಸೇವಿಸುವುದರಿಂದ ನಿಮಗೆ ಗೊತ್ತಿಲ್ಲದ ಹಲವಾರು ಆರೋಗ್ಯಕರ ಪ್ರಯೋಜನಗಳ ಮಾಹಿತಿ ಇಲ್ಲಿದೆ.

ಮಧುಮೇಹದ ಸಾಧ್ಯತೆ ಕಡಿಮೆ:

ಸೇಬಿನಲ್ಲಿರುವ ಪಾಲಿಫೆನಾಲ್ ಆಂಟಿ ಆಕ್ಸಿಡೆಂಟುಗಳು ಮಧುಮೇಹ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತವೆ ಸೇಬುಗಳಲ್ಲಿನ ಫೃಕ್ಟೋಸ್ ಮತ್ತು ಪಾಲಿಫಿನಾಲ್ಗಗಳು ಚಯಾಪಚಯ ಸಮತೋಲವನ್ನು ಸುಧಾರಿಸುತ್ತದೆ. ದೇಹದಲ್ಲಿ ಸಕ್ಕರೆ ಹೀರಿಕೊಳ್ಳುವ ಪ್ರಮಾಣವನ್ನು ನಿಧಾನಗೊಳಿಸುತ್ತದೆ. ಸೇಬಿನ ಈ ಗುಣವು ಮಧುಮೇಹಿಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

ತೂಕ ಇಳಿಸಲು ಸಹಕಾರಿ:

ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವ ಕಾರಣ ಹೆಚ್ಚು ಹೊತ್ತಿನವರೆಗೆ ಹೊಟ್ಟೆ ತುಂಬಿದ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ಕೊಬ್ಬಿನಾಂಶ ಮತ್ತು ಸಕ್ಕರೆ ತುಂಬಿದ ಆಹಾರಗಳನ್ನು ಸೇವಿಸುವದನ್ನು ತಡೆಯುತ್ತದೆ.

ಸುಗಮ ಜೀರ್ಣಕ್ರಿಯೆ:

ಸೇಬಿನಲ್ಲಿ ಪೆಕ್ಟಿನ್ ಎಂಬ ಕರಗುವ ನಾರು ಇದೆ.. ಇದು ಒಂದು ರೀತಿಯ ಕರಗುವ ನಾರಿನಾಂಶ, ಜೀರ್ಣಾಂಗದಿಂದ ನೀರನ್ನು ಸೆಳೆಯುತ್ತದೆ. ಜೀರ್ಣಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕರುಳಿನ ಮೂಲಕ ಮಲವನ್ನು ತಳ್ಳುತ್ತದೆ. ಸೇಬುಗಳು ಮಾಲಿಕ್ ಆಮ್ಲವನ್ನು ಸಹ ಹೊಂದಿರುತ್ತವೆ.ಮಲಬದ್ಧತೆ ಮತ್ತು ಅತಿಸಾರವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮೂಳೆಗಳಿಗೆ ಸಹಕಾರಿ:

ಸೇಬಿನಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಸಂಯುಕ್ತಗಳು ಮೂಳೆಗಳ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ.  ಮೂಳೆಗಳನ್ನು ಬಲಪಡಿಸುವಲ್ಲಿ ಪರಿಣಾಮಕಾರಿ ಮತ್ತು ಒಟ್ಟಾರೆ ಮೂಳೆ  ಆರೋಗ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.

ಮೆದುಳಿನ ಆರೋಗ್ಯ ವೃದ್ಧಿಸುತ್ತದೆ:

ಸೇಬುಗಳು ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದು ಅಸಿಟೈಲ್ಕೋಲನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ನರಕೋಶಗಳು ಮತ್ತು ಮೆದುಳಿನ ನಡುವೆ ಬಲವಾದ ಸಂವಹನ ನಿರ್ಮಿಸಲು ಸಹಾಯ ಮಾಡುತ್ತದೆ.

ಒಸಡುಗಳಿಗೆ ಸಹಕಾರಿ:

ಸೇಬು ಲಾಲಾರಸ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಬಾಯಿಯಿಂದ  ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಸೇಬುಗಳ ನಾರಿನ ರಚನೆಯು ಒಸಡುಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಲೇಖಕರು: ಶಗುಪ್ತಾ ಅ ಶೇಖ

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.