ಚುಮು ಚುಮು ಚಳಿಯಲ್ಲಿ ಬೆಳಗ್ಗೆ ಎದ್ದಾಗ ಹಾಗೂ ಸಾಯಂಕಾಲ ಟಿ.ವಿ ನೋಡುತ್ತಾ ಬಿಸಿ ಬಿಸಿ ಚಹಾ ಕುಡಿಯುವ ಮಜಾನೇ ಬೇರೆ. ಅದರಲ್ಲಿ ಈಗ ಐಪಿಎಲ್ ಮ್ಯಾಚ್ ಸ್ಟಾರ್ಟ್ ಆಗಿದ್ದರಿಂದ ಕ್ರಿಕೇಟ್ ನೋಡುತ್ತಾ ಚಹಾ ಬದಲಾಗಿ ಬ್ಲ್ಟಾಕ್ ಟೀ ಕುಡಿದರೆ ಅದರಿಂದ ಆರೋಗ್ಯಕ್ಕೆ ಹಲವಾರು ಉಪಯೋಗವಿದೆ.
ಒಂದು ಕಪ್ ಟೀ ಕುಡಿದರೆ ಮನಸ್ಸು ಹೊಸ ಉಲ್ಲಾಸದೊಂದಿಗೆ ಇರುತ್ತದೆ ಎಂದು ಅನುಭವಸ್ಥರು ಹೇಳುತ್ತಲೇ ಬಂದಿದ್ದಾರೆ. ಅದಕ್ಕಾಗಿ ಸ್ವಲ್ಪ ಸುಸ್ತಾದರೆ ಅಥವಾ ಯಾರಾದರೂ ಸಂಬಂಧಿಕರು ಬಂದರೆ ಅವರಿಗೆ ಮೊದಲು ಕೊಡುವುದು ಚಹಾ. ಉಲ್ಲಾಸಮಯ ವಾತಾವರಣವಿರಲಿ ಎಂಬ ಕಾರಣಕ್ಕಾಗಿಯೇನೋ ಚಹಾ ಕುಡಿಸುತ್ತಾರೆ.
ಅದರಲ್ಲೂ ಚಹಾದ ಅಸಲಿ ರುಚಿ ಇರುವುದು ಖಾಲಿ ಚಹಾದಲ್ಲಿ. ಅಂದರೆ ಬ್ಲ್ಯಾಕ್ ಟೀಯಲ್ಲಿ. ಆದರೆ ಹೆಚ್ಚಿನವರು ಹಾಲು ಮಿಶ್ರಿತ ಟೀ ಮೊರೆ ಹೋಗುತ್ತಾರೆ. ಬ್ಲ್ಯಾಕ್ ಟೀ ಕುಡಿಯುವುದರಿಂದ ಆಗುವ ಪ್ರಯೋಜನಳೇನು ಎಂಬುದನ್ನು ತಿಳಿದುಕೊಳ್ಳೊಣವೇ? ಇಲ್ಲಿದೆ ಅದಕ್ಕೆಲ್ಲಾ ಮಾಹಿತಿ......
ಕಪ್ಪು ಚಹಾ ಕುಡಿಯುವದರಿಂದ ಆಗುವ ಲಾಭಗಳು:
ಕ್ಯಾಟೆಚೆನ್ ಆಂಟಿ ಆಕ್ಸಿಡೆಂಟಗಳು ಕಪ್ಪು ಚಹಾದಲ್ಲಿ ಕಂಡುಬರುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಬಾಯಿ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಇದರಲ್ಲಿ ಕಂಡುಬರುವ ಫ್ಲೋರೈಡ್ ವಾಸನೆಯೊಂದಿಗೆ ಹೋರಾಡುತ್ತದೆ. ಕುಳಿಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತದೆ. ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ. ಬೆವರಿನ ವಾಸನೆ ನಿವಾರಿಸುತ್ತದೆ.
ಪ್ರತಿ ದಿನ 1-2 ಕಪ್ ಚಹಾವನ್ನು ಕುಡಿಯುವದರಿಂದ ಟೈಪ್ ಟು ಡಯಾಬಿಟಿಸ್ ಅಪಾಯವನ್ನು 72% ಕಡಿಮೆ ಮಾಡುತ್ತದೆ. ಆರಂಭಿಕ ಮಧುಮೇಹ ಸಮಸ್ಯೆಗಳನ್ನು ಹೊಂದಿದ್ದರೆ ಅದನ್ನು ತೊಡೆದುಹಾಕಬಹುದು. ಅಧಿಕ ಕೊಲೆಸ್ಟ್ರಾಲ್, ಮೂತ್ರಪಿಂಡದ ಕಲ್ಲುಗಳು, ಆಸ್ಟಿಯೋಪೊರೊಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಲೇಖಕರು: ಶಗುಪ್ತಾ ಅ. ಶೇಖ
Share your comments