1. ಯಶೋಗಾಥೆ

ಅಚ್ಚರಿ ಆದರೂ ಸತ್ಯ! “ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತಯಾರಿಕೆ”; ಹೊಸ ಪ್ರಯೋಗದಲ್ಲಿ ಯಶಸ್ಸು ಕಂಡ ರೈತ!

Kalmesh T
Kalmesh T
Surprising though the truth! "Jaggery-making of watermelon"; Farmer Successful in New Experiment!

ಶಿವಮೊಗ್ಗ ಜಿಲ್ಲೆಯ ಹೊಸ ನಗರ ತಾಲ್ಲೂಕಿನ ನಿಟ್ಟೂರು ಗ್ರಾಮದ ಹೊಟೇಲ್‌ ಉದ್ಯಮಿಯೊಬ್ಬರು ಒಂದು ಹೊಸ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಇಲ್ಲಿದೆ ಕಲ್ಲಂಗಡಿ ಹಣ್ಣಿನ ಬೆಲ್ಲ ತಯಾರಿಸಿ ಯಶಸ್ವಿಯಾದ ಜಯರಾಮ ಶೆಟ್ಟಿ ಅವರ ಕುರಿತಾದ ಬರಹ.

ಕಲ್ಲಂಗಡಿ ಹಣ್ಣಿನ ರಸದಿಂದ ಬೆಲ್ಲ ತಯಾರಿಸಿ ತಮ್ಮ ವಿನೂತನ ಚಿಂತನೆಯಿಂದ ಇತರ ರೈತರಿಗೆ ಮಾದರಿಯಾಗಿದ್ದಾರೆ. ತಮ್ಮ 3 ಎಕರೆ ಜಮೀನಿನಲ್ಲಿ ಬೆಳೆದ ಕಲ್ಲಂಗಡಿಗೆ ಕಡಿಮೆ ಬೆಲೆ ಬಂದಿದ್ದರಿಂದ ಶೆಟ್ಟಿ ಬೇಸರಗೊಂಡಿದ್ದರು. ಇದರ ನಂತರ ಹಾಗೆ ಯೋಚಿಸುವಾಗ ರಸಭರಿತವಾದ ಕಲ್ಲಂಗಡಿಯಿಂದ ಬೆಲ್ಲ ತಯಾರಿಸುವ ಕುರಿತು ಹೊಳೆದಿದೆ. ಅದನ್‌ನು ಅಷ್ಟಕ್ಕೆ ಬಿಡದೆ ಕಾರ್ಯರೂಪಕ್ಕೂ ತಂದು ಯಶಸ್ವಿಯಾಗಿದ್ದಾರೆ. ಎಂಟು ಟನ್ ಹಣ್ಣು ಕೊಳೆಯುವುದನ್ನು ತಡೆಯಲು ಕಲ್ಲಂಗಡಿ ಹಣ್ಣಿನ ರಸದಿಂದ ಬೆಲ್ಲವನ್ನು ತಯಾರಿಸಲು ನಿರ್ಧರಿಸಿದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿರಿ:

#ರೈತರೊಬ್ಬರಿಂದ ಬೀಜರಹಿತ ಕಲ್ಲಂಗಡಿ ಕೃಷಿ ಪ್ರಯೋಗ! ವಿದೇಶದಿಂದ ನೋಡಲು ಬಂದ ಸಂಶೋಧಕರು!

ಬೆಳೆ ವೈವಿಧ್ಯೀಕರಣ: ಹೆಚ್ಚಿನ ಇಳುವರಿ ಕಂಡ ಸಾಸಿವೆ!

ಸಿದ್ಧವಾಯ್ತು ಕಲ್ಲಂಗಡಿ ಬೆಲ್ಲ!

ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಕಲ್ಲಂಗಡಿಯಿಂದ ಬೆಲ್ಲ ತಯಾರಿ ಪ್ರಯೋಗ ಯಶಸ್ವಿಯಾಗಿ ನಡೆದಿದ್ದು, ಕಲ್ಲಂಗಡಿ ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ. ಹೊಸನಗರ ತಾಲೂಕು ನಿಟ್ಟೂರು ಗ್ರಾಮದ ಹೊಟೇಲ್‌ ಉದ್ಯಮಿ ಜಯರಾಮ ಶೆಟ್ಟಿಯವರು ಕಲ್ಲಂಗಡಿ ಬಳಸಿ ರುಚಿಯಾದ ಜೋನಿ ಬೆಲ್ಲ ತಯಾರಿಸಿ ಕಲ್ಲಂಗಡಿಯ ಮತ್ತೂಂದು ರೂಪವನ್ನು ಪರಿಚಯಿಸಿದ್ದಾರೆ.

ಕೊರೊನಾ ಲಾಕ್‌ ಡೌನ್‌ ಪರಿಣಾಮ ಶೆಟ್ಟಿ ಅವರು ಬೆಳೆದ ಕಲ್ಲಂಗಡಿ ಹಣ್ಣುಗಳು ಮಾರಾಟವಾಗದೇ ಉಳಿದಾಗ ಬೆಲ್ಲ ತಯಾರಿಕೆ ಪ್ರಯೋಗಕ್ಕೆ ಮುಂದಾಗಿದ್ದಾರೆ. ಯಾವಾಗ ಕಲ್ಲಂಗಡಿ ಹಣ್ಣಿನ ಬೆಲ್ಲ ತುಂಬಾ ರುಚಿಯಾಗಿ ಕೈ ಸೇರಿತೋ ಆಗ ದೊಡ್ಡ ಮಟ್ಟದಲ್ಲಿ ಬೆಲ್ಲ ಉತ್ಪಾದನೆ ಮಾಡಿದ್ದಾರೆ.

GREEN HOUSE FARMING: ಹಸಿರು ಮನೆ ಕೃಷಿಗೆ ಬಂಪರ್.. ಅನ್ನದಾತರಿಗೆ ಭಾರೀ ಗಿಫ್ಟ್‌ ನೀಡಿದ ಸರ್ಕಾರ

ಇದೇ ಮೊದಲ ಬಾರಿಗೆ ಮಾನವನ ರಕ್ತದಲ್ಲೂ ಪತ್ತೆಯಾದ ಪ್ಲಾಸ್ಟಿಕ್‌..!

ಕಲ್ಲಂಗಡಿ ಹಣ್ಣನಿಂದ ಬೆಲ್ಲ ತಯಾರಿಸುವ ಬಗೆ

ಚೆನ್ನಾಗಿ ಹಣ್ಣಾಗಿರುವ ಕಲ್ಲಂಗಡಿ ಹಣ್ಣುಗಳ ಸಿಪ್ಪೆ ಬೀಜಗಳನ್ನೆಲ್ಲಾ ತೆಗೆದು ಅದನ್ನು ಜ್ಯೂಸ್‌ ಮಾಡಿ ಸೋಸಿ ಬೆಲ್ಲ ಕಾಯಿಸಲು ಬಳಸುವ ದೊಡ್ಡ ಕೊಪ್ಪರಿಗೆಗೆ ಹಾಕಲಾಗುತ್ತದೆ. ಬಳಿಕ ಒಂದೇ ಸಮನಾದ ಬೆಂಕಿ ಉರಿಯಲ್ಲಿ ನಾಲ್ಕು ಗಂಟೆ ಕಾಲ ಕುದಿಸಿದಾಗ ನೀರಿನ ಅಂಶ ಆವಿಯಾಗಿ ಬೆಲ್ಲದ ರೂಪ ಬರಲಾರಂಭಿಸುತ್ತದೆ.

ಯಾವಾಗ ಜ್ಯೂಸ್‌ ನಿಧಾನವಾಗಿ ಪಾಕದಂತೆ ಆಗಲಾರಂಭಿಸುತ್ತದೋ ಆಗ ಬೆಂಕಿಯ ಉರಿ ಕಡಿಮೆ ಮಾಡಿ ಯಾವ ಹದಕ್ಕೆ ಬೆಲ್ಲ ಬೇಕೋ ಆ ಹದವನ್ನು ನೋಡಿ ಒಲೆ ಮೇಲಿಂದ ಕೊಪ್ಪರಿಗೆಯನ್ನು ಇಳಿಸಬೇಕು. ಕಲ್ಲಂಗಡಿ ಬೆಲ್ಲ ತಯಾರಾಗಿರುತ್ತದೆ. ಜೋನಿ ಬೆಲ್ಲದಂತೆ ಕಲ್ಲಂಗಡಿ ಬೆಲ್ಲವೂ ಬಹಳ ರುಚಿ ಇರಲಿದೆ.

ಒಂದು ಟನ್‌ ಕಲ್ಲಂಗಡಿಯಿಂದ 700 ಲೀಟರ್‌ ಜ್ಯೂಸ್‌ ಸಿಗಲಿದೆ. ಅದನ್ನು ಕೊಪ್ಪರಿಗೆಯಲ್ಲಿ ಹಾಕಿ ಮೂರೂವರೆಯಿಂದ ನಾಲ್ಕು ಗಂಟೆ ಕುದಿಸಿದರೆ 80 ರಿಂದ 85 ಕೆಜಿ ಬೆಲ್ಲ ಸಿಗುತ್ತದೆ. ಲ್ಯಾಬ್‌ ಟೆಸ್ಟ್‌ ನಲ್ಲೂ ಇದು ಪಾಸ್‌ ಆಗಿದೆ. ಸರಕಾರ ಇದಕ್ಕೆ ಅವಕಾಶ ನೀಡಿದರೆ ಕಲ್ಲಂಗಡಿ ಬೆಳೆಗಾರರು ನಿಶ್ಚಿಂತೆಯಿಂದ ಬೆಳೆ ಬೆಳೆಯಬಹುದು.

ನೈಸರ್ಗಿಕ ಕೃಷಿ ಮೂಲಕ ಬೆಲ್ಲದ ನಿಜ ಸಿಹಿ ಸವಿದ ಯುವ ಕೃಷಿಕ ಶ್ರೀನಿಧಿ

ಬರೀ 24 ಗುಂಟೆ ಪೇರಲ ಬೆಳೆದು ವರ್ಷಕ್ಕೆ 25 ಲಕ್ಷ ಆದಾಯ ಗಳಿಸುತ್ತಿರುವ ಯವ ರೈತ!

Published On: 27 April 2022, 04:32 PM English Summary: Surprising though the truth! "Jaggery-making of watermelon"; Farmer Successful in New Experiment!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.