ವಿಂಬಲ್ಡನ್ ಜಾಗತಿಕ ಟೂರ್ನಿ ನಡೆಯುತ್ತಿದೆ. ಇದೀಗ ವಿಂಬಲ್ಡನ್ ಗ್ರ್ಯಾನ್ ಸ್ಲಾಂನ ಪ್ರೀ ಕ್ವಾರ್ಟರ್ ಫೈನಲ್‌ಗೆ ರೋಹನ್ ಬೋಪಣ್ಣ ಜೋಡಿ ಪ್ರವೇಶಿಸಿದೆ.
ಈ ಸಂದರ್ಭದಲ್ಲಿ ವಿಂಬಲ್ಡನ್‌ನ ಕನ್ನಡದ ಶೀರ್ಷಿಕೆ ಸಾಕಷ್ಟು ವೈರಲ್ ಆಗಿದೆ.
ವಿಂಬಲ್ಡನ್ ಯಾರಿಗೆ ಗೊತ್ತಿಲ್ಲ ಹೇಳಿ ಟೆನ್ನಿಸ್ ಪ್ರಿಯರಿಗೆ ಹಬ್ಬ ನೀಡುವ ಕ್ರೀಡಾಕೂಟವಿದು.
ಇದೀಗ ವಿಂಬಲ್ಡನ್ ಕನ್ನಡಿಗರಿಗೆ ಖುಷಿಯಾಗುವ ಕೆಲಸವೊಂದನ್ನು ಮಾಡಿದೆ.
ವಿಂಬಲ್ಡನ್ ತನ್ನ ಫೇಸ್‌ಬುಕ್ ಅಧಿಕೃತ ಖಾತೆಯಲ್ಲಿ ಪ್ರಿ ಕ್ವಾರ್ಟರ್‌ಗೆ ಅರ್ಹತೆ ಪಡೆದಿರುವ ಕನ್ನಡಿಗ ರೋಹನ್ ಬೋಪಣ್ಣ ಅವರಿಗೆ ಶುಭಕೋರಿದ್ದು,
ಅವರ ಚಿತ್ರದೊಂದಿಗೆ ಭಾರತದ ಸೂಪರ್ ಸ್ಟಾರ್ ಎಂದು ಕನ್ನಡದಲ್ಲೇ ಬರೆದಿದೆ.
ಈ ಪೋಸ್ಟ್ ಇದೀಗ ಕನ್ನಡಿಗರ ಮನಗೆದಿದ್ದು, ಸಾವಿರಾರು ಜನ ಲೈಕ್ ಮತ್ತು ಶೇರ್ ಮಾಡಿದ್ದಾರೆ.
ವಿಂಬಲ್ಡನ್ ಗ್ರ್ಯಾನ್ ಸ್ಲಾಂನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಅನ್ನು ರೋಹನ್ ಬೋಪಣ್ಣ ಜೋಡಿ ಪ್ರವೇಶಿಸಿದೆ.
ಇದೇ ಸಂದರ್ಭದಲ್ಲಿ ವಿಂಬಲ್ಡನ್ ಕನ್ನಡದಲ್ಲಿ ಶೀರ್ಷಿಕೆ ಬರೆದಿರುವುದು ಕನ್ನಡಿಗರ ಖುಷಿಯನ್ನು ದುಪ್ಪಟ್ಟು ಮಾಡಿದೆ.
ಇನ್ನು ವಿಂಬಲ್ಡನ್‌ನಲ್ಲಿ ರೋಹನ್ ಬೋಪಣ್ಣ ಜೋಡಿಯೊಂದಿಗೆ ಕ್ವಾರ್ಟರ್ ಫೈನಲ್‌ಗೆ ನೋವಾಕ್ ಜೋಕೋವಿಚ್ ತಲುಪಿದೆ.
ಇನ್ನು ಭಾರತದ ಹಿರಿಯ ಟೆನಿಸಿಗರಾದ0 ರೋಹನ್ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ
ಸಂದರ್ಭದಲ್ಲಿ ವಿಂಬಲ್ಡನ್ ಕನ್ನಡದಲ್ಲಿ ಟ್ವೀಟ್ ಮಾಡಿರುವುದಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಂಬಲ್ಡನ್ ತನ್ನ ಫೇಸ್‌ಬುಕ್ ಮತ್ತು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕನ್ನಡದಲ್ಲೇ ರೋಹನ್ ಬೋಪಣ್ಣ ಅವರನ್ನು
ಭಾರತದ ಸೂಪರ್ ಸ್ಟಾರ್ ಎಂದಿದೆ. ಈ ಬರಹಕ್ಕೆ ಕಮೆಂಟ್ ಮಾಡಿರುವ ಹಲವು ಕನ್ನಡಿಗರು ಕನ್ನಡದಲ್ಲಿ ಬರೆದದ್ದಕ್ಕೆ ಧನ್ಯವಾದ,
ಥ್ಯಾಂಕ್ಸ್ ವಿಂಬಲ್ಡನ್ ಎಂದಿದ್ದಾರೆ. ಆಹಾ ನಮ್ಮ ಕನ್ನಡ ಎನ್ನುವ ಕಾಮೆಂಟ್‌ಗಳ ಸುರಿ ಮಳೆಯೂ ಆಗಿದೆ.
ಇನ್ನು ಸೋಮವಾರವಷ್ಟೇ ಪುರುಷರ ಡಬಲ್ಸ್ ವಿಭಾಗದಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಥ್ಯೂ ಎಬ್ಡೆನ್
ಜೋಡಿ ಮೂರನೇ ಸುತ್ತಿಗೆ ಕಾಲಿಟ್ಟಿದೆ.
            2ನೇಯ ಸುತ್ತಿನಲ್ಲಿ ಅವರು ಯುನೈಟೆಡ್ ಕಿಂಗ್‌ಡಮ್‌ನ ಜೋಡಿಯನ್ನು 7-5, 6-3ರ ನೇರ ಸೆಟ್‌ಗಳ ಅಂತರದಲ್ಲಿ ಸೋಲಿಸಿದ್ದರು.
Photo Courtesy 
Facebook.com/Rohan.Bofors.Bopanna  
Wimbledon 
                
                
                                    
                                        
                                        
                        
                        
                        
                        
                        
        
Share your comments