1. ಸುದ್ದಿಗಳು

ರೈತರಿಗೆ ಸಿಹಿಸುದ್ದಿ: ರೈತ ಉತ್ಪಾದಕ ಸಂಸ್ಥೆ; ಪ್ರಾಥಮಿಕ ಕೃಷಿ ಸಾಲ ಸಂಘ ಪ್ರಕ್ರಿಯೆ ಚುರುಕು!

Hitesh
Hitesh
Good News for Farmers: Farmers Producer Organization; Primary Agricultural Credit Union process faster!
ರೈತ ಉತ್ಪಾದಕ ಸಂಸ್ಥೆಗಳ (ಎಫ್‌.ಪಿ.ಒ.) ಮೂಲಕ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (ಪಿ.ಎ.ಸಿ.ಎಸ್.) ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ರೈತ ಉತ್ಪಾದಕ ಸಂಸ್ಥೆಗಳ (ಎಫ್‌.ಪಿ.ಒ.) ಮೂಲಕ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (ಪಿ.ಎ.ಸಿ.ಎಸ್.) ಬಲಪಡಿಸುವ ನಿಟ್ಟಿನಲ್ಲಿ

ನವದೆಹಲಿಯಲ್ಲಿ ಜುಲೈ 14 ರಂದು ಒಂದು ದಿನದ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ.

ಈ ಸಮಾವೇಶವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಉದ್ಘಾಟಿಸಲಿದ್ದಾರೆ.

ರೈತ ಉತ್ಪಾದಕ ಸಂಸ್ಥೆಗಳ (ಎಫ್‌.ಪಿ.ಒ.) ಮೂಲಕ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (ಪಿ.ಎ.ಸಿ.ಎಸ್.)

ಬಲಪಡಿಸುವ ಮಾರ್ಗಗಳನ್ನು ಚರ್ಚಿಸುವ ಉದ್ದೇಶವನ್ನು ಈ ಸಮಾವೇಶ ಹೊಂದಿದೆ.

ಪ್ರಧಾನಮಂತ್ರಿ  ನರೇಂದ್ರ ಮೋದಿಯವರ ಸಹಕಾರ್ ಸೇ ಸಮೃದ್ಧಿಯ ದೃಷ್ಟಿಕೋನವನ್ನು ಸಾಕಾರಗೊಳಿಸಲು

ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ಪ್ರಯತ್ನದಿಂದ ಇತ್ತೀಚೆಗೆ ಸಹಕಾರಿ ವಲಯದಲ್ಲಿ

1100 ಹೊಸ ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.)ಗಳನ್ನು ರಚಿಸಲು ನಿರ್ಧರಿಸಲಾಗಿದೆ. 

ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.)ಯೋಜನೆಯಡಿ ಪ್ರತಿ ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.)ಗಳಿಗೆ ರೂ. 33 ಲಕ್ಷ ಆರ್ಥಿಕ ನೆರವು,

ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.)ಗಳನ್ನು ಉತ್ತೇಜಿಸಲು ಮತ್ತು ಕ್ಲಸ್ಟರ್ ಆಧಾರಿತ ವ್ಯಾಪಾರ ಸಂಸ್ಥೆಗಳಿಗೆ (ಸಿ.ಬಿ.ಬಿ.ಒ.) ಪ್ರಾರಂಭಿಕ ಕಲಿಕೆಯ

ಹಂತದ ತಯಾರಿ ಮಾಡಲು ಪ್ರತಿ ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.) ಗಳಿಗೆ ರೂ. 25 ಲಕ್ಷ ನೀಡಲಾಗುತ್ತದೆ. 

ಕೃಷಿಯನ್ನು ಸುಸ್ಥಿರಗೊಳಿಸುವಲ್ಲಿ ಮತ್ತು ಜೀವನೋಪಾಯವನ್ನು ಉತ್ತೇಜಿಸುವಲ್ಲಿ ಹಾಗೂ ಕೃಷಿಯ ಮೇಲೆ ಅವಲಂಬಿತರಾಗಿರುವವರ

ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.)ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.)ಗಳು ಸಣ್ಣ ಮತ್ತು ಕನಿಷ್ಠ ಕೃಷಿಯ ರೈತರು/ಉತ್ಪಾದಕರಿಗೆ ಉತ್ತಮ ಬೆಲೆಗಳನ್ನು ಪಡೆಯಲು,

ಜುಲೈ 14, 2023 ರಂದು ನವದೆಹಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು "“ರೈತ ಉತ್ಪಾದಕ ಸಂಸ್ಥೆಗಳ

(ಎಫ್.ಪಿ.ಒ.) ಮೂಲಕ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (ಪಿ.ಎ.ಸಿ.ಎಸ್.) ಬಲಪಡಿಸುವ" ಒಂದು ದಿನದ ಬೃಹತ್ ಸಮಾವೇಶವನ್ನು

ಉದ್ಘಾಟಿಸಲಿದ್ದಾರೆ. ಈ ಸಮಾವೇಶವು ರೈತ ಉತ್ಪಾದಕ ಸಂಸ್ಥೆಗಳ (ಎಫ್.ಪಿ.ಒ.) ಮೂಲಕ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (ಪಿ.ಎ.ಸಿ.ಎಸ್.)

ಬಲಪಡಿಸುವ ಬಲಪಡಿಸುವ ಮಾರ್ಗಗಳನ್ನು ಚರ್ಚಿಸುವ ಗುರಿಯನ್ನು ಹೊಂದಿದೆ. 

ಸಮ್ಮೇಳನದಲ್ಲಿ ಕ್ಷೇತ್ರದ ತಜ್ಞರು ಮತ್ತು ದೇಶಾದ್ಯಂತದ ರೈತ ಉತ್ಪಾದಕ ಸಂಸ್ಥೆಗಳ(ಎಫ್.ಪಿ.ಒ.)ಗಳ ಸದಸ್ಯರ ಭಾಗವಹಿಸಲಿದ್ದಾರೆ.

ಕೇಂದ್ರ ಸಹಕಾರ ಸಚಿವಾಲಯದ ಸಹಯೋಗದೊಂದಿಗೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್‌.ಸಿ.ಡಿ.ಸಿ.) ಈ ಬೃಹತ್ ಸಮಾವೇಶವನ್ನು ಆಯೋಜಿಸುತ್ತಿದೆ.

ರೈತ ಉತ್ಪಾದಕ ಸಂಸ್ಥೆ(ಎಫ್.ಪಿ.ಒ.)ಗಳು ರೈತರಿಂದ ರೂಪುಗೊಂಡ ಸಾಮೂಹಿಕ ಘಟಕಗಳಾಗಿದ್ದು, ಸಂಪನ್ಮೂಲಗಳನ್ನು ಒಟ್ಟುಗೂಡಿಸಲು

ಮತ್ತು ಅವರ ಮಾತುಕತೆ(ಚೌಕಾಶಿ) ಸಾಮರ್ಥ್ಯವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ, ಹಾಗೂ ಕೃಷಿ ರೂಪಾಂತರದ ಪ್ರಮುಖ ವ್ಯವಸ್ಥೆಗಳಲ್ಲಿ ಒಂದಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ “ಸಹಕಾರ್ ಸೇ ಸಮೃದ್ಧಿ”ಯ ದೃಷ್ಟಿಯನ್ನು ಸಾಕಾರಗೊಳಿಸುವ ಸಲುವಾಗಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್

ಶಾ ಅವರ ಪ್ರಯತ್ನದಿಂದ ಇತ್ತೀಚೆಗೆ ಸಹಕಾರಿ ಕ್ಷೇತ್ರದಲ್ಲಿ “1100 ಹೊಸ ರೈತ ಉತ್ಪಾದಕ ಸಂಸ್ಥೆಗಳ(ಎಫ್.ಪಿ.ಒ.)”ಗಳನ್ನು ರಚಿಸಲು

ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.  

ಕೇಂದ್ರ ಸಹಕಾರ ಸಚಿವಾಲಯದ ಪ್ರಮುಖ ಉಪಕ್ರಮದೊಂದಿಗೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಇತ್ತೀಚೆಗೆ ರಾಷ್ಟ್ರೀಯ

ಸಹಕಾರ ಅಭಿವೃದ್ಧಿ ನಿಗಮ (ಎನ್‌.ಸಿ.ಡಿ.ಸಿ.)ಕ್ಕೆ ಹೆಚ್ಚುವರಿ ಹಣಕಾಸು ವ್ಯವಸ್ಥೆಗಳನ್ನು ಮಂಜೂರು ಮಾಡಿದೆ.

ಸಣ್ಣ ಮತ್ತು ಅತಿಸಣ್ಣ ರೈತರನ್ನು ಹಾಗೂ ಸಹಕಾರಿ ಕ್ಷೇತ್ರವನ್ನು ಉತ್ತೇಜಿಸಲು ಸಹಕಾರಿ ವಲಯದಲ್ಲಿ 1100 ರೈತ ಉತ್ಪಾದಕ ಸಂಸ್ಥೆಗಳ(ಎಫ್.ಪಿ.ಒ.)ಗಳನ್ನು

ರೂಪಿಸಲು ಮತ್ತು ಸಮಗ್ರ ಬೆಂಬಲವನ್ನು ಒದಗಿಸಲು,  ಯೋಜನೆಯಡಿಯಲ್ಲಿ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (ಪಿ.ಎ.ಸಿ.ಎಸ್.) ಗಳನ್ನು

ಈ ಮೂಲಕ ಬಲಪಡಿಸಲಾಗುತ್ತದೆ.

ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.) ಯೋಜನೆಯಡಿ ಪ್ರತಿ ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.)ಗಳಿಗೆ ರೂ. 33 ಲಕ್ಷ ಆರ್ಥಿಕ ನೆರವು,

ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.)ಗಳನ್ನು ಉತ್ತೇಜಿಸಲು ಮತ್ತು ಕ್ಲಸ್ಟರ್ ಆಧಾರಿತ ವ್ಯಾಪಾರ ಸಂಸ್ಥೆಗಳಿಗೆ (ಸಿ.ಬಿ.ಬಿ.ಒ.) ಪ್ರಾರಂಭಿಕ

ಕಲಿಕೆಯ ಹಂತದ ತಯಾರಿ ಮಾಡಲು ಪ್ರತಿ ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.)ಗಳಿಗೆ ರೂ. 25 ಲಕ್ಷ ನೀಡಲಾಗುತ್ತದೆ.

ಕೃಷಿಯನ್ನು ಸುಸ್ಥಿರವಾಗಿಸಲು ಮತ್ತು ಜೀವನೋಪಾಯವನ್ನು ಉತ್ತೇಜಿಸುವಲ್ಲಿ ಮತ್ತು ಕೃಷಿಯ ಮೇಲೆ ಅವಲಂಬಿತರಾಗಿರುವವರ ಒಟ್ಟಾರೆ

ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.)ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಹೇಳಲಾಗುತ್ತದೆ.

]ಸಣ್ಣ ಮತ್ತು ಕನಿಷ್ಠ ಕೃಷಿಯ ರೈತರು/ಉತ್ಪಾದಕರು ಉತ್ತಮ ಬೆಲೆಗಳನ್ನು ಪಡೆಯಲು, ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು

ಮತ್ತು ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸಲು ಸಂಘ ಸಹಾಯ ಮಾಡಲಿದೆ.

ಉತ್ಪಾದನಾ ಒಳಹರಿವಿನ ಪೂರೈಕೆಯಂತಹ ತಮ್ಮ ವ್ಯಾಪಾರ ವ್ಯಾಪ್ತಿಯ ಚಟುವಟಿಕೆಗಳನ್ನು ವಿಸ್ತರಿಸಲು, ರೈತರಿಗೆ  ಕೃಷಿ ಉಪಕರಣಗಳಾದ ಕಲ್ಟಿವೇಟರ್,

ಟಿಲ್ಲರ್, ಹಾರ್ವೆಸ್ಟರ್, ಇತ್ಯಾದಿ ಮತ್ತು ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಶುಚಿಗೊಳಿಸುವಿಕೆ, ವಿಶ್ಲೇಷಣೆ, ವಿಂಗಡಣೆ, ಗ್ರೇಡಿಂಗ್, ಪ್ಯಾಕಿಂಗ್,

ಸಂಗ್ರಹಣೆ, ಸಾಗಣೆ ಇತ್ಯಾದಿಗಳ ಸೌಲಭ್ಯ ಪಡೆಯಲು ಅನುವು ಮಾಡಿಕೊಡಲು ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.) ಯೋಜನೆಯಲ್ಲಿ

ಪ್ರಾಥಮಿಕ ಕೃಷಿ ಸಾಲ ಸಂಘ (ಪಿ.ಎ.ಸಿ.ಎಸ್.)ಗಳ ಏಕೀಕರಣಕ್ಕಾಗಿ ಸರ್ಕಾರವು ಒತ್ತಾಯಿಸುತ್ತಿದೆ.

ಪ್ರಾಥಮಿಕ ಕೃಷಿ ಸಾಲ ಸಂಘ(ಪಿ.ಎ.ಸಿ.ಎಸ್.)ಗಳು ದೇಶದಾದ್ಯಂತ ಸುಮಾರು 13 ಕೋಟಿ ರೈತರ ಬೃಹತ್ ಸದಸ್ಯರನ್ನು ಹೊಂದಿದೆ, ಅವರು ಪ್ರಾಥಮಿಕವಾಗಿ

ಅಲ್ಪಾವಧಿಯ ಸಾಲ ಮತ್ತು ಬೀಜಗಳು, ರಸಗೊಬ್ಬರಗಳು ಇತ್ಯಾದಿಗಳ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ, ದೇಶದ ರೈತರ

ಸಂಖ್ಯೆಯಲ್ಲಿ 86% ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಹೆಚ್ಚು ಸಣ್ಣ ಮತ್ತು ಕನಿಷ್ಠ ಕೃಷಿಯ ರೈತರಿದ್ದಾರೆ.

ಈ ರೈತರಿಗೆ ಸುಧಾರಿತ ತಂತ್ರಜ್ಞಾನ, ಸಾಲ, ಉತ್ತಮ ಇನ್‌ಪುಟ್ ಮತ್ತು ಉತ್ತಮ ಗುಣಮಟ್ಟದ ಸರಕುಗಳನ್ನು ಉತ್ಪಾದಿಸಲು ಪ್ರೋತ್ಸಾಹಿಸಲು ಹೆಚ್ಚಿನ

ಮಾರುಕಟ್ಟೆಗಳಿಗೆ ಪ್ರವೇಶವನ್ನು ಒದಗಿಸುವ ಅವಶ್ಯಕತೆಯಿರುವುದರಿಂದ, ಸರ್ಕಾರವು ಈಗಾಗಲೇ ಪ್ರಾಥಮಿಕ ಕೃಷಿ ಸಾಲ ಸಂಘ(ಪಿ.ಎ.ಸಿ.ಎಸ್.)ಗಳಿಗೆ ಸಂಬಂಧಿಸಿದ

ರೈತರನ್ನು ರೈತ ಉತ್ಪಾದಕ ಸಂಸ್ಥೆ(ಎಫ್‌.ಪಿ.ಒ.)ಗಳನ್ನು ರಚಿಸಲು ಪ್ರೋತ್ಸಾಹಿಸಲು ಕ್ರಮಗಳನ್ನು ಕೈಗೊಂಡಿದೆ.

ಈ ನಿಟ್ಟಿನಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಕೇಂದ್ರೀಯ ವಲಯದ ಯೋಜನೆ

"10,000 ರೈತ ಉತ್ಪಾದಕ ಸಂಸ್ಥೆಗಳ (ಎಫ್‌.ಪಿ.ಒ.)” ರಚನೆ ಮತ್ತು ಉತ್ತೇಜನವನ್ನು ಪ್ರಾರಂಭಿಸಲಾಯಿತು.

Good News for Farmers: Farmers Producer Organization; Primary Agricultural Credit Union process faster!

ಸಹಕಾರ ಸಚಿವಾಲಯದ ಅಡಿಯಲ್ಲಿ “ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್‌.ಸಿ.ಡಿ.ಸಿ.)”ಯು ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು,

ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಸುಗ್ಗಿಯ ನಂತರದ ಸೌಲಭ್ಯಗಳನ್ನು ಸ್ಥಾಪಿಸಲು ಸಹಕಾರಿಗಳನ್ನು ಯೋಜಿಸಲು,

ಉತ್ತೇಜಿಸಲು, ಪ್ರೋತ್ಸಾಹಿಸಲು ಮತ್ತು ಹಣಕಾಸು ಒದಗಿಸುತ್ತದೆ.

ಹಣಕಾಸು ವರ್ಷ 2022-23 ಅವಧಿಯಲ್ಲಿ, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್‌.ಸಿ.ಡಿ.ಸಿ.)

ಸಂಸ್ಥೆಯು ಈಗಾಗಲೇ ರೂ. 41,031.39 ಕೋಟಿ ಮೊತ್ತವನ್ನು ಕೃಷಿ ಸಂಸ್ಕರಣೆ, ದುರ್ಬಲ ವರ್ಗಗಳು, ಸಹಕಾರಿಗಳ

ಗಣಕೀಕರಣ, ಸೇವೆ, ಸಾಲ ಮತ್ತು ಯುವ ಸಹಕಾರ ಸಂಘಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗಾಗಿ ವಿಲೇವಾರಿ ಮಾಡಿದೆ. 

Photo Source: pexels.com 

Published On: 11 July 2023, 02:39 PM English Summary: Good News for Farmers: Farmers Producer Organization; Primary Agricultural Credit Union process faster!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.