1. ಸುದ್ದಿಗಳು

ಕರ್ನಾಟಕದಲ್ಲಿ ನಿಲ್ಲದ ಬರ, ಪ್ರವಾಹ ಕಾರಣವೇನು, ಬರ ನಿರಂತರವೇ ?

Hitesh
Hitesh
ಕರ್ನಾಟಕದಲ್ಲಿ ಸುದೀರ್ಘ ಬರ , ಏಕಾಏಕಿ ಪ್ರವಾಹ ಇದಕ್ಕೆ ಕಾರಣವೇನು

ಕರ್ನಾಟಕಕ್ಕೆ ಈ ಬಾರಿ ಬರದ ಬರ ಸಿಡಿಲು ಎದುರಾಗಿದೆ. ಮುಂಗಾರು ಕೈಹಿಡಿಯದೆ ರೈತರು ಸಂಕಷ್ಟದಲ್ಲಿದ್ದಾರೆ. ಅಂಕಿ- ಅಂಶಗಳನ್ನು ನೋಡಿದರೆ, ಕರ್ನಾಟಕ ಮುಂದಿನ ದಿನಗಳಲ್ಲೂ ಬರದ ಸವಾಲು ಎದುರಿಸುವಂತ ಪರಿಸ್ಥಿತಿ ಇದೆ.

ಪ್ರಸಕ್ತ ಸಾಲಿನಲ್ಲಿ ಮುಂಗಾರು ರೈತರ ಕೈಹಿಡಿದಿಲ್ಲ. ಹನಿಹನಿ ನೀರಿಗೂ ಹಾಹಾಕರಪಡುವ ಪರಿಸ್ಥಿತಿಯಲ್ಲಿ ನಾವಿದ್ದೇವೆ.

ಆದರೆ, Network of rural and agrarian studiesನ ಅಧ್ಯಯನದ ವರದಿ ಹಾಗೂ ಉಲ್ಲೇಖಿತ ಅಂಕಿ- ಅಂಶಗಳನ್ನು ನೋಡಿದರೆ,

ಕರ್ನಾಟಕ ಮುಂದಿನ ವರ್ಷಗಳಲ್ಲಿಯೂ ಬರದ ಸವಾಲನ್ನು ಎದುರಿಸಬೇಕೇ ಎನ್ನುವ ಆತಂಕ ಮೂಡುತ್ತದೆ.

ಈ ಆತಂಕಕ್ಕೆ ಮುಖ್ಯ ಕಾರಣ ಕಳೆದ ಎರಡು ದಶಕದ ಅವಧಿಯಲ್ಲಿ ಕೇವಲ ಮೂರು ವರ್ಷಗಳಲ್ಲಿ ಮಾತ್ರ ಸಾಮಾನ್ಯ ಮಳೆಯಾಗಿರುವುದು. 

ಕರ್ನಾಟಕದಲ್ಲಿ ಬರ  

ಭಾರತದಲ್ಲಿ ರಾಜಸ್ತಾನವನ್ನು ಹೊರತುಪಡಿಸಿದರೆ, ಹೆಚ್ಚು ಬರಗಾಲಕ್ಕೀಡಾಗುವುದು ನಮ್ಮ ಕರ್ನಾಟಕ. ಕರ್ನಾಟಕದ ಶೇ.80 ಭೂಭಾಗ ಬರಕ್ಕೆ ತುತ್ತಾಗುತ್ತದೆ.

ಇನ್ನು ಇತ್ತೀಚಿನ ವರ್ಷಗಳಲ್ಲಿ ಬರ ಮರುಕಳಿಸುತ್ತಲ್ಲೇ ಇದೆ. ಅದರ ಕಾಲವಧಿಯೂ ಹೆಚ್ಚಾಗುತ್ತಿದೆ.

2001ರಿಂದ 2019ರ ನಡುವೆ 2005,2010 ಹಾಗೂ 2017ರಲ್ಲಿ ಅಂದರೆ, ಕೇವಲ ಮೂರು ವರ್ಷಗಳಲ್ಲಿ ಮಾತ್ರ ಸಾಮಾನ್ಯ ಮಳೆಯಾಗಿದೆ.

ಇನ್ನುಳಿದ 15 ವರ್ಷಗಳು ಕರ್ನಾಟಕ ಬರವನ್ನೇ ಕಂಡಿದೆ. ಎರಡು ದಶಕದಲ್ಲಿ 15 ವರ್ಷಗಳು ಬರಪೀಡಿತವಾಗಿತ್ತು ಎನ್ನುವುದನ್ನು

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯು ಉಲ್ಲೇಖಿಸಿದೆ.   

ಇನ್ನು ಭಾರತದ ಇನ್ನುಳಿದ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಹವಾಮಾನ ತುರ್ತುಪರಿಸ್ಥಿತಿ ಇದೆ.

ದೇಶದ ಇತರ ಭಾಗಗಳಂತೆ ಕರ್ನಾಟಕದಲ್ಲಿಯೂ ತೀವ್ರವಾಗಿ ಹವಾಮಾನ ಬದಲಾಗುತ್ತಿದ್ದು, ಅದರ ದುಷ್ಪರಿಣಾಮ ಎದುರಿಸುವಂತಾಗಿದೆ.

Network of rural and agrarian studies ಉಲ್ಲೇಖಿಸಿರುವಂತೆ ಕಳೆದ ನಾಲ್ಕು ದಶಕದ ಅಂದರೆ 1960-2018ರ ಅಂಕಿ-ಅಂಶ ಗಮನಿಸಿದರೆ,

ಮಳೆ ಬೀಳುವುದರಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ.  ರಾಜ್ಯದ ಹೆಚ್ಚಿನ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ.

ಆದರೆ, ಶಿವಮೊಗ್ಗ, ಹಾಸನ, ಕೋಲಾರ, ಮೈಸೂರು, ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಮಳೆಯಾಗುತ್ತಿದೆ.

ಇದಕ್ಕೆ ತದ್ವಿರುದ್ಧವಾಗಿ ಕಲಬುರಗಿ, ಯಾದಗಿರಿ, ಬಾಗಲಕೋಟೆ, ಬಾಗಲಕೋಟೆ, ವಿಜಯಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾರ್ಷಿಕ ಮಳೆ

ಪ್ರಮಾಣ ಕಡಿಮೆಯಾಗಿದೆ. ಕರ್ನಾಟಕದ ಬೆಟ್ಟ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯಗಳು ಕಾಣಿಸಿಕೊಳ್ಳುತ್ತಿದೆ.

ಅಂದರೆ ಸುದೀರ್ಘ ಬರ, ಏಕಾಏಕಿ ವಿಪರೀತ ಮಳೆಯಾಗುವುದು ವರದಿ ಆಗುತ್ತಿದೆ.

ಈ ವ್ಯತ್ಯಾಸಕ್ಕೆ ಕರ್ನಾಟಕದ ಬಹುತೇಕ ಜಿಲ್ಲೆಗಳು ಸಾಕ್ಷಿಯಾಗಿವೆ.  

ಇನ್ನು ಬರ, ಪ್ರವಾಹ, ಸಿಡಿಲಿನ ಆಘಾತ, ಬಿಸಿಗಾಳಿ, ಬಿರುಗಾಳಿ,  ಆಲಿಕಲ್ಲು ಮಳೆ, ಧೂಳಿನ ಸುಂಟರಗಾಳಿ ಸೇರಿದಂತೆ ಹಲವು ಪ್ರಕೃತಿ

ವಿಕೋಪಗಳಿಗೂ ಕರ್ನಾಟಕ ಸಾಕ್ಷಿಯಾಗುತ್ತಿದೆ. ಈ ವಿಕೋಪಗಳ ಪರಿಣಾಮ ರಾಜ್ಯದಲ್ಲಿ ಬೆಳೆ ನಷ್ಟ, ಜೀವನೋಪಾಯ ನಡೆಸುವ

ಸವಾಲು , ವಲಸೆ ಹೋಗುವುದು ಹೆಚ್ಚಾಗುತ್ತಿದೆ.

ಕರ್ನಾಟಕದ ಕೃಷಿ ಹವಾಮಾನ ವಲಯಗಳು: ಕರ್ನಾಟಕವನ್ನು ಮುಖ್ಯವಾಗಿ 10 ವಲಯಗಳಾಗಿ ವಿಂಗಡಿಸಲಾಗಿದೆ.

ಒಳನಾಡು, ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಎಂದು ವಿಂಗಡಿಸಲಾಗಿದೆ.

ಇವುಗಳಲ್ಲಿ ಒಟ್ಟಾರೆ ಹತ್ತು ವಲಯಗಳಿವೆ ಐದು ಒಣ ವಲಯ, ಮೂರು ಬೆಟ್ಟ ಮತ್ತು ಕರಾವಳಿ ವಲಯ ಮತ್ತು ಎರಡು ಸ್ಥಿತ್ಯಂತರ ವಲಯಗಳೆಂದು ವಿಭಾಗಿಸಲಾಗಿದೆ.

ಕರ್ನಾಟಕದಲ್ಲಿ ಈಚೆಗೆ ಸಂಭವಿಸಿದ ಪ್ರವಾಹ

ಸುದೀರ್ಘ ಬರ; ಏಕಾಏಕಿ ತೀವ್ರ ಮಳೆ!

ಕರ್ನಾಟಕವು ಈಚೆಗೆ ಎದುರುಗೊಂಡ ಮತ್ತೊಂದು ಸಂಕಷ್ಟವೆಂದರೆ, ಸುದೀರ್ಘ ಅವಧಿಗೆ ಬರಗಾಲ, ಏಕಾಏಕಿ ಭಾರೀ ಮಳೆಯಾಗಿದ್ದು.

2018ರಲ್ಲಿ ರಾಜ್ಯದಲ್ಲಿ ಪ್ರವಾಹ ಎದುರಾಗಿತ್ತು. ಸುದೀರ್ಘ ಬರದ ನಂತರದಲ್ಲಿ ಎದುರಾದ ಈ ಪ್ರವಾಹದಿಂದ ಕರ್ನಾಟಕದ ಹಲವು ಭಾಗದ ಜನ ತತ್ತರಿಸಿದ್ದರು.

ಮುಖ್ಯವಾಗಿ ಮಲೆನಾಡು ತತ್ತರಿಸಿತ್ತು. ಈ ಭಾಗದಲ್ಲಿ ತೀವ್ರ ಭೂಕುಸಿತವೂ ಸೃಷ್ಟಿಯಾಗಿತ್ತು.

ಅಲ್ಲದೇ ಒಂದೇ ದಿನದಲ್ಲಿ ಬರೋಬ್ಬರಿ 30 ಸೆಂ.ಮೀ. ಮಳೆಯಾಗಿತ್ತು.

2019ರಲ್ಲಿ ಆಗಸ್ಟ್ 3-10ರ ನಡುವೆ ತೀವ್ರ ಪ್ರವಾಹ ಪರಿಸ್ಥಿತಿ ಎದುರಾಗಿತ್ತು.

ಸುದೀರ್ಘ ಬರದ ಬಳಿಕ ಎದುರಾದ ಪ್ರವಾಹದಿಂದ ಕರ್ನಾಟಕ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಯಿತು.  

ಅಲ್ಲದೇ ಈ ಪ್ರವಾಹದಿಂದಾಗಿ 8.8 ಲಕ್ಷ ಹೆಕ್ಟೇರ್ ಜಮೀನಿನ ಕೃಷಿ ತೊಂದರೆಗೀಡಾಗಿತ್ತು. 87 ಜನ ಮೃತಪಟ್ಟರು.

ಬರೋಬ್ಬರಿ 2.47 ಲಕ್ಷ ಮನೆಗಳು ಹಾನಿಗೊಳಗಾದವು. ಅಲ್ಲದೇ ಅಪಾರ ಆಸ್ತಿಪಾಸ್ತಿಯೂ ನಷ್ಟವಾಗಿತ್ತು.

ಕೊಡಗಿನಲ್ಲಿ ಪ್ರವಾಹದಿಂದಾಗಿ ನದಿ, ಹೊಳೆ, ಮಳೆ ನೀರು ಹರಿಯುವ ಚರಂಡಿ ಜಾಗಗಳೆಲ್ಲಾ ವ್ಯತ್ಯಾಸವಾಗಿ ಅದನ್ನು ಸರಿಪಡಿಸಲು ವರ್ಷಗಳೇ ಆಗಿವೆ.

ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ 2019ರ ಪ್ರವಾಹದ ನಷ್ಟ 38,451.11 ಕೋಟಿ ರೂಪಾಯಿಗಳು.

ರಾಜ್ಯದ ಹವಾಮಾನ

ಇನ್ನು ಪ್ರಸಕ್ತ ಸಾಲಿನಲ್ಲಿಯೂ (2023) ಬರಗಾಲ ಎದುರಾಗಿದ್ದು, 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.

ರಾಜ್ಯ ಸರ್ಕಾರದ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ 33,770 ಕೋಟಿ ರೂಪಾಯಿ.

ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದಿಂದ 17,901 ಕೋಟಿ ರೂಪಾಯಿ ಪರಿಹಾರ ಕೇಳಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

(SOURCE: Climate Change Scenario in Karnataka: A Detailed Parametric Assessment Published by Karnataka State Natural Disaster Monitoring Centre (KSNDMC) First Edition:2020.)  

Published On: 20 November 2023, 03:26 PM English Summary: What is the reason for the unceasing drought and floods in Karnataka, is the drought continuous?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.