1. ಸುದ್ದಿಗಳು

ಇಂದಿನಿಂದ IFFI ವಾರ್ಷಿಕ ಸಿನಿಮಾ ಸಂಭ್ರಮ

Maltesh
Maltesh

ಐ ಎಫ್‌ ಎಫ್‌ ಐ - ಪ್ರಪಂಚದ ಮತ್ತು ಭಾರತದ ಅತ್ಯುತ್ತಮ ಚಲನಚಿತ್ರಗಳ ವಾರ್ಷಿಕ ಸಿನಿಮಾ ಸಂಭ್ರಮ ನವೆಂಬರ್ 20 ರಂದು ಆರಂಭವಾಗುತ್ತದೆ. ಐ ಎಫ್‌ ಎಫ್‌ ಐ 54 ರಲ್ಲಿ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲು ಹಾಲಿವುಡ್ ನಟ ಮತ್ತು ನಿರ್ಮಾಪಕ ಮೈಕೆಲ್ ಡಗ್ಲಾಸ್ ಬರಲಿದ್ದಾರೆ.

ಉತ್ಸವದ 4 ಸ್ಥಳಗಳಲ್ಲಿ 270 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು . ಐ ಎಫ್‌ ಎಫ್‌ ಐ 54- 105 ದೇಶಗಳಿಂದ 2926 ಪ್ರವೇಶಗಳನ್ನು ಪಡೆದಿದೆ; ಇದು ಕಳೆದ ವರ್ಷಕ್ಕಿಂತ 3 ಪಟ್ಟು ಹೆಚ್ಚು ಅಂತಾರಾಷ್ಟ್ರೀಯ ಸಲ್ಲಿಕೆಗಳಾಗಿದೆ.

ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಗಾಗಿ 15 ಒಟಿಟಿ ಪ್ಲಾಟ್‌ ಫಾರ್ಮ್‌ ಗಳಿಂದ 10 ಭಾಷೆಗಳಲ್ಲಿ 32 ಪ್ರವೇಶಗಳನ್ನು ಸ್ವೀಕರಿಸಲಾಗಿದೆ. ಪ್ರಪಂಚದಾದ್ಯಂತದ ಸಾಕ್ಷ್ಯಚಿತ್ರಗಳನ್ನು ಒಳಗೊಂಡಿರುವ ಡಾಕ್ಯುಮೆಂಟ್-ಮಾಂಟೇಜ್ ವಿಭಾಗದ ಪ್ರದರ್ಶನ ಈ ವರ್ಷ ಐ ಎಫ್‌ ಎಫ್‌ ಐ ನಲ್ಲಿರುತ್ತದೆ.

​"ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್‌ ಎಫ್‌ ಐ) ವಿಶ್ವದ 14 ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ 'ಅಂತಾರಾಷ್ಟ್ರೀಯ ಸ್ಪರ್ಧೆಯ ಫೀಚರ್‌ ಚಲನಚಿತ್ರೋತ್ಸವಗಳಲ್ಲಿ' ಒಂದಾಗಿದೆ, ಇದು ಜಾಗತಿಕವಾಗಿ ಚಲನಚಿತ್ರೋತ್ಸವಗಳನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಸಂಸ್ಥೆಯಾದ ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಒಕ್ಕೂಟದ (FIAPF) ಮಾನ್ಯತೆ ಪಡೆದಿದೆ.

ಕಾನ್‌, ಬರ್ಲಿನ್ ಮತ್ತು ವೆನಿಸ್‌ ನಂತಹ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು FIAPF ನಿಂದ ಮಾನ್ಯತೆ ಪಡೆದ ಇತರ ಪ್ರತಿಷ್ಠಿತ ಉತ್ಸವಗಳಾಗಿವೆ. ವಾರ್ಷಿಕ ಸಿನಿಮೀಯ ಸಂಭ್ರಮವು ಪ್ರಪಂಚದ ಮತ್ತು ಭಾರತದ ಅತ್ಯುತ್ತಮ ಚಲನಚಿತ್ರಗಳಿಗೆ ನೆಲೆಯಾಗಿದೆ, ಭಾರತದ ಚಲನಚಿತ್ರೋದ್ಯಮದ ದಿಗ್ಗಜರು ಮತ್ತು ಪ್ರಪಂಚದಾದ್ಯಂತದ ಪ್ರತಿನಿಧಿಗಳು, ಅತಿಥಿಗಳು ಮತ್ತು ಭಾಷಣಕಾರರು ಇದನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರ ವಿಭಾಗದ ಕಾರ್ಯದರ್ಶಿ ಹಾಗೂ ಎನ್‌ ಎಫ್‌ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪೃಥುಲ್ ಕುಮಾರ್ ಹೇಳಿದ್ದಾರೆ.

ಅವರು ನಿನ್ನೆ ಪಣಜಿಯಲ್ಲಿ ನಡೆದ 54ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕರ್ಟನ್ ರೈಸರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಇ ಎಸ್‌ ಜಿ ಉಪಾಧ್ಯಕ್ಷೆ ಶ್ರೀಮತಿ ದೇಲಿಲಾ ಎಂ ಲೋಬೊ, ಇ ಎಸ್‌ ಜಿ ಸಿಇಒ ಅಂಕಿತಾ ಮಿಶ್ರಾ, ಪಶ್ಚಿಮ ವಲಯದ ಪಿಐಬಿ ಮಹಾನಿರ್ದೇಶಕರಾದ ಮೊನಿದೀಪ ಮುಖರ್ಜಿ ಮತ್ತು ಪಿಐಬಿ ಮಹಾನಿರ್ದೇಶಕರಾದ ಡಾ.ಪ್ರಜ್ಞಾ ಪಲಿವಾಲ್ ಗೌರ್ ಉಪಸ್ಥಿತರಿದ್ದರು.

ಈ ವರ್ಷದ ಚಲನಚಿತ್ರೋತ್ಸವದ ಬಗ್ಗೆ ವಿವರಿಸಿದ ಶ್ರೀ ಪೃಥುಲ್ ಕುಮಾರ್ ಅವರು, “ಐ ಎಫ್‌ ಎಫ್‌ ಐ ನ ಪ್ರಮುಖ ಅಂಶಗಳಲ್ಲಿ ಒಂದಾದ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ (ಎಸ್‌ ಆರ್‌ ಎಲ್‌ ಟಿ ಎ) ಯನ್ನು ವಿಶ್ವ ಸಿನಿಮಾದಲ್ಲಿನ ಶ್ರೇಷ್ಠತೆಗಾಗಿ ನೀಡಲಾಗುತ್ತದೆ. ಹಾಲಿವುಡ್ ನಟ ಮತ್ತು ನಿರ್ಮಾಪಕ ಮೈಕೆಲ್ ಡಗ್ಲಾಸ್ ಪ್ರಸ್ತುತ ವಿಶ್ವ ಚಿತ್ರರಂಗದ ಶ್ರೇಷ್ಠ ಅಂತಾರಷ್ಟ್ರೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ಅವರ ಪತ್ನಿ ಮತ್ತು ನಟಿ ಕ್ಯಾಥರೀನ್ ಝೀಟಾ-ಜೋನ್ಸ್ ಅವರೊಂದಿಗೆ ಐ ಎಫ್‌ ಎಫ್‌ ಐ ನಲ್ಲಿ ಇರುತ್ತಾರೆ.

INOX Panjim, Maquinez Palace, INOX Porvorim, Z Square Samrat Ashok – ಈ 4 ಸ್ಥಳಗಳಲ್ಲಿ ಉತ್ಸವದ ಸಮಯದಲ್ಲಿ 270 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. 54 ನೇ ಐ ಎಫ್‌ ಎಫ್‌ ಐ ನ 'ಅಂತಾರಾಷ್ಟ್ರೀಯ ವಿಭಾಗ' 198 ಚಲನಚಿತ್ರಗಳನ್ನು ಹೊಂದಿರುತ್ತದೆ.

ಇದು 53 ನೇ ಐ ಎಫ್‌ ಎಫ್‌ ಐ ಗಿಂತ 18 ಹೆಚ್ಚು. ಇದು 13 ವಿಶ್ವ ಪ್ರೀಮಿಯರ್‌ ಗಳು, 18 ಅಂತಾರಾಷ್ಟ್ರೀಯ ಪ್ರೀಮಿಯರ್‌ ಗಳು, 62 ಏಷ್ಯಾ ಪ್ರೀಮಿಯರ್‌ ಗಳು ಮತ್ತು 89 ಇಂಡಿಯಾ ಪ್ರೀಮಿಯರ್‌ ಗಳನ್ನು ಹೊಂದಿರುತ್ತದೆ. ಈ ವರ್ಷ ಐ ಎಫ್‌ ಎಫ್‌ ಐ 105 ದೇಶಗಳಿಂದ ದಾಖಲೆಯ 2926 ಪ್ರವೇಶಗಳನ್ನು ಸ್ವೀಕರಿಸಿದೆ, ಇದು ಕಳೆದ ವರ್ಷಕ್ಕಿಂತ 3 ಪಟ್ಟು ಹೆಚ್ಚು ಅಂತಾರಾಷ್ಟ್ರೀಯ ಸಲ್ಲಿಕೆಯಾಗಿದೆ. ‘ಇಂಡಿಯನ್ ಪನೋರಮಾವಿಭಾಗವು ಭಾರತದಿಂದ 25 ಚಲನಚಿತ್ರಗಳು ಮತ್ತು 20 ನಾನ್‌ ಫೀಚರ್ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಫೀಚರ್ ವಿಭಾಗದಲ್ಲಿ ಮಲಯಾಳಂ ಚಲನಚಿತ್ರ “ಆಟ್ಟಂಮತ್ತು ನಾನ್‌ ಫೀಚರ್ ವಿಭಾಗದಲ್ಲಿ ಮಣಿಪುರದ “ಆಂಡ್ರೋ ಡ್ರೀಮ್ಸ್ಚಲನಚಿತ್ರಗಳು ಆರಂಭಿಕ ಚಿತ್ರಗಳಾಗಿರುತ್ತವೆ.

Published On: 20 November 2023, 11:41 AM English Summary: IFFI annual cinema festival starts from today

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.