1. ಸುದ್ದಿಗಳು

Krishi Bhagya ಕೃಷಿ ಭಾಗ್ಯ ಎಂದರೇನು, ರೈತರಿಗೆ ಏನೆಲ್ಲ ಉಪಯೋಗ ?

Hitesh
Hitesh
ಕೃಷಿ ಭಾಗ್ಯದ ಸಂಪೂರ್ಣ ವಿವರ ಇಲ್ಲಿದೆ

ಕೃಷಿಭಾಗ್ಯ ಯೋಜನೆ(Krishibhagya Yojana)ಯನ್ನು ಮರು ಜಾರಿ ಮಾಡಲು ರಾಜ್ಯ ಸರ್ಕಾರವು ಮುಂದಾಗಿದೆ. ಈ ಯೋಜನೆಯಿಂದ ರೈತರಿಗೆ ಆಗುವ ಲಾಭ ಮತ್ತು ಉದ್ದೇಶದ ವಿವರ ಇಲ್ಲಿದೆ.

ರಾಜ್ಯ ಸರ್ಕಾರವು ರೈತರಿಗೆ ನೆರವಾಗುವ ಉದ್ದೇಶದಿಂದ ಮಳೆ ಆಶ್ರಿತ ರೈತರನ್ನು ಕೇಂದ್ರೀಕರಿಸಿ ಮಳೆ ನೀರು ಸಂಗ್ರಹಣೆ

ಮತ್ತು ಪುನರ್ ಬಳಕೆಗೆ ಆದ್ಯತೆ ನೀಡಿ ಕೃಷಿ (Krishibhagya Yojana) ಭಾಗ್ಯ ಯೋಜನೆಯನ್ನು 2014-15 ಸಾಲಿನಿಂದ ಜಾರಿಗೆ ತಂದಿತ್ತು.

ಈ ಯೋಜನೆಯನ್ನು ಮೊದಲನೆ ಹಂತದಲ್ಲಿ 5 ಮುಖ್ಯ ಒಣ ಭೂಮಿ ವಲಯಗಳ 23 ಜಿಲ್ಲೆಗಳ 107 ತಾಲ್ಲೂಕುಗಳಲ್ಲಿ

ಮತ್ತು 2015-16ನೇ ಸಾಲಿನಿಂದ ಕಡಿಮೆ ಮಳೆ ಬೀಳುವ ತಾಲ್ಲೂಕುಗಳನ್ನು ಸೇರ್ಪಡೆ ಮಾಡಿ ಒಟ್ಟು 25 ಜಿಲ್ಲೆಗಳ

132 ತಾಲ್ಲೂಕುಗಳಲ್ಲಿ ಅನುಷ್ಠಾನ ಮಾಡಲಾಗಿತ್ತು.  

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೃಷಿ ಭಾಗ್ಯ

2017-18ನೇ ಸಾಲಿನಿಂದ ಯೋಜನೆಯ ಸೌಲಭ್ಯವನ್ನು, ಅಚ್ಚುಕಟ್ಟು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ

ಎಲ್ಲಾ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

2013 ರಿಂದ 18ರ ಅವಧಿಯಲ್ಲಿ ಕೃಷಿಭಾಗ್ಯ (Krishi Bhagya Scheme) ಯೋಜನೆಯಡಿ ನಿರ್ಮಿಸಲ್ಪಟ್ಟ ಲಕ್ಷಾಂತರ ಕೃಷಿಹೊಂಡಗಳು ಮಳೆಯಾಧಾರಿತ

ಬೇಸಾಯ ಮಾಡುವ ರೈತರಿಗೆ ನೀರಿನ ಆಕರಗಳಾಗಿ, ಒಣಭೂಮಿಯನ್ನು ಫಲಾವತ್ತಾದ ಕೃಷಿಭೂಮಿಯಾಗಿ ಪರಿವರ್ತಿಸಿದವು.

ಲಕ್ಷಾಂತರ ಪಾಲಿಹೌಸ್‌ಗಳಿಂದಾಗಿ ಬೆಳೆಗಳು ಕ್ರಿಮಿಕೀಟಗಳ ಬಾಧೆಯಿಂದ ಮುಕ್ತವಾದವು, ನೀರಿನ ಬಳಕೆ ಕಡಿಮೆಯಾಯಿತು ಜೊತೆಗೆ ಇಳುವರಿ ಪ್ರಮಾಣ

ಹೆಚ್ಚಾಗಿ ಕೃಷಿ ಲಾಭದಾಯಕ ಉದ್ಯೋಗವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಹೀಗೆ ಬಹುಪಯೋಗಿ ಯೋಜನೆಯಾದ ಕೃಷಿಭಾಗ್ಯವನ್ನು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನ ಸಿಗದೆ ಸ್ಥಗಿತಗೊಂಡಿತ್ತು.

ಈಗ ಮತ್ತೆ ಕೃಷಿಭಾಗ್ಯ (Krishi Bhagya Scheme)ವನ್ನು ಮರುಜಾರಿಗೆ ಕೊಟ್ಟು ಅನ್ನದಾತರ ಮೊಗದಲ್ಲಿ ಮಂದಹಾಸ ತಂದಿದ್ದೇವೆ ಎಂದಿದ್ದಾರೆ.  

2013-18ರ ನಮ್ಮ ಸರ್ಕಾರದ ಅವಧಿಯಲ್ಲಿ ಕೃಷಿಭಾಗ್ಯ ಯೋಜನೆ (Krishi Bhagya Scheme)ಯನ್ನು ಜಾರಿಗೆ ತಂದು, ಕೃಷಿ ಚಟುವಟಿಕೆಗಳಿಗೆ ಹೊಸರೂಪ ನೀಡಿದ್ದೆವು.

ಈ ಯೋಜನೆಯಡಿ 5 ವರ್ಷಗಳಲ್ಲಿ ರೂ. 1,898 ಕೋಟಿ ಅನುದಾನ ಬಳಕೆ ಮಾಡಿ 1.90 ಲಕ್ಷ ಕೃಷಿಹೊಂಡ

ಹಾಗೂ 1.92 ಲಕ್ಷ ಪಾಲಿಹೌಸ್ ಗಳನ್ನು ನಿರ್ಮಾಣ ಮಾಡಲಾಗಿತ್ತು.

ಮಾನ್ಸೂನ್ ಮಳೆಯಾಶ್ರಿತ (Krishi Bhagya Scheme) ಕೃಷಿಕರಿಗೆ ಈ ಯೋಜನೆ ವರದಾನವಾಗಿ ಪರಿಣಮಿಸಿತ್ತು

ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದಿದ್ದಾರೆ.  

ಕೃಷಿ ಭಾಗ್ಯ ವಿವರ

ಕೃಷಿಭಾಗ್ಯ ಯೋಜನೆಯ ಉದ್ದೇಶಗಳು:

ರಾಜ್ಯದ ಮಳೆಯಾಶ್ರಿತ (Objectives of Krishibhabhaya Scheme) ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು.

ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು

ಮತ್ತು ಆದಾಯವನ್ನು ಹೆಚ್ಚಿಸುವುದು. ಬಿದ್ದ ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ

ತೆಗೆದು ಜಲ ಸಂಗ್ರಹಿಸಿ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ (Benefits of Krishibhagya Scheme) ಒದಗಿಸುವುದು.

ಪಾಲಿಹೌಸ್‌

2014-15 ನೇ ಸಾಲಿನಿಂದ 2016-17 ಸಾಲಿನವರೆಗೆ ಯೋಜನೆಯನ್ನು ಪ್ಯಾಕೇಜ್ ರೂಪದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಈ ಕೆಳಕಂಡಂತೆ ಘಟಕಗಳ ಸೌಲಭ್ಯ ನೀಡಲಾಗಿರುತ್ತದೆ.

ಕೃಷಿ ಹೊಂಡ ಘಟಕ: ಕೃಷಿ ಹೊಂಡ, ಪಾಲಿಥೀನ್  (Agriculture Pit, Polythene )ಹೊದಿಕೆ/ಪರ್ಯಾಯ ಮಾದರಿಗಳು, ಡಿಸೇಲ್ ಪಂಪ್ ಸೆಟ್, ಲಘು ನೀರಾವರಿ ಘಟಕ, ಕ್ಷೇತ್ರ ಬದು, ಬೆಳೆ ಪದ್ಧತಿ, ಪಶು ಸಂಗೋಪನಾ ಚಟುವಟಿಕೆ(ಐಚ್ಛಿಕ ಘಟಕ).

ಪಾಲಿಹೌಸ್ ಘಟಕ: ಪಾಲಿಹೌಸ್/ನರೆಳು (Polyhouse Unit) ಪರದೆ ಮನೆ.

ಮುಂದುವರೆದು, 2015-16 ನೇ ಸಾಲಿನಿಂದ ಕೃಷಿ ಭಾಗ್ಯ ಯೋಜನೆಯ ಅಂಗವಾಗಿ ಕಳೆದ ನಾಲ್ಕು ವರ್ಷಗಳಿಂದ ನಿರಂತರ ಬರಕ್ಕೆ ತುತ್ತಾದ 7 ಜಿಲ್ಲೆಗಳ

(ಕೋಲಾರ್, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೀದರ್, ಹಾಸನ ಮತ್ತು ಕಲಬುರ್ಗಿ 23 ತಾಲ್ಲೂಕುಗಳಲ್ಲಿ

ವಿಶೇಷ ಪ್ಯಾಕೇಜ್‌ನ್ನು ಅನುಷ್ಠಾನ
ಗೊಳಿಸಲಾಗುತ್ತಿದೆ.

2016-17 ನೇ ಸಾಲಿನಲ್ಲಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಘಟಕಗಳನ್ನು ಅನುಷ್ಠಾನ ಮಾಡಿರುವ ಪ್ರಯುಕ್ತ, ಪ್ರಸಕ್ತ

ಸಾಲಿನಿಂದ ಜಲಾನಯನ ಇಲಾಖೆಯ ಯೋಜನೆಗಳೊಂದಿಗೆ ಹಾಗೂ ಇಲಾಖೆಯ ಇತರೆ ಯೋಜನೆಗಳಡಿ

(ಕೃಷಿ ಸಂಸ್ಕರಣೆ, ಕೃಷಿ ಯಾಂತ್ರೀಕರಣ ಹಾಗೂ ಸೂಕ್ಷ್ಮ ನೀರಾವರಿ ಯೋಜನೆ) ಲಭ್ಯವಿರುವ ಅನುದಾನವನ್ನು

ಬಳಸಿ ಒಗ್ಗೂಡಿಸುವಿಕೆಯಡಿ ಅನುಷ್ಠಾನ ಮಾಡಲಾಯಿತು.

ಪ್ರಸಕ್ತ ಸಾಲಿನ ನೂತನ ಬಜೆಟ್‌ನಲ್ಲಿ ಯೋಜನೆಯ ಅನುಷ್ಠಾನಕ್ಕಾಗಿ ರೂ 250.00 ಕೋಟಿ ಅನುದಾನವನ್ನು

ಒದಗಿಸಲಾಗಿದ್ದು, ಅಂದಾಜು 30,000 ಕೃಷಿ ಹೊಂಡಗಳನ್ನು ಹಾಗೂ ಇತರೆ ಘಟಕಗಳನ್ನು ಅನುಷ್ಠಾನಗೊಳಿಸಲು

ಗುರಿ ಹಾಕಿಕೊಂಡಿರುವುದಾಗಿ ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.      

Published On: 20 November 2023, 04:43 PM English Summary: What is Krishi Bhagya, what are the benefits for farmers?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.