ಈ ಬಾರಿಯ ದೀಪಾವಳಿಯಂದು ತಮ್ಮ ತಮ್ಮ ಊರಿಗೆ ತೆರಳಲು ಮುಂದಾಗಿರುವ ಕೋಟ್ಯಂತರ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನು ಪ್ರಕಟಿಸಿದೆ. ಅಂದರೆ ರೈಲಿನಲ್ಲಿ ಉಚಿತ ಆಹಾರ ಸೌಲಭ್ಯವನ್ನು ಏರ್ಪಡಿಸಲಾಗಿದೆ. ಹೌದು...ನೀವು ರೈಲಿನಲ್ಲಿ ಪ್ರಯಾಣಿಸಲು ಹೊರಟರೆ ಆಹಾರಕ್ಕಾಗಿ ಏನನ್ನೂ ಪಾವತಿಸಬೇಕಾಗಿಲ್ಲ. ಯಾವ ರೈಲುಗಳು ಯಾವ ಮಾರ್ಗಗಳಲ್ಲಿ, ಯಾವ ಸಂದರ್ಭದಲ್ಲಿ ಉಚಿತ ಊಟವನ್ನು ನೀಡುತ್ತವೆ ಎಂಬುದನ್ನು ತಿಳಿಯಲು ಈ ಲೇಖನವನ್ನ ಪೂರ್ಣವಾಗಿ ಓದಿ:
ಉಚಿತ ಆಹಾರ ಮತ್ತು ನೀರು
ನೀವು ರೈಲಿನಲ್ಲಿ ಪ್ರಯಾಣಿಸಲು ಹೋದರೆ , ನೀವು IRCTC ಕಡೆಯಿಂದ ಉಚಿತ ಆಹಾರ, ತಂಪು ಪಾನೀಯಗಳು ಮತ್ತು ನೀರಿಗೆ ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ . ಆದರೆ ನಿಮ್ಮ ರೈಲು ವಿಳಂಬವಾದರೆ ಮಾತ್ರ ಇದು ಸಂಭವಿಸುತ್ತದೆ. ಈ ಊಟವನ್ನು IRCTC ಯಿಂದ ನಿಮಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ, ರೈಲು ವಿಳಂಬದ ಸಂದರ್ಭದಲ್ಲಿ IRCTC ಯ ಅಡುಗೆ ನೀತಿಯ ಅಡಿಯಲ್ಲಿ ಪ್ರಯಾಣಿಕರಿಗೆ ಆಹಾರವನ್ನು ಉಚಿತವಾಗಿ ನೀಡಲಾಗುತ್ತದೆ.
ಬಿಗ್ ಅಪ್‌ಡೇಟ್: ನಾಳೆ ಕೋಟ್ಯಾಂತರ ರೈತರ ಅಕೌಂಟ್‌ಗಳಿಗೆ ಜಮಾ ಆಗಲಿದೆ ಪಿಎಂ ಕಿಸಾನ್ ಹಣ
ಈ ಸೌಲಭ್ಯ ಯಾವಾಗ ದೊರೆಯುತ್ತದೆ?
IRCTC ನಿಯಮಗಳ ಪ್ರಕಾರ, ನಿಮ್ಮ ರೈಲು 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದಾಗ ಈ ಆಫರ್ ಲಭ್ಯವಿರುತ್ತದೆ. ಅದೂ ಕೂಡ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ಒದಗಿಸಲಾಗಿದೆ. ಅಂದರೆ ಶತಾಬ್ದಿ, ರಾಜಧಾನಿ, ಮುಂತಾದ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯಾವುದೇ ಶುಲ್ಕವಿಲ್ಲದೆ ಉಚಿತ ಆಹಾರವನ್ನು ಸೇವಿಸಬಹುದು.
ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ATM ಇಡ್ಲಿ, ವಡೆ, ಸೆಂಟರ್..ವಿಡಿಯೋ
ಇದಲ್ಲದೇ ರೈಲಿನಲ್ಲಿ ತಿಂಡಿಗೆ ಚಹಾ-ಕಾಫಿ, ಬಿಸ್ಕೆಟ್ ಕೂಡ ಲಭ್ಯ. ಸಂಜೆಯ ತಿಂಡಿ, ಚಹಾ ಅಥವಾ ಕಾಫಿ ಮತ್ತು ನಾಲ್ಕು ಸ್ಲೈಸ್ ಬ್ರೆಡ್ ನೀಡಲಾಗುತ್ತದೆ. ಇದಲ್ಲದೇ ಮಧ್ಯಾಹ್ನದ ವೇಳೆ ಪ್ರಯಾಣಿಕರಿಗೆ ಬ್ರೆಡ್, ಬೇಳೆಕಾಳು, ತರಕಾರಿ ಇತ್ಯಾದಿ ಉಚಿತವಾಗಿ ದೊರೆಯುತ್ತದೆ. ಕೆಲವೊಮ್ಮೆ ಅದನ್ನು ಪೂರ್ಣವಾಗಿ ನೀಡಲಾಗುತ್ತದೆ. ನಿಮ್ಮ ರೈಲು 2 ಗಂಟೆಗಳಷ್ಟು ವಿಳಂಬವಾದರೆ ಪ್ರಯಾಣಿಕರು ಆಹಾರವನ್ನು ಆರ್ಡರ್ ಮಾಡಬಹುದು.
Share your comments