1. ಸುದ್ದಿಗಳು

ಸಿಲಿಕಾನ್‌ ಸಿಟಿಯಲ್ಲಿ ಶುರುವಾಯ್ತು ATM ಇಡ್ಲಿ, ವಡೆ, ಸೆಂಟರ್‌..ವಿಡಿಯೋ

Maltesh
Maltesh
ATM Idli Vada Center in Bengaluru

ಬೆಂಗಳೂರು ಅಂದ್ರೆ ಸಿಲಿಕಾನ್‌ ಸಿಟಿ.. ಸಾಫ್ಟ್‌ವೇರ್‌ ಕಂಪನಿಗಳಿಗೆ ಸ್ವರ್ಗ ಆಗಿರುವ ಬೆಂಗಳೂರು ಪ್ರತಿದಿನ ತಂತ್ರಜ್ಞಾನದಲ್ಲಿ ಮುಂದುವರೆಯುತ್ತಾನೆ ಇದೆ. ಹೌದು ಇದೀಗ ಮತ್ತೊಂದು ವಿಶಿಷ್ಟ ಹಾಗೂ ವಿಭಿನ್ನ ತಂತ್ರಜ್ಞಾನದ ವಿಚಾರದಲ್ಲಿ ಬೆಂಗಳೂರಿನ ATM ಒಂದು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅಯ್ಯೋ ಶಿವನೆ ದೈನಂದಿನ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ATM ವಿಚಾರದಲ್ಲಿ ಅದೆಂಥ ಸದ್ದು, ಸುದ್ದಿ ಅಂತೀರಾ ಈ ಲೇಖನವನ್ನೊಮ್ಮೆ ಪೂರ್ಣವಾಗಿ ಓದಿ..

ಫೋನ್‌ಪೇ ಮೂಲಕ ಮನೆಯಲ್ಲಿ ಕುಳಿತು ದಿನಕ್ಕೆ 1000 ರೂ ಗಳಿಕೆ..ಹೇಗೆ..?

ಸ್ಟಾರ್ಟ್‌ಅಪ್‌ ಸಂಸ್ಥೆಯಾ FRESHOTಆಹಾರ ಕಂಪನಿ ಬೆಂಗಳೂರಿನಲ್ಲಿ ATM ಇಡ್ಲಿಯನ್ನು ಸ್ಥಾಪಿಸಿದೆ. ಇದರಲ್ಲಿ ಎಟಿಎಂ ಮೂಲಕ ಹಣ ಡ್ರಾ ಮಾಡುವಂತೆಯೇ ಇಡ್ಲಿ, ದೋಸೆ ಇತ್ಯಾದಿಗಳನ್ನು ಕೇವಲ ಸ್ಕ್ಯಾನ್‌ ಮಾಡುವ ಮೂಲಕ ಕ್ಷಣಾರ್ಧದಲ್ಲಿ ಪಡೆಯಬಹುದಾಗಿದೆ.ನಈ ಯಂತ್ರವು 'ಫ್ರೆಶ್‌ಶಾಟ್ ರೋಬೋಟಿಕ್ಸ್' ಎಂಬ ಸ್ಟಾರ್ಟಪ್‌ನ ಆವಿಷ್ಕಾರವಾಗಿದೆ. ನಿಮಗೆ 24 ಗಂಟೆಗಳ ಇಡ್ಲಿ ಸೇರಿದಂತೆ ಇತರೆ ಖಾದ್ಯಗಳು ಈ ATM ನಲ್ಲಿ ಲಭ್ಯವಾಗುತ್ತದೆ.

ದೇಸಿ ಹಸುಗಳು ಮತ್ತು ಜರ್ಸಿ ಹಸುಗಳ ನಡುವಿನ ವ್ಯತ್ಯಾಸಗಳು: ಯಾವ ತಳಿಯು ವಾಣಿಜ್ಯಿಕವಾಗಿ ಲಾಭದಾಯಕವಾಗಿದೆ?

ಈ ಯಂತ್ರವು ಇಡ್ಲಿಯನ್ನು ತಯಾರಿಸುತ್ತದೆ ಮತ್ತು ಅದನ್ನು ಚೆನ್ನಾಗಿ ಪ್ಯಾಕ್ ಮಾಡುತ್ತದೆ. ಈ ಯಂತ್ರವನ್ನು ಇರಿಸಲು ಪ್ರಮುಖ ಕಾರಣವೆಂದರೆ ಗ್ರಾಹಕರಿಗೆ ನೇರ ಅನುಭವವನ್ನು ನೀಡುವುದು. ಇದು ಸಂಪೂರ್ಣ ಸ್ವಯಂಚಾಲಿತವಾಗಿದೆ.

ಬೆಂಗಳೂರು ನಗರದ ಎರಡು ಸ್ಥಳಗಳಲ್ಲಿ ಈ ಯಂತ್ರವನ್ನು ಅಳವಡಿಸಲಾಗಿದೆ.ಶೀಘ್ರದಲ್ಲೇ ಹಲವು ಕಚೇರಿಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಇತ್ಯಾದಿಗಳಲ್ಲಿ ಈ ಯಂತ್ರವನ್ನು ಅಳವಡಿಸಲಾಗುವುದು. ಅದೇ ಯಂತ್ರಗಳಿಂದ ದೋಸೆ, ಇತರೆ ಖಾದ್ಯಗಳು, ಹಣ್ಣಿನ ರಸ ಇತ್ಯಾದಿಗಳನ್ನು ನೀಡಲು ನಿರ್ಧರಿಸಿದೆ. ಇನ್ನು ನಿಮಗೆ ಬೇಕಾದ ತಿಂಡಿಗಳನ್ನು ನೀವು  ಹಣ ಪೇ ಮಾಡಿ ಸ್ಕ್ಯಾನ್‌ ಮಾಡಿದ್ರೆ ಸಾಕು 50 ಸೆಕೆಂಡ್‌ಗಳಲ್ಲಿ ನಿಮ್ಮ ಮುಂದೆ ನೀವು ಬಯಿಸಿದ ತಿಂಡಿ, ತಿನಿಸುಗಳು ನಿಮ್ಮ ಮುಂದೆ ಬಂದು ನಿಲ್ಲುತ್ತವೆ.

Published On: 15 October 2022, 12:28 PM English Summary: ATM Idli Vada Center in Bengaluru

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.