1. ಸುದ್ದಿಗಳು

ವಿದ್ಯಾನಿಧಿ: ಆಟೋರಿಕ್ಷಾ ಕ್ಯಾಬ್,ಟ್ಯಾಕ್ಸಿ ಚಾಲಕರ ಮಕ್ಕಳಿಗೆ 10 ಸಾವಿರ ರೂ ಸ್ಕಾಲರ್‌ಶಿಪ್‌- ಅರ್ಜಿ ಆಹ್ವಾನ

Maltesh
Maltesh
vidyanidhi scholarship application Invited

1..ಆಟೋರಿಕ್ಷಾ ಕ್ಯಾಬ್,ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಗುಡ್‌ನ್ಯೂಸ್‌: ವಿದ್ಯಾನಿಧಿ ಯೋಜನೆಯಡಿ ಅರ್ಜಿ ಆಹ್ವಾನ

2..ಧಾರವಾಡದಲ್ಲಿ 9 ರಿಂದ 15 ರ ವರೆಗೆ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ

3..ತೇಗೂರ ಎಮ್ಮೆ ತಳಿ ಸಂವರ್ಧನಾ ಕೇಂದ್ರ: ಮಾ.16 ರಂದು ಕೋಣ, ಹೋರಿ ಹರಾಜು

4..ಹೋಳಿ ಸಡಗರ:  ಪ್ರಾಣಿಗಳ ಮೇಲೆ ಬಣ್ಣ ಎರಚದಂತೆ ಮನವಿ

5.. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಧಾರವಾಡದಲ್ಲಿ ಸೈಕ್ಲೋಥಾನ್‌ ಜಾಥಾ

6..ಮಂಗಳಮುಖಿ, ವಿಶೇಷ ಚೇತನರಿಂದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ರಾಜ್ಯಪಾಲರಿಂದ ಚಾಲನೆ

1..

ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಕ್ಯಾಬ್ ಚಾಲಕರ ಮಕ್ಕಳ, ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ‘ವಿದ್ಯಾನಿಧಿ’ ಯೋಜನೆಯ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.  ಈ ಪ್ರಯುಕ್ತ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಚಾಲಕರು/ ಪೋಷಕರ ಚಾಲನಾ ಅನುಜ್ಞಾ ಪತ್ರ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು, ಮತ್ತು ಇತರೇ ಅಗತ್ಯ ದಾಖಲೆಗಳನ್ನು ನೀಡಿ, ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನು ಪದವಿ ಪೂರ್ವ: ಪಿಯುಸಿ, ಐಟಿಐ, ಡಿಪ್ಲೋಮ ಹುಡುಗರಿಗೆ 2,500 ಸಾವಿರ ರೂ., ಹುಡುಗಿಯರಿಗೆ 3 ಸಾವಿರ ರೂ. ಪದವಿಯಲ್ಲಿ ಓದುತ್ತಿರುವ ಹುಡುಗರಿಗೆ 5 ಸಾವಿರ ರೂ., ಹುಡುಗಿಯರಿಗೆ 5,500 ರೂ. ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್‌, ಬಿ.ಫಾರ್ಮ್, ನರ್ಸಿಂಗ್‌ ಓದುತ್ತಿರುವ ಹುಡುಗರಿಗೆ 7,500 ಸಾವಿರ ರೂ., ಹುಡುಗಿಯರಿಗೆ 8 ಸಾವಿರ ರೂ.ಎಂಬಿಬಿಎಸ್‌, ಬಿಇ, ಬಿಟೆಕ್‌ ಓದುತ್ತಿರುವ ಹುಡುಗರಿಗೆ 10 ಸಾವಿರ ರೂ., ಹುಡುಗಿಯರಿಗೆ 11 ಸಾವಿರ ರೂಗಳನ್ನು ವಿದ್ಯಾನಿಧಿ ಯೋಜನೆಯಡಿಯಲ್ಲಿ ನೀಡಲಾಗುತ್ತದೆ..

6..

ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವ ಬೆನ್ನಲ್ಲೇ ಚುನಾವಣಾ ಜಾಗೃತಿ ಹಾಗೂ ಮತದಾನದ ಕುರಿತು ಜಾಗೃತಿ ಪ್ರಾರಂಭವಾಗಿದೆ.  ಮತದಾನದ ಪ್ರಮಾಣವನ್ನು ಉತ್ತೇಜಿಸುವ ಹಾಗೂ ಸಮಾಜದ ವಿವಿಧ ವರ್ಗಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಉದ್ದೇಶದಿಂದಈಚೆಗೆ ಮುಖ್ಯ ಚುನಾವಣಾಧಿಕಾರಿ ಕಚೇರಿ, ಬೆಂಗಳೂರು ನಗರ  ಜಿಲ್ಲಾಡಳಿತ ಮತ್ತು ಬಿಬಿಎಂಪಿ ವತಿಯಿಂದ

ವಿಶೇಷ ಚೇತನರು, ತೃತೀಯಲಿಂಗಿಗಳಿಂದ ಮತದಾನದ ಜಾಗೃತಿಯ ವಿಶೇಷ ಅಭಿಯಾನಕ್ಕೆ ರಾಜಭವನದ ಆವರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿದರು.

ಈ ಪುಣ್ಯಾತ್ಮ 60 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲವಂತೆ! 

2..

ಜಿಲ್ಲಾ ಪಂಚಾಯತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಗ್ರಾಮೀಣ ಕೈಗಾರಿಕಾ ವಿಭಾಗ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ.  ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮಾರ್ಚ್ 9 ರಿಂದ 15 ರ ವರೆಗೆ ಕಡಪಾ ಮೈದಾನದ ಕಲಾಭವನ ಆವರಣದಲ್ಲಿ ಆಯೋಜಿಸಲಾಗಿದೆ. ಮಾ.9 ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ

3..

ಎಮ್ಮೆ ತಳಿ ಸಂವರ್ಧನಾ ಕೇಂದ್ರ, ತೇಗೂರು ಕ್ಷೇತ್ರದಲ್ಲಿ ಹೆಚ್ಚುವರಿ ಲಭ್ಯವಿರುವ ಕೋಣ ಮತ್ತು ಹೋರಿ ಕರುಗಳನ್ನು ಮಾ.16 ರಂದು ಬೆಳ್ಳಗೆ 11 ಘಂಟೆಗೆ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತ ರೈತರು ಪ್ರತಿ ಜಾನುವಾರುವಿಗೆ ರೂ. 2,000/-ಗಳ ಮುಂಗಡ ಠೇವಣಿ ಹಣ ಪಾವತಿಸಿ ಸಮೀಪದ ಪಶುವೈದ್ಯಾಧಿಕಾರಿಯಿಂದ ಜಾನುವಾರು ಸಾಕಾಣಿಕೆ ಮಾಡುವ ಕುರಿತು ಪ್ರಮಾಣ ಪತ್ರ ಹಾಗೂ ಫೋಟೋ ಹೊಂದಿದ ಗುರುತಿನ ಚೀಟಿಯೊಂದಿಗೆ ಭಾಗವಹಿಸಬಹುದು.ಹೆಚ್ಚಿನ ವಿವರಗಳಿಗೆ ಕ್ಷೇತ್ರದ ಉಪ ನಿರ್ದೇಶಕರ ಕಛೇರಿ, ಎಮ್ಮೆ ತಳಿ ಸಂವರ್ಧನಾ ಕೇಂದ್ರ, ತೇಗೂರು ಕ್ಷೇತ್ರ ಕಛೇರಿಯನ್ನು ಸಂರ್ಪಕಿಸಿ ಮಾಹಿತಿಯನ್ನು ನೀಡಿದರು.

7TH Pay Commission 10 ಲಕ್ಷ ಸರ್ಕಾರಿ ನೌಕರರಿಂದ ನಾಳೆ ಕೆಲಸಕ್ಕೆ ಗೈರು; ಜನ ಜೀವನದ ಮೇಲೆ ಪರಿಣಾಮ!

4..

ಹೋಳಿ ಹಬ್ಬ  ಪ್ರಯುಕ್ತ ಸಾರ್ವಜನಿಕರು ನಾಯಿಗಳು, ಬೆಕ್ಕುಗಳು, ಸಾಕುಪ್ರಾಣಿಗಳು, ಹಸುಗಳು, ಆಡುಗಳು ಇತ್ಯಾದಿ ಯಾವುದೇ ಪ್ರಾಣಿಗಳ ಮೇಲೆ ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ಎರಚದಂತೆ, ಎಲ್ಲಾ ಜವಾಬ್ದಾರಿಯುತ ನಾಗರಿಕರಲ್ಲಿ ಧಾರವಾಡ ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯ ಕಾರ್ಯದರ್ಶಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಮನವಿ ಮಾಡಿದ್ದಾರೆ.      

ರಾಸಾಯನಿಕಗಳಿಂದ ತಯಾರಿಸಿದ ಬಣ್ಣಗಳನ್ನು ಬಾಯಿಯ ಮೂಲಕ ಸೇವಿಸಿದರೆ ಅಥವಾ ಚರ್ಮದ ಮೂಲಕ ಹೀರಿಕೊಂಡರೆ ತೀವ್ರ ಅಲರ್ಜಿ, ವಾಂತಿ ಮತ್ತು ಕುರುಡುತನವನ್ನು ಪ್ರಾಣಿಗಳಲ್ಲಿ ಉಂಟುಮಾಡಬಹುದು.ಪ್ರಾಣಿಗಳ ಮೇಲೆ ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ಎರಚುವುದು ಪಿಸಿಎ ಆ್ಯಕ್ಟ್ 1960 ರಂತೆ ಪ್ರಾಣಿಗಳ ಮೇಲಿನ ಕ್ರೌಯವನ್ನು ಸೂಚಿಸುತ್ತದೆ ಹಾಗೂ ಶಿಕ್ಷಾರ್ಹವಾದ ಅಪರಾಧವಾಗಿದೆ. ವರದಿಯಾದ ಎಲ್ಲಾ ಘಟನೆಗಳ ಬಗ್ಗೆ ಸೂಕ್ತ ರೀತಿಯ ಕಾನೂನು ಕ್ರಮವಹಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5..

ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಮಹಿಳೆಯರ ಅರೋಗ್ಯವೂ ಮುಖ್ಯವಾಗಿದೆ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾದ ಮಹಿಳೆಯರಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಪಾಟೀಲ ಶಶಿ ಅವರು ತಿಳಿಸಿದರು.  ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆರೋಗ್ಯವಂತ ಮಹಿಳೆಯರಿಂದ ಆರೋಗ್ಯಕರ ಭಾರತ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಎನ್.ಸಿ.ಡಿ. ಘಟಕದಿಂದ ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿತ ಹಾಗೂ ಪಾಶ್ರ್ವವಾಯು ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಆರೋಗ್ಯ ಇಲಾಖೆ ಆವರಣದಿಂದ ಜನಜಾಗೃತಿಗಾಗಿ ಆಯೋಜಿಸಿದ್ದ ಸೈಕ್ಲೋಥಾನ್ ಜಾಥಾಗೆ ಚಾಲನೆ ನೀಡಿ, ಮಾತನಾಡಿದರು.ಮಹಿಳೆಯರು ತಮ್ಮ ದಿನನಿತ್ಯದ ಕಾರ್ಯ, ಒತ್ತಡಗಳ ನಡುವೆಯೂ ಯೋಗ, ನಡಿಗೆ, ವ್ಯಾಯಾಮಗಳಿಗೆ ಸ್ವಲ್ಪ ಸಮಯ ಮೀಸಲಿಡಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ವಿಶ್ರಾಂತಿ ಪಡೆಯಬೇಕು. ಮಹಿಳೆಯರು ನೆಮ್ಮದಿ, ಆರೋಗ್ಯವಂತರಾಗಿ ಇದ್ದಾಗ ಮಾತ್ರ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನಿಗಾವಹಿಸಿ, ಅಗತ್ಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

Published On: 07 March 2023, 03:23 PM English Summary: vidyanidhi scholarship application Invited

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.