1. ಸುದ್ದಿಗಳು

Digital India ಭಾರತೀಯರ ಜೀವನವನ್ನ ಬದಲಾಯಿಸಿದೆ- ಕೇಂದ್ರ ಸಚಿವ ಪಿಯೂಷ್​​​ ಗೋಯಲ್

Maltesh
Maltesh
Union Minister Piyush Goyal Talks About Digital India

ಸರಕು ಮತ್ತು ಸೇವಾ ವಲಯಕ್ಕೆ ಹೊಸ ಉತ್ತೇಜನ ನೀಡಲಿರುವ ಒಎನ್ ಡಿಸಿ; ಹೆಚ್ಚು ಪ್ರಯೋಜನ ಪಡೆಯಲಿರುವ ಸಣ್ಣ ಉದ್ಯಮಿಗಳು, ಮಾರಾಟಗಾರರು. ವಿಶ್ವದ ಇತರ ಯಾವುದೇ ಭಾಗಕ್ಕೆ ಹೋಲಿಸಿದರೆ ಭಾರತವು  ಹೆಚ್ಚಿನ ಸಂಖ್ಯೆಯ ಡಿಜಿಟಲ್ ಹಣಕಾಸು ವಹಿವಾಟುಗಳನ್ನು ನಡೆಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯೆಲ್ ಹೇಳಿದ್ದಾರೆ.  ಕಳೆದ ತಿಂಗಳು ಒಂದರಲ್ಲೇ ದೇಶದಲ್ಲಿ ಆರು ನೂರು ಕೋಟಿ ಡಿಜಿಟಲ್ ಹಣಕಾಸು ವಹಿವಾಟು ನಡೆದಿದೆ ಎಂದು ಅವರು ಹೇಳಿದರು.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ  ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್.ಡಿ.ಸಿ) ಉಪಕ್ರಮವು ಸರಕು ಮತ್ತು ಸೇವಾ ವಲಯಕ್ಕೆ ಹೊಸ ಉತ್ತೇಜನವನ್ನು ನೀಡುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು. 

ಬಿಗ್‌ನ್ಯೂಸ್‌: ರಾಜ್ಯದ 34 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ನೀಡಲು ತಿರ್ಮಾನ..ಸಿಎಂ ಘೋಷಣೆ

ಡಿಜಿಟಲ್ ಅಥವಾ ವಿದ್ಯುನ್ಮಾನ ಜಾಲಗಳ ಮೂಲಕ ಸರಕುಗಳು ಮತ್ತು ಸೇವೆಗಳ ವಿನಿಮಯದ ಎಲ್ಲ ಅಂಶಗಳಿಗೆ ಮುಕ್ತ ನೆಟ್ವರ್ಕ್ ಗಳನ್ನು ಉತ್ತೇಜಿಸುವ ಉದ್ದೇಶವನ್ನು ಒ.ಎನ್.ಡಿ.ಸಿ ಹೊಂದಿದೆ. ಸರ್ಕಾರದ ಉಪಕ್ರಮವು ಹೆಚ್ಚಿನ ವ್ಯಾಪಾರಿಗಳು ಮತ್ತು ಉತ್ಪನ್ನಗಳನ್ನು ಸೇರಿಸುವ ಎಲ್ಲ ಇ-ವಾಣಿಜ್ಯ ಘಟಕಗಳನ್ನು ಚಾಲನೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ ಎಂದು ಶ್ರೀ ಗೋಯಲ್ ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಕೈಗೊಂಡ ಆರಂಭಿಕ ಪರೀಕ್ಷೆಯು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. ಸಣ್ಣ ಉದ್ಯಮಿಗಳು ಮತ್ತು ಮಾರಾಟಗಾರರಿಗೆ ಹೆಚ್ಚಿನ ಪ್ರಯೋಜನ ದೊರೆತಿದೆ ಎಂದು ಸಚಿವರು ಹೇಳಿದರು.

ನವೋದ್ಯಮಗಳು 25 ವರ್ಷಗಳಲ್ಲಿ ಆಧುನಿಕ ಭಾರತದ ಭವಿಷ್ಯವನ್ನು ಬದಲಾಯಿಸುತ್ತವೆ.  ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ದೊಡ್ಡ ಪ್ರಮಾಣದಲ್ಲಿ ನವೋದ್ಯಮ  ಸಹಯೋಗಗಳಲ್ಲಿ ಸ್ಪರ್ಧೆಯ ಅಂಶದ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು.  

ಕಳೆದ ಒಂಬತ್ತು ವರ್ಷಗಳಲ್ಲಿ ನವೋದ್ಯಮ ವಲಯವು ಅಸಾಧಾರಣ ವೃದ್ಧಿ ದಾಖಲಿಸಿದೆ ಎಂದು ಸಚಿವರು ಗಮನಸೆಳೆದರು.  ನಾವು ಹೇಗೆ ವೇಗವಾಗಿ ಮುಂದುವರಿಯಬಹುದು ಮತ್ತು ಅಭಿಯಾನದೋಪಾದಿಯಲ್ಲಿ ಹೇಗೆ ಸಾಗಬಹುದು ಎಂಬುದರ ಬಗ್ಗೆ ಕಾರ್ಯಾಗಾರವು ಚರ್ಚಿಸುವ ಭರವಸೆಯನ್ನು ಶ್ರೀ ಗೋಯಲ್ ವ್ಯಕ್ತಪಡಿಸಿದರು.

ಕಡಿಮೆ ಬಂಡವಾಳದಲ್ಲಿ ಭಾರತೀಯ ರೈಲ್ವೆಯೊಂದಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿ..ಡಬಲ್‌ ಆದಾಯ ಗಳಿಸಿ

ನವೋದ್ಯಮಗಳ ವಿವಿಧ ಅಂಶಗಳು ಮತ್ತು ದೇಶದ ಆರ್ಥಿಕ ವೃದ್ಧಿಗೆ ಅವುಗಳ ಕೊಡುಗೆಯ ಬಗ್ಗೆ ಚರ್ಚಿಸುವ ಕಾರ್ಯಕ್ರಮದಲ್ಲಿ ಪ್ರಮುಖ ಉದ್ಯಮಿಗಳು ಭಾಗವಹಿಸುತ್ತಿದ್ದಾರೆ. ಇಂದಿನ ಅಧಿವೇಶನಗಳಲ್ಲಿ ಭವಿಷ್ಯದ ತಂತ್ರಜ್ಞಾನಗಳು: ನವೋದ್ಯಮಗಳು ನವ ಭಾರತದ ಗಾಥೆಯನ್ನು ರೂಪಿಸುವ ಇಟ್ಟಿಗೆಗಳಾಗಿ ನವೋದ್ಯಮಗಳು, ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ ಡಿಸಿ) ಮತ್ತು ವಿದ್ಯಾರ್ಥಿ ಉದ್ಯಮಿಗಳ ಭವಿಷ್ಯ ನಿರ್ಮಾಣ ಮತ್ತು ನವೋದ್ಯಮಗಳಿಗಾಗಿ ಜಿ 20 ಅಭಿಯಾನ ಮೊದಲಾದ ವಿಷಯ ಸೇರಿದ್ದವು.

Published On: 19 November 2022, 03:39 PM English Summary: Union Minister Piyush Goyal Talks About Digital India

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.