1. ಸುದ್ದಿಗಳು

#Paddy Price: ಕ್ವಿಂಟಲ್ ಭತ್ತಕ್ಕೆ ₹2450 ನಿಗದಿ, ಜಿಲ್ಲಾಡಳಿತದಿಂದ ಸ್ಪಷ್ಟನೆ

Kalmesh T
Kalmesh T
Fixed at ₹2450 per quintal of paddy, clarified by district administration

ಭತ್ತ ಬೆಳೆಯುವ ರೈತರಿಗೆ ಇಲ್ಲಿದೆ ಸ್ವಲ್ಪ ಸಮಾಧಾನದ ಸುದ್ದಿ. ಕ್ವಿಂಟಲ್ ಭತ್ತಕ್ಕೆ ₹2450 ನಿಗದಿಪಡಿಸಿರುವ ಕುರಿತು ಜಿಲ್ಲಾಡಳಿತ ಮಾಹಿತಿ ನೀಡಿದೆ.

ರೈತರಿಗೆ ಸಿಹಿಸುದ್ದಿ: ಜಮೀನಿನಲ್ಲಿ ಶ್ರೀಗಂಧದ ಬೆಳೆಯಲು ಸಚಿವ ಸಂಪುಟ ಅನುಮೋದನೆ!

ಕರಾವಳಿ ಜಿಲ್ಲೆಗಳಲ್ಲಿ ಬೆಳೆಯಲಾಗುವ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು MO-4 ಭತ್ತದ ತಳಿಗಳನ್ನು  ಜಿಲ್ಲೆಯ ರೈತರಿಂದ ಖರೀದಿಸಿ, ಕುಚ್ಚಲಕ್ಕಿಯನ್ನಾಗಿ ಪರಿವರ್ತಿಸಿ, ಪಡಿತರದಲ್ಲಿ ವಿತರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ನವೆಂಬರ್‌ 21ರಿಂದ ನೋಂದಣಿ ಆರಂಭವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.

ಅಡಿಕೆ ಬೆಳೆಗೆ ಕೀಟ ದಾಳಿ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ ಮಂಜೂರು-ಸಿಎಂ ಬೊಮ್ಮಾಯಿ

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 2 ಸಾವಿರದ 40 ರೂಪಾಯಿ ಹಾಗೂ ಗ್ರೇಡ್ 'ಎ' ಭತ್ತಕ್ಕೆ 12 ಸಾವಿರದ 60 ರೂಪಾಯಿ ಕನಿಷ್ಠ ಬೆಂಬಲ ಬೆಲೆ ಮತ್ತು ಸ್ಥಳೀಯ ಭತ್ತಕ್ಕೆ ಪ್ರತಿ ಕ್ವಿಂಟಲ್ ಗೆ 1500 ಪ್ರೋತ್ಸಾಹ ಧನ ನೀಡಿ ಖರೀದಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ರೈತಮಿತ್ರರ ಗಮನಕ್ಕೆ: ಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ

ಜಿಲ್ಲೆಯ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 16 ಕ್ವಿಂಟಲ್‌ನಂತೆ  ಗರಿಷ್ಠ 40 ಕ್ವಿಂಟಲ್ ಖರೀದಿಸಲಾಗುವುದು. ರೈತರ ನೋಂದಣಿ ಕಾರ್ಯವನ್ನು ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಕೃಷಿ ಮಾರುಕಟ್ಟೆ ಸಮಿತಿಯ ಎ.ಪಿ.ಎಂ.ಸಿ ಯಾರ್ಡ್‌ನಲ್ಲಿ ಹಾಗೂ ಕಾಪು, ಬ್ರಹ್ಮಾವರ, ಕೋಟ, ಬೈಂದೂರು ಹಾಗೂ ಅಜೆಕಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಲಾಗುವುದು. ಡಿ.1 ರಿಂದ ಫೆ 28 ರವರೆಗೆ ಭತ್ತ ಖರೀದಿ ನಡೆಯಲಿದೆ ಎಂದು ತಿಳಿಸಿದ್ದಾರೆ.

Published On: 19 November 2022, 06:00 PM English Summary: Fixed at ₹2450 per quintal of paddy, clarified by district administration

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.