1. ಸುದ್ದಿಗಳು

Unemployment in india ಭಾರತದಲ್ಲಿ ಇನ್ನೂ ಮೂರು ಪಟ್ಟು ಹೆಚ್ಚಾಗಲಿದೆ ನಿರುದ್ಯೋಗ ಸಮಸ್ಯೆ!

Hitesh
Hitesh
Unemployment in India Unemployment problem will increase three times in India!

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಹಿಂದೆದಿಗಿಂತಲೂ ಭೀಕರವಾಗಿ ಕಾಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನ ಹೊರತಾಗಿಯೂ ನಿರುದ್ಯೋಗ ಸಮಸ್ಯೆ ಹತೋಟಿಗೆ ಬರುತ್ತಿಲ್ಲ.  

ವಿದ್ಯಾಭ್ಯಾಸ ಮುಗಿಸಿ ಇದೀಗ ಉದ್ಯೋಗ ಹುಡುಕಲು ಪ್ರಾರಂಭಿಸಿರುವವರನ್ನು ಬಿಡಿ, ಈಗಾಗಲೇ ಉದ್ಯೋಗದಲ್ಲಿ ನೆಲ ಕಂಡುಕೊಂಡವರೂ, ಸಹ ಇತ್ತೀಚಿನ ದಿನಗಳಲ್ಲಿ ಉದ್ಯೋಗದಲ್ಲಿ ಉಳಿದುಕೊಳ್ಳಲು ಕಸರತ್ತು ನಡೆಸುವ ಪರಿಸ್ಥಿತಿ ಎದುರಾಗಿದೆ.

ಈಚೆಗಷ್ಟೇ ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ   ಸಂಸ್ಥೆಯು ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯ ಕುರಿತು ವಿಸ್ತಾರವಾದ ವರದಿ ಬಿಡುಗಡೆ ಮಾಡಿದೆ.

ವರದಿಯ ಅಂಕಿ- ಅಂಶಗಳು ಕಳವಳ ಮೂಡಿಸುತ್ತದೆ. ದೇಶದಲ್ಲಿ 2022ರ ಡಿಸೆಂಬರ್‌ ತಿಂಗಳಲ್ಲಿ ನಿರುದ್ಯೋಗ ಪ್ರಮಾಣವು ಶೇಕಡ 8.30ಕ್ಕೆ ಏರಿಕೆ ಆಗಿದ್ದು ವರದಿ ಆಗಿತ್ತು.

ಈ ಪ್ರಮಾಣದ ನಿರುದ್ಯೋಗವು 16 ತಿಂಗಳಲ್ಲಿಯೇ ಗರಿಷ್ಠ ಎನ್ನುವ ಆಘಾತಕಾರಿ ಅಂಶವೂ ವರದಿ ಆಗಿತ್ತು.

Today Weather ಇಂದಿನ ಹವಾಮಾನ ಹೇಗಿದೆ, ಎಲ್ಲೆಲ್ಲಿ ಗರಿಷ್ಠ ತಾಪಮಾನ ?

ನಗರ ಪ್ರದೇಶದಲ್ಲಿ ಇದರ ಪ್ರಮಾಣವು ಕಳೆದ ನವೆಂಬರ್‌ ತಿಂಗಳಲ್ಲಿ ಶೇಕಡವಾರು 8.96ರಷ್ಟು ಇದ್ದರೆ, ಡಿಸೆಂಬರ್‌ನಲ್ಲಿ ಶೇಕಡವಾರು 10.09ಕ್ಕೆ ಏರಿಕೆಯಾಗಿತ್ತು.

ಆದರೆ, ಗ್ರಾಮೀಣ ಪ್ರದೇಶದ ನಿರುದ್ಯೋಗ ಪ್ರಮಾಣವು ಇದೇ ಅವಧಿಯಲ್ಲಿ ಶೇ 7.55ರಿಂದ ಶೇ 7.44ಕ್ಕೆ ಇಳಿಕೆಯಾಗಿತ್ತು. 

ಸಮಾಧಾನಕರ ಸಂಗತಿ ಎಂದರೆ ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ ಅಲ್ಪ ಪ್ರಮಾಣದಲ್ಲಿ ಇಳಿಕೆಯಲ್ಲಿದೆ.

ಅತ್ಯಂತ ಕಡಿಮೆ ನಿರುದ್ಯೋಗ ಇರುವ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣವು ಶೇ 2.5ರಷ್ಟಿದೆ. 

PMKisanUpdate ಪಿ.ಎಂ ಕಿಸಾನ್‌ ಹಣ ಇದೇ ದಿನ ನಿಮ್ಮ ಖಾತೆಗೆ ಬರಲಿದೆ!

ಆರ್ಥಿಕ ಪ್ರಗತಿ ಆಗುತ್ತಿದ್ದರೂ, ದೇಶದಲ್ಲಿ ಅದೇ ಪ್ರಮಾಣದಲ್ಲಿ ಉದ್ಯೋಗ  ಸೃಷ್ಟಿ ಆಗುತ್ತಿಲ್ಲ.

ಇನ್ನು ಎನ್‌ಎಸ್‌ಒ ದತ್ತಾಂಶದ ಪ್ರಕಾರ, 2005ರಿಂದ 2012ರ ನಡುವಣ ಅವಧಿಯಲ್ಲಿ ಪ್ರತಿವರ್ಷ 75 ಲಕ್ಷ ಕೃಷಿಯೇತರ ಉದ್ಯೋಗಗಳು ಸೃಷ್ಟಿ ಆಗುತ್ತಿತ್ತು.

ಇನ್ನು 2013 ವರ್ಷದಿಂದ 2019ರ ವರೆಗಿನ ಅವಧಿಯಲ್ಲಿ ಪ್ರತಿವ 29 ಉದ್ಯೋಗಗಳು ಮಾತ್ರ ಸೃಷ್ಟಿ ಆಗಿವೆ.

ನಿರುದ್ಯೋಗಿಗಳ ಗುಂಪಿಗೆ ಲಕ್ಷಾಂತರ ಯುವಜನರು ಪ್ರತಿವರ್ಷ ಸೇರ್ಪಡೆ ಆಗುತ್ತಲೇ ಇದ್ದಾರೆ. 

ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಲು ಪ್ರಮುಖವಾಗಿ ಎರಡು ಕಾರಣಗಳನ್ನು ಗುರುತಿಸಲಾಗುತ್ತಿದೆ. ಇದರಲ್ಲಿ

2016ರಲ್ಲಿ ಸೃಷ್ಟಿಯಾದ ನೋಟು ರದ್ದತಿ  

2020ರ ಬಳಿಕ ಕೋವಿಡ್‌ ಸಾಂಕ್ರಾಮಿಕ ಪರಿಸ್ಥಿತಿಯೂ ಸೇರಿದೆ.

ನೋಟು ರದ್ದತಿ ಹಾಗೂ ಜಿಎಸ್‌ಟಿಯ ಪರಿಚಯಿಸಿದ ನಂತರದಲ್ಲಿ ಸಣ್ಣ ಉದ್ದಿಮೆಗಳು ನಿರೀಕ್ಷಿತ ಪ್ರಮಾಣದಲ್ಲಿ ಚೇತರಿಕೆ ಕಂಡಿಲ್ಲ.

ಇದೆಲ್ಲದರ ನಡುವೆ ಚಿಲ್ಲರೆ ಹಣದುಬ್ಬರವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 

ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ನಂತರದಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕೋವಿಡ್‌ ನಂತರದಲ್ಲಿ ಆರ್ಥಿಕ ವ್ಯವಸ್ಥೆ ಸುಧಾರಿಸಿದರೂ, ಉದ್ಯೋಗ ಸೃಷ್ಟಿ ಆಗುತ್ತಿಲ್ಲ.

ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿರುವುದು ಆತಂಕ ಮೂಡಿಸಿದರೆ, ಇದರ  ನಡುವೆಯೇ ಮುಂದಿನ ದಿನಗಳಲ್ಲಿ ನಿರುದ್ಯೋಗ ಪ್ರಮಾಣ ಮತ್ತಷ್ಟು ಹೆಚ್ಚಳವಾಗಲಿದೆ ಎನ್ನುವ ವರದಿಯು ಮತ್ತಷ್ಟು ಚಿಂತೆಗೀಡು ಮಾಡಿದೆ. 

ಮುಂದಿನ ದಿನಗಳಲ್ಲಿ ನಿರುದ್ಯೋಗ ಪ್ರಮಾಣವು 4 ಪ್ರತಿಶತದಿಂದ 8 ಪ್ರತಿಶತಕ್ಕೆ ನಾಲ್ಕು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಎಚ್ಚರಿಕೆ ನೀಡಿದೆ.

Children Missing Case 9,018 ಮಕ್ಕಳು ರಾಜ್ಯದಲ್ಲಿ ನಾಪತ್ತೆ: ಆತಂಕಕ್ಕೆ ಕಾರಣವಾದ ಅಂಕಿ- ಅಂಶ! 

Unemployment in India Unemployment problem will increase three times in India!

ಇನ್ನು 2017ರಲ್ಲಿ ಶೇಕಡ 6 ಪ್ರತಿಶತ ಇದ್ದ ನಿರುದ್ಯೋಗ ಪ್ರಮಾಣವು  2022ರ ವೇಳೆಗೆ 8.3 ಪ್ರತಿಶತಕ್ಕೆ ಹೆಚ್ಚಳವಾಗಿದೆ.

ಅಂದಾಜಿನ ಪ್ರಕಾರ, ಮುಂದಿನ ನಾಲ್ಕು ವರ್ಷಗಳಲ್ಲಿ, 10 ಮಿಲಿಯನ್ಗೂ ಹೆಚ್ಚು ಜನ  ನಿರುದ್ಯೋಗಿಗಳಾಗಲಿದ್ದಾರೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಎಂಬ ಸಂಸ್ಥೆಯು ಭಾರತದಲ್ಲಿ ನಿರುದ್ಯೋಗ ದರವು ಪ್ರಸ್ತುತ 8.3% ರಷ್ಟಿದೆ ಎಂದು ಅಂದಾಜಿಸಿದೆ.

ಇದು ಭಾರತದ ನಗರ ಪ್ರದೇಶದಲ್ಲಿ 10.09%  ಇದ್ದು, ಗ್ರಾಮೀಣ ಭಾರತದಲ್ಲಿ 7.44% ಇದೆ ಎಂದು ವರದಿ ಮಾಡಿದೆ.

Aadhar Card -Sim Card Link ಸಿಮ್‌ ಕಾರ್ಡ್‌ಗೂ ಆಧಾರ್‌ ಕಾರ್ಡ್‌ ಜೋಡಣೆ: ಕಾರಣ ಏನು ಗೊತ್ತೆ ? 

Unemployment in India Unemployment problem will increase three times in India!

ಇನ್ನು ಜನವರಿ 2022 ರಿಂದ, ಉದ್ಯೋಗ ದರವು ಡಿಸೆಂಬರ್ 2022 ರಲ್ಲಿ 37.1% ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.

ರಾಜಸ್ಥಾನದಲ್ಲಿ 28.5%, ದೆಹಲಿಯಲ್ಲಿ 20.8% ಮತ್ತು ಹರಿಯಾಣದಲ್ಲಿ 37.4% ಹೆಚ್ಚಳವಾಗಿರುವುದು ವರದಿ ಆಗಿದೆ.

ಹಣದುಬ್ಬರ ನಿಯಂತ್ರಣಕ್ಕೆ ಮಾಸ್ಟರ್‌ ಪ್ಲಾನ್‌ ಮಾಡ್ತಿದೆ ಕೇಂದ್ರ; ಪೆಟ್ರೋಲ್‌, ಡಿಸೇಲ್‌ ದರ ಇಳಿಕೆ ?!  

ಅಂತರರಾಷ್ಟ್ರೀಯ ಮಟ್ಟದಲ್ಲಿ ದೈತ್ಯ ಸಾಫ್ಟವೇರ್‌ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದೆ.

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ತಪ್ಪಿಸಲು ಈ ಹಿಂದೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಚರ್ಚೆ ನಡೆಯುವುದರ ಜೊತೆಗೆ ಇದಕ್ಕೆ ಶೀಘ್ರ ಪರಿಹಾರವನ್ನೂ ಕಂಡುಕೊಳ್ಳಬೇಕಿದೆ.

BBMP ಬಿಬಿಎಂಪಿ ಬಜೆಟ್‌ 2023-2024ರಲ್ಲೂ ಜನರಿಗೆ ಸಿಹಿಸುದ್ದಿ ?

Published On: 23 February 2023, 12:49 PM English Summary: Unemployment in India Unemployment problem will increase three times in India!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.