1. ಸುದ್ದಿಗಳು

ಸಂಚಾರ ನಿಯಮ ಉಲ್ಲಂಘನೆ; ದಂಡ ರಿಯಾಯಿತಿ: ಅವಧಿ ವಿಸ್ತರಿಸಲು ಸಂಚಾರ ಪೊಲೀಸರಿಂದಲೇ ಮನವಿ!

Hitesh
Hitesh
Traffic violation penalty discount: request from the police to extend the period!

ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿಯಲ್ಲಿ ಶೇ50ರಷ್ಟು ರಿಯಾಯಿತಿ ಅವಧಿಯು ಶನಿವಾರ ಮುಕ್ತಾಯವಾಗಿದ್ದು, ಇದಕ್ಕೆ ಜನರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

Traffic Rules ಸಂಚಾರ ನಿಯಮ ಉಲ್ಲಂಘನೆ ದಂಡ ರಿಯಾಯಿತಿ: 35.60 ಲಕ್ಷ ಪ್ರಕರಣ ಇತ್ಯಾರ್ಥ, ಎಷ್ಟು ಕೋಟಿ ದಂಡ ಸಂಗ್ರಹ, ಏನೆಲ್ಲ ಲಾಭವಾಯ್ತು ಇಲ್ಲಿದೆ ಸಮಗ್ರ ವರದಿ!

ಇದೀಗ ಈ ಅವಧಿಯನ್ನು ವಿಸ್ತರಿಸಬೇಕು ಎನ್ನುವ ಕೋರಿಕೆ ಬಂದಿದೆ. ಹೌದು ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಯ ಅವಧಿಯನ್ನು ವಿಸ್ತರಿಸುವಂತೆ ಸಂಚಾರ ಪೊಲೀಸರೇ ಮನವಿ ಸಲ್ಲಿಸಿದ್ದಾರೆ.  

ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಸಂಬಂಧಿಸಿದಂತೆ ರಿಯಾಯಿತಿ ಸೌಲಭ್ಯದಿಂದಾಗಿ ದಂಡ ಪಾವತಿಸುವವರ ಸಂಖ್ಯೆ ಏರಿಕೆ ಆಗಿದೆ.

Pension Scheme Latest Updates: ಪಿಂಚಣಿ ಯೋಜನೆ ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ!  

ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಿಯಾಯಿತಿ ಸೌಲಭ್ಯದ ದಿನಾಂಕ ವಿಸ್ತರಣೆ ಮಾಡಲು ಪರಿಶೀಲಿಸಿ ಎಂದು ಸಂಚಾರ ಪೊಲೀಸರು, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದ್ದಾರೆ. ಆದರೆ, ಈ ಕುರಿತು ಸರ್ಕಾರದಿಂದ ಯಾವುದೇ ಸ್ಪಷ್ಟನೆ ಇಲ್ಲಿಯವರೆಗೆ ಬಂದಿಲ್ಲ.

 

ದಂಡ ಸಂಗ್ರಹದ

 ವಿವರ ಈ ರೀತಿ ಇದೆ

 ಕೋಟಿ, ಲಕ್ಷ ರೂ.ಗಳಲ್ಲಿ

ಪೊಲೀಸರು ಬಳಸಿದ ಉಪಕರಣ

15.53 ಲಕ್ಷ

43.80 ಕೋಟಿ ರೂ

ಪೇಟಿಎಂ App

1.49 ಕೋಟಿ ರೂ.

45.17 ಕೋಟಿ ರೂ.

ಸಂಚಾರ ನಿರ್ವಹಣಾ ಕೇಂದ್ರ

6,240

16.25 ಲಕ್ಷ

ಬೆಂಗಳೂರು ಒನ್‌ ಕೇಂದ್ರ

5 ಲಕ್ಷ

12.87 ಕೋಟಿ ರೂ.

 

  

ಭೀಮ್ ಆ್ಯಪ್ ಬಳಸಿದ್ದಾರೆ ಜನರ ಹಣ ಉಳಿಯುತ್ತಿತ್ತು!

ದಂಡ ಪಾವತಿಯಿಂದ ಜನರ ಹಣ ಶೇ.50ರಷ್ಟು ಹಣ ಉಳಿತಾ
ಯವಾಗಿದೆ. ಆದರೆ, ಇದರಿಂದ ಪರೋಕ್ಷವಾಗಿ ನಷ್ಟವೂ ಆಗಿದೆ ಎನ್ನುತ್ತಾರೆ ಪತ್ರಕರ್ತರಾದ ರವಿಕಾಂತ ಕುಂದಾಪುರ ಅವರು, ಈ ಕುರಿತು ಅವರು ಫೇಸ್‌ ಬುಕ್‌ನಲ್ಲಿ ಹಂಚಿಕೊಂಡ ಮಾಹಿತಿ ಈ ರೀತಿ ಇದೆ.

ಇಂಥವನ್ನು ಅವೆಷ್ಟು ಮಂದಿ ಗಮನಿಸಿದ್ದೀರೋ ಗೊತ್ತಿಲ್ಲ. ಸಾಮಾನ್ಯವಾಗಿ ಸರ್ಕಾರದ ಕೆಲಸಗಳಲ್ಲಿ ಸರ್ಕಾರದ ಉತ್ಪನ್ನ, ಅವಕಾಶ, ಅನುಕೂಲ ಅಥವಾ ಸಂಸ್ಥೆಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದಿಲ್ಲ.

ಆ ಮೂಲಕ ಸರ್ಕಾರದ ಒಂದು ಉತ್ಪನ್ನವನ್ನು ಪ್ರಮೋಟ್ ಮಾಡುವ ಅವಕಾಶ ಕಳೆದುಕೊಳ್ಳುವ ಜೊತೆಗೆ ಸರ್ಕಾರಕ್ಕೆ ಬರಬಹುದಾದ ಆದಾಯ ಅನುಕೂಲಗಳೂ ಕೈತಪ್ಪಿ ಹೋಗಿರುತ್ತವೆ‌.

ಅಂಥದ್ದೇ ಒಂದು ನಷ್ಟ ಈ ಶೇ. 50 ರಿಯಾಯಿತಿ ಮೇರೆಗೆ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಅಭಿಯಾನ ವೇಳೆ ನಡೆದಿದೆ.

ದಂಡದ ಹಣವನ್ನು ಪೇಟಿಎಂ ಮೂಲಕ ಪಾವತಿಸಿದರೆ ಸುಮಾರು ಶೇ. 1.25 ಹಣ ಹೆಚ್ಚುವರಿಯಾಗಿ ಕಡಿತಗೊಳ್ಳುತ್ತದೆ.

ಉದಾಹರಣೆಗೆ 250 ರೂ. ದಂಡ ಪಾವತಿಸುವವರು ಪೇಟಿಎಂ ಮೂಲಕ ಅದನ್ನು ಪಾವತಿಸಿದರೆ ಆಗ ಅವರ ಖಾತೆಯಿಂದ 252.95 ಪೈಸೆ ಕಡಿತಗೊಂಡಿರುತ್ತದೆ.

ಈ ಅಭಿಯಾನದಲ್ಲಿ 9 ದಿನಗಳಲ್ಲಿ ಶೇ.50 ವಿನಾಯಿತಿ ಮೇರೆಗೆ ಒಟ್ಟು 120 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

ಆ ಪೈಕಿ ಪೇಟಿಎಂ ಮೂಲಕ ಸಂಗ್ರಹವಾದ ಮೊತ್ತ ಬರೋಬ್ಬರಿ 51 ಕೋಟಿ ರೂಪಾಯಿ. ಅಂದರೆ ಪೇಟಿಎಂ ಮೂಲಕ 15 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಂಡಿವೆ.

ಒಂದು ವೇಳೆ ಪೇಟಿಎಂ ಬದಲು ಭೀಮ್ ಆ್ಯಪ್ ಬಳಸಿದ್ದರೆ 15 ಲಕ್ಷಕ್ಕೂ ಅಧಿಕ‌ ಮಂದಿ ಭೀಮ್ ಆ್ಯಪ್ ಬಳಸುವ ಮೂಲಕ ಅದು ಹೆಚ್ಚು ಪ್ರಚಲಿತ ಮತ್ತು ಜನಪ್ರಿಯಗೊಳ್ಳುತ್ತಿತ್ತು. ಮಾತ್ರವಲ್ಲ ಪೇಟಿಎಂ‌ ಮೂಲಕ ಹೆಚ್ಚುವರಿಯಾಗಿ ಸಂಗ್ರಹವಾದ 51 ಲಕ್ಷ ರೂ. ಜನರ ಹಣ ಉಳಿಯುತ್ತಿತ್ತು.

ಒಂದು ವೇಳೆ ಭೀಮ್ ಮೂಲಕವೂ ಹೆಚ್ಚುವರಿ ಸಂಗ್ರಹವಾಗಿದ್ದರೆ ಜನರ ಹಣ ಸರ್ಕಾರಕ್ಕೆ ತಲುಪಿ ಸರ್ಕಾರಿ ಖಜಾನೆಗೇ ಸೇರಿತು, ಅದು ಮತ್ತೊಂದು ರೂಪದಲ್ಲಿ ಜನರಿಗೇ ಬಳಕೆ ಆಗುತ್ತದೆ ಅಂತ ಸಮಾಧಾನ ಪಡಬಹುದಿತ್ತು ಎಂದು ಅವರು ಬರೆದುಕೊಂಡಿದ್ದಾರೆ.

ನಿಯಮ ಉಲ್ಲಂಘಿಸಿದವರಿಗೆ ಡಿಸ್ಕೌಂಟ್‌; ಓಡೋಡಿ ಬಂದು ದಂಡ ಕಟ್ತಿದ್ದಾರೆ ಜನ: 13.18 ಕೋಟಿ ವಸೂಲಿ!  

ಹಣ

ಸಂಚಾರ ನಿಯಮ ಉಲ್ಲಂಘನೆ; ದಂಡ ರಿಯಾಯಿತಿ ಹಿನ್ನೆಲೆ ಏನು

ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿಯಲ್ಲಿ ಶೇ50ರಷ್ಟು ರಿಯಾಯಿತಿ ನೀಡಿದ್ದರಿಂದ ಲಕ್ಷಾಂತರ ಪ್ರಕರಣಗಳು ಇತ್ಯಾರ್ಥವಾಗಿದ್ದು, ಕೋಟ್ಯಾಂತರ ರೂಪಾಯಿ ವಸೂಲಿ ಆಗಿದೆ.

ಈ ಸಣ್ಣ ನಿರ್ಧಾರದಿಂದ ಹಲವು ಉಪಯೋಗಗಳು ಆಗಿವೆ. ಅಲ್ಲದೇ ಸಾವಿರಾರು ಜನರು ತಾವೇ ಬಂದು ದಂಡ ಪಾವತಿಸಿ ನಿರಾಳರಾಗಿದ್ದಾರೆ. ನಿಯಮ ಉಲ್ಲಂಘಿಸಿದವರೂ ಹಾಗೂ ಕೋರ್ಟ್‌ನಲ್ಲಿ ನಿರ್ದಿಷ್ಟ ದಿನಾಂಕದ ವರೆಗೆ ಪ್ರಕರಣ ಬಾಕಿ ಇರುವವರಿಗೆ ದಂಡ ಪಾವತಿಯಿಂದ ಶೇ50ರಷ್ಟು ರಿಯಾಯಿತಿಯನ್ನು ನೀಡಲಾಗಿತ್ತು.

ರಾಜ್ಯ ಸರ್ಕಾರದ ನಿರ್ಧಾರಿದಂದ ಕಳೆದ 9 ದಿನಗಳಲ್ಲಿ ಬರೋಬ್ಬರಿ 102 ಕೋಟಿ ದಂಡ ಸಂಗ್ರಹವಾಗಿದೆ.   

ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ಸಂಬಂಧಿಸಿದಂತೆ ರಾಜ್ಯ ಸಾರಿಗೆ ಇಲಾಖೆಯು ಶೇ.50 ರಷ್ಟು ರಿಯಾಯಿತಿ ಘೋಷಿಸಿತ್ತು.

ಇದಕ್ಕೆ ಸಂಬಂಧಿಸಿದಂತೆ ಜನರಿದಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರಾಫಿಕ್ ಪೊಲೀಸ್ ಖಜಾನೆಗೆ ಕೋಟಿ ಕೋಟಿ ರೂಪಾಯಿ ಸಂಗ್ರಹವಾಗಿದೆ. 

ಸಾವಿರಾರು ರೂಪಾಯಿ ದಂಡ ಅರ್ಧದಷ್ಟು ಕಡಿಮೆ ಆಗುತ್ತೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸಂಚಾರ ನಿಯಮ ಉಲ್ಲಂಘಿಸಿದ್ದ ವಾಹನ ಸವಾರರು ದಂಡ ಪಾವತಿಸಲು ಮುಗಿಬಿದ್ದು, ದಂಡ ಪಾವತಿಸಿದ್ದಾರೆ.   

ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಲು ಬಾಕಿ ಇರುವವರು ಮತ್ತು ಪ್ರಕರಣ ಕೋರ್ಟ್‌ನಲ್ಲಿ ಇದ್ದರೆ, ಅಂಥವರಿಗೆ ದಂಡ ಪಾವತಿಯಲ್ಲಿ ಶೇ.50ರಷ್ಟು ವಿನಾಯಿತಿಯನ್ನು ನೀಡಿ ರಾಜ್ಯ ಸಾರಿಗೆ ಇಲಾಖೆ ಆದೇಶ ಮಾಡಿದ್ದು, ಇದಕ್ಕೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಫೆ.11ರಂದು ಲೋಕ ಅದಾಲತ್‌ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಂಡ ಪಾವತಿಯಲ್ಲಿ ರಿಯಾಯಿತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ವೀರಪ್ಪ ಅವರು ಮನವಿ ಮಾಡಿದ್ದರು.   

State Budget ರಾಜ್ಯ ಬಜೆಟ್‌ 2023-24: ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಸರ್ಕಾರಕ್ಕೆ ಸುದೀರ್ಘ ಪತ್ರ, ಪ್ರಮುಖ ಬೇಡಿಕೆಗಳ ಪಟ್ಟಿ ಇಲ್ಲಿದೆ  

Published On: 12 February 2023, 12:40 PM English Summary: Traffic violation penalty discount: request from the police to extend the period!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.