1. ಸುದ್ದಿಗಳು

ನಿಯಮ ಉಲ್ಲಂಘಿಸಿದವರಿಗೆ ಡಿಸ್ಕೌಂಟ್‌; ಓಡೋಡಿ ಬಂದು ದಂಡ ಕಟ್ತಿದ್ದಾರೆ ಜನ: 13.18 ಕೋಟಿ ವಸೂಲಿ!

Hitesh
Hitesh
Discount for violators; People rushed and paid the fine: 13.18 crores were collected!

ಮೂರು ನಾಲ್ಕು ದಿನಗಳ ಹಿಂದಿನ ಮಾತು ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಂದ ದಂಡ ಪಾವತಿಸಲು ಪರದಾಡುತ್ತಿದ್ದರು. ಇದೀಗ ಜನರೇ ಓಡೋಡಿ ದಂಡ ಪಾವತಿಸುತ್ತಿದ್ದಾರೆ.

LIc Jeevan Azad ಕನಿಷ್ಠ ಮೊತ್ತ ಪಾವತಿಸಿದರೆ 5 ಲಕ್ಷ ರೂ. ಪಡೆಯಬಹುದು!

ಸಂಚಾರ ನಿಯಮ ಉಲ್ಲಂಘಿಸಿದ್ದರೆ ಶೇ50ರಷ್ಟು ರಿಯಾಯಿತಿ ಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ಜನರಿಂದ ಅತ್ಯುತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶೇ50ರಷ್ಟು ದಂಡ ಕಡಿತವಾದ ಬೆನ್ನಲ್ಲೇ ಸಾವಿರಾರೂ ಜನ ಸರತಿ ಸಾಲಿನಲ್ಲಿ ನಿಂತಂತೆ ಹಲವರು ದಂಡ ಪಾವತಿ ಮಾಡುತ್ತಿದ್ದಾರೆ.

ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ಸಂಬಂಧಿಸಿದಂತೆ ರಾಜ್ಯ ಸಾರಿಗೆ ಇಲಾಖೆಯು ಶೇ.50 ರಷ್ಟು ರಿಯಾಯಿತಿ ಘೋಷಿಸಿದೆ.

ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ: ವಿ.ವಿಗಳಿಂದ ವಿದ್ಯಾರ್ಥಿಗಳನ್ನು ಕಳುಹಿಸಲು ಮನವಿ! 

ಇದಕ್ಕೆ ಸಂಬಂಧಿಸಿದಂತೆ ಜನರಿದಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರಾಫಿಕ್ ಪೊಲೀಸ್ ಖಜಾನೆಗೆ ಕೋಟಿ ಕೋಟಿ ರೂಪಾಯಿ ಸಂಗ್ರಹವಾಗಿದೆ.  

ಸಾವಿರಾರು ರೂಪಾಯಿ ದಂಡ ಅರ್ಧದಷ್ಟು ಕಡಿಮೆ ಆಗುತ್ತೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸಂಚಾರ ನಿಯಮ ಉಲ್ಲಂಘಿಸಿದ್ದ ವಾಹನ ಸವಾರರು ದಂಡ ಪಾವತಿಸಲು ಇಂದು ಸಹ ಮುಗಿಬಿದ್ದಿದ್ದಾರೆ.  ಒಟ್ಟಾರೆ ಕಳೆದ ಎರಡು ದಿನಗಳಲ್ಲಿ 13.81 ಕೋಟಿ ರೂಪಾಯಿ ದಂಡ ವಸೂಲಿಯಾಗಿದೆ!

ಈ ರೀತಿ ಜನರೇ ಬಂದು ದಂಡ ಪಾವತಿಸುತ್ತಿರುವುದು ಸಂಚಾರ ಪೊಲೀಸರಲ್ಲೂ ಅಚ್ಚರಿ ಮೂಡಿಸಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದವರು ಶೇ.50 ರಷ್ಟು ರಿಯಾಯಿತಿ ಘೋಷಿಸಿದ ಮೊದಲ ದಿನವೇ 5 ಕೋಟಿ ರೂಪಾಯಿ ಸಂಗ್ರಹವಾಗಿತ್ತು.

ಫೈಟರ್‌ ಜೆಟ್‌ ಹಾರಿಸಿ ಚೀನಾದ ಬೇಹುಗಾರಿಕೆ ಬಲೂನ್‌ ಸ್ಫೋಟಿಸಿದ ಅಮೆರಿಕಾ! 

ಎರಡನೇ ದಿನವಾದ ಶನಿವಾರ ಸಂಜೆ 5 ಗಂಟೆ ವೇಳೆಗೆ 2,52,520 ಪ್ರಕರಣಗಳಲ್ಲಿ 6.80 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಈ ಮೂಲಕ  ಒಟ್ಟು 4.77 ಲಕ್ಷ  ಗಳಲ್ಲಿ 13 ಕೋಟಿ 81 ಲಕ್ಷ 13 ಸಾವಿರದ 621 ರೂಪಾಯಿ ದಂಡ ವಸೂಲಿಯಾಗಿದೆ.

ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಲು ಬಾಕಿ ಇರುವವರು ಮತ್ತು ಪ್ರಕರಣ ಕೋರ್ಟ್‌ನಲ್ಲಿ ಇದ್ದರೆ, ಅಂಥವರಿಗೆ ದಂಡ ಪಾವತಿಯಲ್ಲಿ ಶೇ.50ರಷ್ಟು ವಿನಾಯಿತಿಯನ್ನು ನೀಡಿ ರಾಜ್ಯ ಸಾರಿಗೆ ಇಲಾಖೆ ಆದೇಶ ಮಾಡಿದ್ದು, ಇದಕ್ಕೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶುಕ್ರವಾರ ಒಂದೇ ದಿನ ಬೆಂಗಳೂರಿನಲ್ಲಿ ಬರೋಬ್ಬರಿ 5.61 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ.

ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಿಂದ ಉದ್ಯಮಿ ಗೌತಮ್ ಅದಾನಿ ಔಟ್‌! 

Discount for violators; People rushed and paid the fine: 13.18 crores were collected!

ಅಲ್ಲದೇ ಈ ಮೂಲಕ 2 ಲಕ್ಷ ಪ್ರಕರಣಗಳು ಇತ್ಯಾರ್ಥವಾದಂತಾಗಿದೆ. ಫೆ.11ರಂದು ಲೋಕ ಅದಾಲತ್‌ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಂಡ ಪಾವತಿಯಲ್ಲಿ ರಿಯಾಯಿತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ವೀರಪ್ಪ ಅವರು ಮನವಿ ಮಾಡಿದ್ದರು.

ಅದರಂತೆ ಶೇ.50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಶೇ.50ರಷ್ಟು ದಂಡ ವಿನಾಯಿತಿ ಫೆ.11ರ ವರೆಗೆ ಇರಲಿದೆ. ಫೆ.11ರ ನಂತರ ಸಂಪೂರ್ಣ ದಂಡ ಪಾವತಿ ಮಾಡಬೇಕಾಗುತ್ತದೆ.

ಸಾವಿನ ನಂತರವೂ ಆತ್ಮೀಯರೊಂದಿಗೆ ಗೊಬ್ಬರ ರೂಪದಲ್ಲೂಳಿವ ಪರಿಕಲ್ಪನೆ! 

Published On: 05 February 2023, 03:50 PM English Summary: Discount for violators; People rushed and paid the fine: 13.18 crores were collected!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.