1. ಸುದ್ದಿಗಳು

ಸಿಂಹಗಳ ಜೊತೆ ವಾಕಿಂಗ್‌ ಹೊರಟ ಯುವತಿ..ವಿಡಿಯೋ ವೈರಲ್‌

Maltesh
Maltesh
Today's Top Agri News

ಕುಣಿಗಲ್ ತಾಲೂಕಿನ  ಎಲ್ಲ ಗ್ರಾಮಗಳಿಗೆ ನೀರು ಹರಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ತುಮಕೂರಿನ ಜನ ಸಂಕಲ್ಪ ಯಾತ್ರೆಯಲ್ಲಿ  ಭಾಗವಹಿಸಿ ಮಾತನಾಡಿದ  ಸಿಎಂ  ಬೊಮ್ಮಾಯಿ ಕುಣಿಗಲ್‌ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಈ ಭಾಗದಲ್ಲಿ ಪ್ರಮುಖವಾಗಿ ಆಗಲೇಬೇಕಾಗಿರುವ, ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ನೀರು ಹರಿಸುವ. ಹಾಗೂ ಹೇಮಾವತಿ ಕಾಲುವೆ ಮೂಲಕ ಕುಣಿಗಲ್ ತಾಲೂಕಿನ ಎಲ್ಲಾ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ತೀವ್ರ ಚರ್ಚೆಗೆ ಕಾರಣವಾಗಿರುವ ಜಿಎಂ ಸಾಸಿವೆಗೆ ಅನುಮತಿ ಕೊಡ್ಬೇಡಿ ಎಂದು  ಪ್ರಧಾನಿ ಮೋದಿಗೆ ದೇಶಾದ್ಯಂತ ನೂರಕ್ಕು ಹೆಚ್ಚು ವೈದ್ಯರು ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಅನುವಂಶೀಯವಾಗಿ ಮಾರ್ಪಡಿಸಿದ (ಜಿಎಂ) ಸಾಸಿವೆಯ ಪ್ರಯೋಗಗಳನ್ನು  ತಕ್ಷಣವೇ ನಿಲ್ಲಿಸುವಂತೆ ಕೋರಿ ನೂರಕ್ಕೂ ಹೆಚು ವೈದ್ಯರು ಪ್ರಧಾನಿ ಮೋದಿಗೆ ಪತ್ರ ಬರೆದು ವಿನಂತಿಸಿದ್ದಾರೆ.

ತಳೀಯವಾಗಿ ಮಾರ್ಪಡಿಸಿದ ಸಾಸಿವೆ DMH-11 ಮತ್ತು ಸಸ್ಯನಾಶಕ ಗ್ಲುಫೋಸಿನೇಟ್-ಅಮೋನಿಯಮ್‌ಗೆ ನಿರೋಧಕವಾಗಿದ್ದು, ಅದನ್ನು ಪರಿಸರಕ್ಕೆ ಬಿಡುಗಡೆ ಮಾಡುವುದನ್ನು ನಿಲ್ಲಿಸುವಂತೆ ಪ್ರದಾನಿ ಮೋದಿ ಅವರನ್ನ ಒತ್ತಾಯಿಸಿದ್ದಾರೆ.

ಹೆಚ್‌ಟಿ ತಂತ್ರಜ್ಞಾನವು ಹೆಚ್ಚಾಗಿ ಕಾರ್ಸಿನೋಜೆನಿಕ್ ಆಗಿದೆ. ಇದು ಒಂದು ಸೈಲೆಂಟ್‌ ಕಿಲ್ಲರ್‌ ಆಗಿದ್ದು, ಮಣ್ಣು, ಸೂಕ್ಷ್ಮಜೀವಿಗಳು, ಪರಾಗಸ್ಪರ್ಶಕಗಳು, ಬಹುತೇಕ ಎಲ್ಲಾ ಔಷಧೀಯ ಗಿಡಮೂಲಿಕೆಗಳನ್ನು ಕೊಲ್ಲುತ್ತದೆ. ಮತ್ತು ಬೆಳೆ ವೈವಿಧ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ.

ಸರ್ಕಾರಿ ಅಫೀಸ್‌ ಮುಂದೆ ಎತ್ತು ಮೂತ್ರ ವಿಸರ್ಜಿಸಿದೆ ಎಂಬ ಕಾರಣಕ್ಕೆ ರೈತನಿಗೆ ದಂಡ ವಿಧಿಸಿರುವ ಅಪರೂಪದ ಘಟನೆ ನೆರೆಯ ತೆಲಂಗಾಣದಲ್ಲಿ ನಡೆದಿದೆ.

ಸುಂದರ್ ಲಾಲ್ ಎಂಬ ರೈತನಿಗೆ ಸೇರಿದ ಎತ್ತು,  ಭದ್ರಾದ್ರಿ ಹೊತ್ತಗುಡೆಂ ಜಿಲ್ಲೆಯ SCCL ಕಲ್ಲಿದ್ದಲು ಕಂಪನಿ ಮುಂದೆ ಮೂತ್ರ ವಿಸರ್ಜನೆ ಮಾಡಿತ್ತು ಎನ್ನಲಾಗಿದೆ. ಇದರಿಂದ ಕೋಪಗೊಂಡ ಕಂಪನಿ ರೈತನಿಗೆ ದಂಡ ವಿಧಿಸಿದ್ದಾರೆ ಎನ್ನಲಾಗಿದೆ.

ಇತ್ತ ರೈತ ಸುಂದರ್ ಲಾಲ್ ನಿಂದ ಭೂಮಿ ವಶಪಡಿಸಿಕೊಂಡಿದ್ದ ಈ ಕಲ್ಲಿದ್ದಲು ಕಂಪನಿ ಆತನಿಗೆ ಪರಿಹಾರ ಕೊಟ್ಟಿರಲಿಲ್ಲ. ಹೀಗಾಗಿ ಎತ್ತಿನ ಗಾಡಿ ಏರಿ ಕಚೇರಿಗೆ ಬಂದಿದ್ದ ಸುಂದರ್ ಲಾಲ್ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಇದಕ್ಕೆ ಕಂಪನಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅಷ್ಟೇ ಅಲ್ಲ, ಸುಂದರ್ ಲಾಲ್ ನನ್ನು ಯಾವುದಾದರೂ ರೀತಿಯಲ್ಲಿ ಸಿಲುಕಿಸಲು ಪ್ರಯತ್ನ ನಡೆಸಿದ್ದರು.

ಆಗ ಎತ್ತು ಮೂತ್ರ ವಿಸರ್ಜಿಸಿದ್ದು, ಇದನ್ನೇ ನೆಪ ಮಾಡಿಕೊಂಡ ಅಧಿಕಾರಿಗಳು ಸಿಸಿ ಟಿವಿಯಲ್ಲಿ ದಾಖಲಾಗಿದ್ದ ಈ ದೃಶ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ನ್ಯಾಯಾಲಯ ಕೂಡ 100 ರೂಪಾಯಿ ದಂಡ ಹಾಕಿದೆ.

ನಿನ್ನೆ ನವದೆಹಲಿಯಲ್ಲಿ ಫರ್ಟಿಲೈಸರ್ ಅಸೋಸಿಯೇಷನ್ ​​ಆಫ್ ಇಂಡಿಯಾದ ವಾರ್ಷಿಕ ಸೆಮಿನಾರ್ ಜರುಗಿತು. ಕಾರ್ಯಕ್ರಮವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್‌ ಮಾಂಡವೀಯಾ  ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಆಹಾರ ಭದ್ರತೆಯನ್ನು ಖಾತರಿಪಡಿಸುವ ಪ್ರಮುಖ ಅಂಶಗಳಲ್ಲಿ ಒಂದು ರಸಗೊಬ್ಬರವಾಗಿದೆ ಎಂದು ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ರಸಗೊಬ್ಬರ, ಕಚ್ಚಾ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. “ನಮ್ಮ ಸರ್ಕಾರವು ವಿವಿಧ ಸುಧಾರಣೆಗಳನ್ನು ತಂದಿದೆ ಮತ್ತು ರಸಗೊಬ್ಬರಗಳನ್ನು ಭಾರತೀಯ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದೆ.

2019-20 ರ ಸಾಂಕ್ರಾಮಿಕ-ಪೂರ್ವ ವರ್ಷಕ್ಕೆ US ಡಾಲರ್ 10 ಶತಕೋಟಿಯಿಂದ ಪ್ರಸ್ತುತ ವರ್ಷದಲ್ಲಿ ಸುಮಾರು US ಡಾಲರ್‌ಗಳಿಗೆ 27 ಶತಕೋಟಿಗೆ ಹೆಚ್ಚಿಗೆ ಆಗಿದೆ ಎಂದರು.

ಇನ್ನು ಈ ಕಾರ್ಯಕ್ರಮದಲ್ಲಿ ರಸಗೊಬ್ಬರ ಇಲಾಖೆಯ ಕಾರ್ಯದರ್ಶಿ ಶ್ರೀ ಅರುಣ್ ಸಿಂಘಾಲ್,  FAI ಡಿಜಿ ಶ್ರೀ ಅರವಿಂದ್ ಚೌಧರಿ, FAI ಅಧ್ಯಕ್ಷ ಶ್ರೀ ಕೆಎಸ್ ರಾಜು,  ಮತ್ತು ಕೈಗಾರಿಕೆಗಳ ಪ್ರತಿನಿಧಿಗಳು ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Published On: 08 December 2022, 04:46 PM English Summary: Today's Top Agri News

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.