1. ಸುದ್ದಿಗಳು

ಕಬ್ಬಿನ ಎಫ್‌ಆರ್‌ಪಿ ನಿಗದಿ: ಟನ್‌ಗೆ ಕೇವಲ 50 ರೂ. ಕಬ್ಬು ಸುಟ್ಟು ರೈತರ ಆಕ್ರೋಶ

Hitesh
Hitesh
Sugarcane FRP fixed: Rs 50 per tonne only. Farmers' outrage over sugarcane burning

ಕಬ್ಬಿಗೆ ಹೆಚ್ಚುವರಿಯಾಗಿ ಕೇವಲ 50 ರೂಪಾಯಿ ನಿಗದಿ ಮಾಡಿರುವ ಆದೇಶವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. 17ನೇ ದಿನದ ಹೋರಾಟದ ಭಾಗವಾಗಿ ತಲೆ ಮೇಲೆ ಕಬ್ಬಿನ ಪಿಂಡಿ ಹೂತ್ತು ಪ್ರತಿಭಟಿಸಿದರು.

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ದರಕ್ಕೆ ಹೆಚ್ಚುವರಿಯಾಗಿ ಟನ್‌ಗೆ  50 ರೂಪಾಯಿ ನೀಡಲು ಹೊರಡಿಸಿರುವ ಆದೇಶ ಧಿಕ್ಕರಿಸುತ್ತೇವೆ.

ತಲೆ ಮೇಲೆ ಕಬ್ಬಿನ ಜಲ್ಲೆಗಳನ್ನು ಹೊತ್ತು ಆದೇಶವನ್ನು ಸುಟ್ಟು ಬೂದಿ ಮಾಡಿ, ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.   

ಆನೆ ಟಾಸ್ಕ್‌ಪೋರ್ಸ್‌ನಿಂದ ಕಾಡಾನೆ- ಮಾನವ ಸಂಘರ್ಷಕ್ಕೆ ಕಡಿವಾಣ

ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಯ ರಾಜ್ಯಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಅವರು ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲೀಕರಿಂದ ಹೆಚ್ಚುವರಿ

ಹಣ ಕೊಡಿಸಲು ಸರ್ಕಾರಕ್ಕೆ ಧೈರ್ಯವಿಲ್ಲದಿದ್ದರೆ, ಕಬ್ಬು ಬೆಳೆಗಾರರ ವಹಿವಾಟಿನಿಂದ ಸರ್ಕಾರಕ್ಕೆ ಬರುವ ತೆರಿಗೆ 5 ಸಾವಿರ ಕೋಟಿ ಹಣದಿಂದ

ಹೆಚ್ಚುವರಿ ಹಣ ನೀಡಲಿ, ಹಿಂದೆ ಬೆಳಗಾವಿ ಅಧಿವೇಶನದ ವೇಳೆ ರೈತನೊಬ್ಬ ಪ್ರಾಣ ಕಳೆದುಕೊಂಡಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು

ಟನ್‌ಗೆ 160 ರೂ ಹೆಚ್ಚುವರಿ ಹಣ ಘೋಷಣೆ ಮಾಡಿ 1600 ಕೋಟಿ ರೈತರಿಗೆ ನೀಡಿದ್ದಾರೆ ಅದರಂತೆ ಪ್ರಸಕ್ತ ಸರ್ಕಾರವು ನೀಡಲಿ ಎಂದು ಆಗ್ರಹಿಸಿದರು.

Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!

ರಾಜ್ಯಾದ್ಯಂತ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚವನ್ನು ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ 200 ರಿಂದ 300 ರೈತರ ಹಣದಲ್ಲಿ ಮುರಿದು ಕೊಳ್ಳುತ್ತಿದ್ದಾರೆ.

ಇದನ್ನು ಕಡಿಮೆ ಮಾಡಲು ಕ್ರಮ ಕೈಗೊಂಡು ರೈತರ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.  

ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನ ಸಕ್ಕರೆ ಕಾರ್ಖಾನೆಗಳೆ ಪರೀಕ್ಷೆ ಮಾಡಿ ವರದಿ ನೀಡುವ ಕಾರಣ ರೈತರಿಗೆ ವಂಚನೆಯಾಗುತ್ತಿದೆ ಇದನ್ನು ತಪ್ಪಿಸಬೇಕು.

ಕಬ್ಬಿನಿಂದ ಬರುವ ಎಥನಾಲ್ ಉತ್ಪನ್ನದ ಲಾಭಾಂಶ ಮಾತ್ರ ಏಕೆ, ಮೊಲಾಸಿಸ್ ಬಗ್ಯಾಸ್ ಮಡ್ಡಿ ಸಕ್ಕರೆ ಉತ್ಪನ್ನಗಳ ಲಾಭವನ್ನು ಪರಿಗಣಿಸಿ ಉತ್ಪಾದನೆಗೆ ತಗಲುವ ಖರ್ಚನ್ನ

ಕಳೆದು ರೈತರಿಗೆ ಹೆಚ್ಚುವರಿ ಹಣ ನಿಗದಿ ಮಾಡಬೇಕು. ಎಥನಾಲ್ ನಿಂದ ಹೆಚ್ಚುವರಿ 50 ಕೊಡುತ್ತೇವೆ ಎಂದರೆ ರೈತರಿಗೆ ಕೊಡುವುದು ಭಿಕ್ಷೆಯಲ್ಲ,

ಕಬ್ಬು ಬೆಳೆದ ರೈತ ಸಾಲದ ಬಲೆಯಲ್ಲಿ ಬೀಳುತ್ತಿದ್ದಾನೆ. ಕಬ್ಬುನುರಿಸುವ ಕಾರ್ಖಾನೆ ಮಾಲೀಕ ಪ್ರತಿವರ್ಷ ಹೊಸ ಹೊಸ ಕಾರ್ಖಾನೆ ಮಾಡುತ್ತಿದ್ದಾನೆ,

ಎಥನಾಲ್ ಉತ್ಪಾದನೆ ಮಾಡುವ ಕಾರ್ಖಾನೆಗಳ ಕಬ್ಬು ಬೆಳೆಗಾರರಿಗೆ ಹೆಚ್ಚುವರಿ 50 ರೂಪಾಯಿ ಎನ್ನುವ ನೀತಿ ರೈತರನ್ನು ಹೊಡೆದಾಳುವ ಕ್ರಮವಾಗಿದೆ ಎಂದು ದೂರಿದರು.  

Sugarcane FRP fixed: Rs 50 per tonne only. Farmers' outrage over sugarcane burning

ಇದೇ ತಿಂಗಳ ಹನ್ನೊಂದನೇ ತಾರೀಕು ತಮಿಳುನಾಡು, ಕೇರಳ, ಆಂಧ್ರ, ರಾಜ್ಯಗಳ ರೈತ ಮುಖಂಡರು ಬೆಂಗಳೂರಿನ ಧರಣಿ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಲಿದ್ದಾರೆ

ಅನಿವಾರ್ಯವಾದರೆ ಸಾವಿರಾರು ಸಂಖ್ಯೆ ರೈತರು ಬೆಂಗಳೂರಿಗೆ ಬರಲು ತೀರ್ಮಾನಿಸಿದ್ದಾರೆ ಎಂದರು.

ಕಬ್ಬು ಬೆಳೆಗಾರರ ರೈತರ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲಿ, ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಒತ್ತಾಯವಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಉಳುವಪ್ಪ ಬಳಗೇರ, ರಮೇಶ್ ಹೂಗಾರ್, ಜಗದೀಶ್ ಪಾಟೀಲ್, ಸುರೇಶ್ ಮಾ ಪಾಟೀಲ್, ಹತ್ತಳ್ಳಿ ದೇವರಾಜ್, ಬರಡನ್ ಪುರ ನಾಗರಾಜ್, ಶರಣು ಬಿಲ್ಲದ್ ಅವರು ಉಪಸ್ಥಿತರಿದ್ದರು. 

ಮಾಂಡೌಸ್‌ ಚಂಡಮಾರುತ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಧಾರಾಕಾರ ಮಳೆ 

Published On: 08 December 2022, 03:38 PM English Summary: Sugarcane FRP fixed: Rs 50 per tonne only. Farmers' outrage over sugarcane burning

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.