1. ಸುದ್ದಿಗಳು

ವಯೋವೃದ್ಧರ ಬದುಕಲ್ಲಿ ಮೂಡಿತು ಹೊಸ ಪ್ರೇಮ: ಸರಳವಾಗಿ ನೆರವೇರಿತು ಮದುವೆ!

Hitesh
Hitesh
A new love arose in the life of the elderly: marriage was simply fulfilled!

ವಯೋವೃದ್ಧರಿಬ್ಬರು ಬದುಕಿನ ಇಳಿ ವಯಸ್ಸಿನಲ್ಲೂ ಮದುವೆ ಆಗಿದ್ದು, ಅಚ್ಚರಿ ಮೂಡಿಸಿದ್ದಾರೆ. ಒಡಿಯಾದ ಮಹಾಕಲಪದ ಬ್ಲಾಕ್‌ನ ಗೊಗುವಾ ಗ್ರಾಮದ 70 ವರ್ಷದ ಶಕ್ತಿಪಾದ ಮಿಶ್ರಾ ಮತ್ತು 65 ವರ್ಷದ ತೇಜಸ್ವಿನಿ ಮಂಡಲ್ ವಿವಾಹವಾದ ವಯೋವೃದ್ಧರು.  

ತೇಜಸ್ವಿನಿ ಎನ್ನುವವರ ಪತಿ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದರಿಂದಾಗಿ ತೇಜಸ್ವಿನಿ ಮಾನಸಿಕವಾಗಿ ಕುಗ್ಗಿದ್ದರು.

ಅಲ್ಲದೇ  ಮಕ್ಕಳಿಂದಲೂ ನಿರ್ಲಕ್ಷ್ಯಕ್ಕೊಳಗಾಗಿದ್ದರು. ಇಂತಹ ಕಠಿಣ ಸಂದರ್ಭದಲ್ಲಿ ವೃದ್ಧ ಶಕ್ತಿಪಾದ ಎಂಬವರು  ತೇಜಸ್ವಿನಿಯವರಲ್ಲಿ ಪ್ರೀತಿಯನ್ನು ಕಂಡರು.  

ಇನ್ನು ತೇಜಸ್ವಿನಿ ಅವರಿಗೆ ಮೂವರು ಪುತ್ರರು ಇದ್ದಾರೆ. ಆದರೆ, ಮಕ್ಕಳು ಆಕೆಯನ್ನು  ಹಳ್ಳಿಯಲ್ಲೇ ಬಿಟ್ಟು ನಗರಗಳಿಗೆ ಹೋಗಿದ್ದರು.

ತೇಜಸ್ವಿನಿ ಅವರು ಹಾತ್ ಗ್ರಾಮದಲ್ಲಿ ಮಣ್ಣಿನ ಮಡಕೆಗಳನ್ನು ಮಾರಾಟ ಮಾಡುವ ಮೂಲಕ ಜೀವ ಸಾಗಿಸುತ್ತಿದ್ದರು.

ಶಕ್ತಿಪಾದ ಅವರು ಈಚೆಗೆ ತೇಜಸ್ವಿನಿ ಅವರನ್ನು ಮದುವೆಯಾಗುವಂತೆ ಕೋರಿದ್ದು, ಅವರು ಒಪ್ಪಿಗೆ ನೀಡಿದರು.

ಹೀಗಾಗಿ ಡಿಸೆಂಬರ್ 5ಕ್ಕೆ ಗ್ರಾಮದ ಜಗನ್ನಾಥ ದೇವಸ್ಥಾನದಲ್ಲಿ ಅರ್ಚಕರ ಸಮ್ಮುಖದಲ್ಲಿ ಇಬ್ಬರೂ ಸರಳವಾಗಿ ವಿವಾಹವಾಗಿದ್ದಾರೆ.

ಆನೆ ಟಾಸ್ಕ್‌ಪೋರ್ಸ್‌ನಿಂದ ಕಾಡಾನೆ- ಮಾನವ ಸಂಘರ್ಷಕ್ಕೆ ಕಡಿವಾಣ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌: ಶಕ್ತಿಪಾದ ಮಿಶ್ರಾ ಮತ್ತು  ತೇಜಸ್ವಿನಿ ಮಂಡಲ್ ಅವರ ವಿವಾಹದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಹಲವರು ವಯೋವೃದ್ಧರ ವಿವಾಹಕ್ಕೆ ಶುಭಕೋರಿದ್ದಾರೆ. 

Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!

Published On: 08 December 2022, 05:01 PM English Summary: A new love arose in the life of the elderly: marriage was simply fulfilled!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.