ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2021-22ನೇ ಸಾಲಿಗಾಗಿ ರಾಜ್ಯದ ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳಿಗೆ ಕಿರಿಯರ ಮತ್ತು ಹಿರಿಯರ ವಿಭಾಗದಲ್ಲಿ ಅಥ್ಲೆಟಿಕ್ಸ್, ಹಾಕಿ, ಬಾಸ್ಕೆಟ್‌ಬಾಲ್, ಈಜು, ಕಬಡ್ಡಿ, ಜಿಮ್ನಾಸ್ಟಿಕ್ ವಾಲಿಬಾಲ್, ಫುಟ್‍ಬಾಲ್, ಜುಡೋ, ಕುಸ್ತಿ ಮತ್ತು ಸೈಕ್ಲಿಂಗ್ ಕ್ರೀಡೆಗಳ ವಿಭಾಗದಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.
ಕ್ರೀಡಾ ಶಾಲೆ ಕಿರಿಯರ ವಿಭಾಗ : ಪ್ರಸ್ತುತ 4ನೇ ತರಗತಿಯಲ್ಲಿ ಓದುತ್ತಿರುವ ಹಾಗೂ 01-06-2010ರ ನಂತರ ಜನಿಸಿದ ಬಾಲಕ ಬಾಲಕಿಯರಿಗೆ ಅಥ್ಲೆಟಿಕ್, ಬಾಕಿ, ಕ್ರೀಡೆಗಳ ಆಯ್ಕೆಯಲ್ಲಿ ಭಾಗವಹಿಸಲು ಅವಕಾಶವಿದೆ.
ಬಾಲಕ/ ಬಾಲಕಿಯರ ಜನ್ಮದಿನಾಂಕ 01-06-2021ಕ್ಕೆ 11 ವರ್ಷ ಮೀರಿರಬಾರದು ಮತ್ತು 5ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು.
ಕಿರಿಯರ ವಿಭಾಗ(ಮೊದಲನೆ ಹಂತ):- ಪ್ರಸ್ತುತ 7ನೇ ತರಗತಿಯಲ್ಲಿಓದುತ್ತಿರುವ ಹಾಗೂ 01-06-2007 ರಲ್ಲಿ ನಂತರ ಜನಿಸಿದ ಬಾಲಕ ಬಾಲಕಿಯರಿಗೆ ಅಥ್ಲೆಟಿಕ್ಸ್, ಹಾಕಿ, ಬಾಸ್ಕೆಟ್ ಬಾಲ್, ವಾಲಿಬಾಲ್, ಕುಸ್ತಿ ಕ್ರಿಡೆಗಳ ಆಯ್ಕೆಯಲ್ಲಿ ಭಾಗಹವಹಿಸಲು ಅವಕಾಶವಿದೆ. ಜೂಡೋ, ಕುಸ್ತಿ, ಅಥ್ಲೆಟಿಕ್ಸ್, ಬಾಸ್ಕೇಟ್ ಬಾಲ್, ಪುಟ್‍ಬಾಲ್, ವಾಲಿಬಾಲ್ ಕ್ರೀಡಾ ವಿಭಾಗದಲ್ಲಿ ಪ್ರವೇಶ ಬಯಸುವ ಕ್ರೀಡಾಪಟುಗಳ ಜನ್ಮ ದಿನಾಂಕವು 01-06-2021ಕ್ಕೆ 14 ವರ್ಷ ಮೀರಿರಬಾರದು ಮತ್ತು 8ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು.
ಹಿರಿಯರ ವಿಭಾಗ: ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿರುವ ಹಾಗೂ 01-06-2003 ರಲ್ಲಿ ನಂತರ ಜನಸಿದ ಮಕ್ಕಳು ಜೂಡೋ, ಕುಸ್ತಿ, ಅಥ್ಲೆಟಿಕ್ಸ್, ಕುಸ್ತಿ, ಬಾಸ್ಕೇಟ್ ಬಾಲ್, ಪುಟ್ ಬಾಲ್, ವಾಲಿಬಾಲ್ ಕ್ರೀಡೆಗಳ ವಿಭಾಗದಲ್ಲಿ ಪ್ರವೇಶ ಪಡೆಯಲು ಅವಕಾಶವಿದೆ.ಬಾಲಕ/ಬಾಲಕಿಯರ ಜನ್ಮ ದಿನಾಂಕವು 01-06-2021ಕ್ಕೆ 18 ವರ್ಷ ಮೀರಿರಬಾರದು ಮತ್ತು ಪ್ರಥಮ ಪಿ.ಯು.ಸಿ ತರಗತಿ ಸೇರಲು ಅರ್ಹತೆ ಹೊಂದಿರಬೇಕು.
ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರನ್ನು ಸಂಪರ್ಕಿಸಬಹುದು
Share your comments