1. ಸುದ್ದಿಗಳು

ಬಯೋಡೈಜೆಸ್ಟರ್ ಮಾಡಿ ಶೇ. 50 ರಷ್ಟು ಸಹಾಯಧನ ಪಡೆಯಿರಿ

Biodegester

ಬಯೋಡೈಜೆಸ್ಟರ್ ಒಂದು ಸಾವಯವ ಕೃಷಿ ಪದ್ಧತಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಸಣ್ಣ ಪ್ರಮಾಣದ ರೈತರು ಇರುವುದರಿಂದ ಇದನ್ನು ಮಾಡಿಕೊಂಡು ಮನೆಯಲ್ಲಿಯೇ ಗೊಬ್ಬರ ತಯಾರಿಸಿಕೊಳ್ಳಬಹುದು. ಬಯೋಡೈಜೆಸ್ಟರ್ ನಿರ್ಮಾಣ ಮಾಡಿದರೆ ಒಂದು ಸರ್ಕಾರದಿಂದ 50 ಪ್ರತಿಶತದಷ್ಟು ಒಂದು ಸಹಾಯಧನ ಸಿಗುತ್ತದೆ. ಆಧುನಿಕ ಬೇಸಾಯ ಕ್ರಮಗಳಿಂದ ಒಂದು ಮಣ್ಣಿನ ಭೌತಿಕ ಗುಣ ರಾಸಾಯನಿಕ ಗುಣ ಮತ್ತು ಜೈವಿಕ ಗುಣ ಹಾಳಾಗುತ್ತಿದೆ.ಇದರಿಂದ ನಾವೆಲ್ಲರೂ ರಾಸಾಯನಿಕಗಳಿಂದ ದೂರ ಇರಬೇಕು ಮತ್ತು ಸಾವಯವ ಕೃಷಿಯತ್ತ ಸಾಗಬೇಕು.

ನಿರ್ಮಾಣ ಮಾಡುವ ವಿಧಾನ

* ಸಾಮಾನ್ಯವಾಗಿ 15 ಅಡಿ ಉದ್ದ, 10 ಅಡಿ ಅಗಲ,ನಾಲ್ಕು ಅಡಿ ಎತ್ತರ,ಇದರ ಬಯೋಡೈಜೆಸ್ಟರ್ ನ ಸಾಮರ್ಥ್ಯ 16,200 ಒಂದು ದ್ರವರೂಪದ ಗೊಬ್ಬರ ಹಿಡಿಸುತ್ತದೆ.

* ಅದೇ ರೀತಿಯಾಗಿ ತಾವು 22,600 ಮತ್ತು 50,000ಹಿಡಿಸುವಂತೆ ಒಂದು ಉದ್ದ ಅಗಲ ಮತ್ತು ಎತ್ತರದಲ್ಲಿ ಬದಲಾವಣೆ ಮಾಡಿಕೊಂಡು ನಿರ್ಮಿಸಿಕೊಳ್ಳಬೇಕು.

ತಯಾರಿಕೆಗೆ ಬೇಕಾಗುವ ವಸ್ತುಗಳು

* ಗೋವಿನ ಗಂಜಲ

* ಶೇಂಗಾ ಹಿಂಡಿ

* ಕುರಿ, ಕೋಳಿ ಹಿಕ್ಕಿ

* ರೇಷ್ಮೆ ಹಿಕ್ಕಿ

* ಸೆಣಬಿನ ಎಲೆಗಳು, ಹೊಂಗೆ ಎಲೆಗಳು, ಗ್ಲಿರಿಸಿಡಿಯಾ ಎಲೆಗಳು

* ಈ ಮೇಲಿನ ಗಳಲ್ಲಿ ಯಾವುದಾದರೂ ತಮ್ಮಲ್ಲಿ ಸಿಗುವಂತ ವಸ್ತುಗಳನ್ನು ಹಾಕಬಹುದು.

 ದ್ರವರೂಪದ ಗೊಬ್ಬರಕ್ಕೆ ಅಭಿವರ್ಧನೆ ಗೊಳಿಸುವ ವಿಧಾನ

* ಅಭಿ ವರ್ಧನೆಗಾಗಿ ಸುಣ್ಣ ಮತ್ತು ಶಿಲಾ ರಂಜಕವನ್ನು ಹಾಕಬೇಕು, ಇದರಿಂದ ಗೊಬ್ಬರ ಬೇಗವಾಗಿ ತಯಾರಾಗುತ್ತದೆ. ಮತ್ತು ಒಂದು ಸಾರಜನಕದ ಪ್ರಮಾಣವನ್ನು ಶೇಕಡಾ 0.2-1.25 ಹೆಚ್ಚಿಸಬಹುದು.

ಬಳಸುವ ವಿಧಾನ

 *ಸುಮಾರು ನಾವು 20ರಿಂದ 30 ದಿನಗಳ ನಂತರ ಇದನ್ನು ಬಳಸಲು ಸಿದ್ಧವಾಗುತ್ತದೆ. ಮತ್ತೆ ಇದನ್ನು 15 ದಿನಗಳಿಗೊಮ್ಮೆ ನಾವು ಬಳಸಬಹುದು.

*ಈ ಮಿಶ್ರಣ ದ್ರವರೂಪದ ಮಿಶ್ರಣವನ್ನು ಒಂದು ಲೀಟರ್ ಅನ್ನು ಹತ್ತು ಲೀಟರ್ ನೀರಿನಲ್ಲಿ ಹಾಕಿ ವಾರ್ಷಿಕ ಬೆಳೆಗಳಿಗೆ ಮೂರರಿಂದ ನಾಲ್ಕು ಸಲ ಕೊಡಬಹುದು,

* ಇದನ್ನು ಬೆಳೆಗಳಿಗೆ ತಿಪ್ಪೆಗೊಬ್ಬರ ಜೊತೆ ಅಥವಾ ಒಂದು ಕಾಂಪೋಸ್ಟ್ ಜೊತೆಯಲ್ಲಿ ಸಹ ಕೊಡಬಹುದು, ಅಥವಾ ಬೇರೆ ಸಮಯದಲ್ಲಿ ಕೊಡಬಹುದು.

* ಒಂದು ಮಳೆ ಬಿದ್ದ ನಂತರ ಇದನ್ನು ಬೆಳೆಗಳಿಗೆ ಕೊಡುವುದು ಸೂಕ್ತ.

*ಹನಿ ನೀರಾವರಿ ಯೊಂದಿಗೆ ಮಿಶ್ರಣ ಮಾಡಿ ಸಹ ಕೊಡಬಹುದು.

ಪ್ರಯೋಜನಗಳು

 *ಸಾಮಾನ್ಯವಾಗಿ ಇದರಲ್ಲಿ ಎಲ್ಲ ರೀತಿಯ ಪೋಷಕಾಂಶಗಳು ಸಸ್ಯಗಳಿಗೆ ಒದಗಿಸುವ ರೀತಿಯಲ್ಲಿ ಒಳಗೊಂಡಿದೆ.

* ಇದನ್ನು ನಾವು ಮಾಡಿಕೊಳ್ಳುವುದರಿಂದ, ಸಂಪೂರ್ಣವಾಗಿ ಒಂದು ರಾಸಾಯನಿಕ ಗೊಬ್ಬರಗಳ ಬಳಕೆ ನಿಷೇಧಿಸಬಹುದು.

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ

Published On: 22 December 2020, 09:05 AM English Summary: How do you make biodigester at home

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.