1. ಸುದ್ದಿಗಳು

ಷರತ್ತು ಅನ್ವಯ ಸೋಮವಾರದಿಂದ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅನುಮತಿ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಕಳೆದ ಒಂದುವರೆ ತಿಂಗಳಿಂದ ಜಾರಿಯಲ್ಲಿರುವ ಲಾಕ್ಡೌನ್ ಮಾರ್ಗಸೂಚಿಗಳು ಮೇ 3ಕ್ಕೆ ಕೊನೆಯಾಗಲಿವೆ

ಕೆಂದ್ರ ಸರ್ಕಾರದ ಸೂಚನೆಯಂತೆ ರಾಜ್ಯವನ್ನು ಮೂರು ವಲಯಗಳನ್ನಾಗಿ ವಿಂಗಡನೆ ಮಾಡಲಾಗಿದೆ. ಹೊಸ ಮಾರ್ಗಸೂಚಿ ಅನ್ವಯ ಕರ್ನಾಟಕ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅನುಮತಿ ಕೊಡಲಾಗಿದೆ.ರಾಜ್ಯವನ್ನು ರೆಡ್, ಗ್ರೀನ್, ಆರೆಂಜ್ ಎಂದು ಮೂರು ಝೋನ್‍ಗಳನ್ನಾಗಿಸಿ ವಿಂಗಡಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಸಂಪೂರ್ಣ ಮಾರ್ಗಸೂಚಿಯನ್ನು  ರಾಜ್ಯ ಸರ್ಕಾರ ಪಾಲನೆ ಮಾಡಿದ್ದು, ರೆಡ್ ಝೋನ್‍ನಲ್ಲಿ ಕರ್ನಾಟಕದ ಆರು ಜಿಲ್ಲೆಗಳಿವೆ. ಬೆಂಗಳೂರು ನಗರ, ಮೈಸೂರು, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ವಿಜಯಪುರ ರೆಡ್‍ಝೋನ್ಲ್ಲಿರುವ ಜಿಲ್ಲೆಗಳು. ರೆಡ್ ಝೋನ್‍ಗಳಲ್ಲಿ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಆದರೆ ಎಲ್ಲಾ ಮೂರು ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಎಲ್ಲಾ ಮೂರೂ ಝೋನ್‍ಗಳಲ್ಲೂ ಮೇ 4ರಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಯಿಂದಲೇ ಮದ್ಯದ ಅಂಗಡಿಗಳು ತೆರೆಯಲಿವೆ. ಕನಿಷ್ಠ 6 ಅಡಿ ಅಂತರ ಕಾಯ್ಡುಕೊಂಡು ಎಣ್ಣೆ ಖರೀದಿ ಮಾಡಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

 ಮದ್ಯವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿದೆ. ಮದ್ಯ ಖರೀದಿಸುವಾಗ ಒಂದು ಸಲಕ್ಕೆ 5 ಜನರು ಮಾತ್ರ ಅಂಗಡಿ ಒಳಗಿರಬೇಕು. ಜೊತೆಗೆ ಪಾನ್, ಗುಟ್ಕಾ, ಮಸಾಲಾ ಮಾರಾಟಕ್ಕೂ ಸರ್ಕಾರ ಅನುಮತಿ ಕೊಟ್ಟಿದೆ.

ದೇಶಾದ್ಯಂತ ಮೇ 14ರವರೆಗೆ ವಿಮಾನ ಸಂಚಾರ, ರೈಲು ಸಂಚಾರ , ಮೆಟ್ರೋ ಸೇವೆಗಳು ಹಾಗೂ ಅಂರ್ತ ರಾಜ್ಯ ರಸ್ತೆ ಸಂಚಾರಕ್ಕೆ ನಿರ್ಬಂಧ ಇರಲಿದೆ. ಇನ್ನು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಶಾಲೆ, ಕಾಲೇಜುಗಳು, ಇನ್ನಿತರ ಶಿಕ್ಷಣ ತರಬೇತಿ ಹಾಗೂ ಕೋಚಿಂಗ್ ಸಂಸ್ಥೆಗಳು ಕಾರ್ಯನಿರ್ವಹಿಸುವಂತಿಲ್ಲ. ಇನ್ನು ಹೊಟೇಲ್ ಗಳು, ರೆಸ್ಟೋರೆಂಟ್ ಗಳು, ಪ್ರವಾಸೋದ್ಯಮ ಚಟುವಟಿಕೆಗಳಿಗೆ ನಿರ್ಬಂಧ ಇರಲಿದೆ.
ಇನ್ನು, ಸಾರ್ವಜನಿಕ ಸಮಾರಂಭಗಳು, ಶಾಪಿಂಗ್ ಮಾಲ್ ಗಳು, ಚಿತ್ರಮಂದಿರಗಳು, ಸ್ಪೋರ್ಟ್ ಕಾಂಪ್ಲೆಕ್ಸ್‍ಗಳು ಹಾಗೂ ಜಿಮ್ ಗಳಲ್ಲಿ ಜನ ಸೇರುವಿಕೆಯನ್ನು ಕಡ್ಡಾಯವಾಗಿ ಮೇ 14ರವರೆಗೆ ನಿರ್ಬಂಧಿಸಲಾಗಿದೆ.

Published On: 03 May 2020, 06:15 PM English Summary: Status permits liquor sale from Monday to Monday

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.