1. ಸುದ್ದಿಗಳು

ಗುಡ್‌ನ್ಯೂಸ್‌: ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ; 5 ಲಕ್ಷದವರೆಗೆ ಹೆಚ್ಚುವರಿ ಪರಿಹಾರ ಘೋಷಣೆ!

Kalmesh T
Kalmesh T
State government for neighboring victims; 5 lakhs as additional compensation

ಕರ್ನಾಟಕದ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ದೊರೆಯಲಿದೆ ಭರ್ಜರಿ ಸುದ್ದಿ. ಕೇಂದ್ರ ಸರ್ಕಾರಕ್ಕಿಂತಲೂ ಹೆಚ್ಚಿನ ಪರಿಹಾರವನ್ನು ಘೋಷಿಸಿದ ರಾಜ್ಯ ಸರ್ಕಾರ. ಇಲ್ಲಿದೆ ಈ ಕುರಿತು ಮಾಹಿತಿ.

ಇದನ್ನೂ ಓದಿರಿ: Corona Vaccine: ಕೊರೊನಾ ಲಸಿಕೆ ಎರಡೂ ಡೋಸ್‌ ಹಾಕಿಸಿಕೊಂಡವರಿಗೆ ₹5000 ನೀಡಲಿದೆಯಾ ಸರ್ಕಾರ?

ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಈ ಬಾರಿಯೂ ಕೇಂದ್ರ ಸರ್ಕಾರದ SDRF/NDRF ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ನಿಗದಿ ಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಫೇಸಬುಕ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಪಿಎಂ ಕಿಸಾನ್‌ Big Update: ಈಗ ಗಂಡ-ಹೆಂಡತಿ ಇಬ್ಬರ ಖಾತೆಗೂ ಬರಲಿದೆಯಾ 12ನೇ ಕಂತಿನ ಹಣ?

ಫೇಸಬುಕ್‌ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಂಚಿಕೊಂಡ ಮಾಹಿತಿ

ರಾಜ್ಯದಲ್ಲಿ ಮಳೆ ಅಬ್ಬರದಿಂದ ಸಾವಿರಾರು ಮಂದಿ ಮನೆ-ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದರು. ಈ ಸಂದರ್ಭ ರಾಜ್ಯ ಸರ್ಕಾರ ಮನೆ ಕಳಕೊಂಡವರಿಗೆ ಕೂಡಲೇ ಸೂರು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿತ್ತು.

ಈ ಸಂಬಂಧ ಪುನರ್ವಸತಿ ಯೋಜನೆಯನ್ನೂ ರೂಪಿಸಿತ್ತು. ಇದರ ಪ್ರಕಾರ ಮಾನವ ಜೀವ ಹಾನಿ, ಪ್ರವಾಹ ನೀರು ನುಗ್ಗಿರುವ ಮನೆಗಳು ಗೃಹೋಪಯೋಗಿ ವಸ್ತುಗಳು ಹಾಗೂ ಬಟ್ಟೆ ಬರೆ ಹಾನಿ, ಶೇ.75 ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿ,

ಶೇ.25ರಿಂದ ಶೇ.75ರಷ್ಟು ತೀವ್ರ ಮನೆ ಹಾನಿ (ಕೆಡವಿ ಹೊಸದಾಗಿ ನಿರ್ಮಿಸುವುದು), ಶೇ.25ರಿಂದ ಶೇ.75ರಷ್ಟು ತೀವ್ರ ಮನೆ ಹಾನಿ (ದುರಸ್ತಿ) ಹಾಗೂ ಶೇ.15-25ರಷ್ಟು ಭಾಗಶಃ ಮನೆ ಹಾನಿ ಹೀಗೆ ಪಟ್ಟಿ ಮಾಡಿ ಸಂತ್ರಸ್ತರಿಗೆ ಪರಿಹಾರ ನೀಡಲಿದೆ ಎಂದು ತಿಳಿಸಿದೆ.

ರೈತರಿಗೆ ಗುಡ್‌ನ್ಯೂಸ್‌: 10 ಸಾವಿರ ಸೌರಶಕ್ತಿ ಚಾಲಿತ ಕೃಷಿ ಪಂಪ್‌ಸೆಟ್ ವಿತರಿಸಲು ರಾಜ್ಯ ಸರ್ಕಾರ ನಿರ್ಧಾರ!

ಯಾವ ಯಾವ ಹಾನಿಗೆ ಎಷ್ಟೆಷ್ಟು ಮೊತ್ತ?

ಸಂಖ್ಯೆ

ವಿಷಯ

ವರ್ಗ

SDRF /NDRF   ಮಾರ್ಗಸೂಚಿ ದರ

ಪರಿಷ್ಕೃತ ದರ

1

ಮಾನವ ಜೀವ ಹಾನಿ

-

₹4 ಲಕ್ಷ

₹5 ಲಕ್ಷ

2

ಪ್ರವಾಹ ನೀರು ನುಗ್ಗಿರುವ ಮನೆಗಳು ಗೃಹೋಪಯೋಗಿ ವಸ್ತುಗಳು ಹಾಗೂ ಬಟ್ಟೆ ಬರೆ ಹಾನಿ

-

₹ 3800

₹ 10,000

3

ಶೇ.75 ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿ

ಎಂ

₹95,100

₹500000

4

ಶೇ.25ರಿಂದ ಶೇ.75ರಷ್ಟು ತೀವ್ರ ಮನೆ ಹಾನಿ (ಕೆಡವಿ ಹೊಸದಾಗಿ ನಿರ್ಮಿಸುವುದು)

ಬಿ 2

₹95,100

₹500000

5.

ಶೇ.25ರಿಂದ ಶೇ.75ರಷ್ಟು ತೀವ್ರ ಮನೆ ಹಾನಿ (ದುರಸ್ತಿ)

ಬಿ 1

₹95,100

₹300000

6.

ಶೇ.15-25ರಷ್ಟು ಭಾಗಶಃ ಮನೆ ಹಾನಿ

ಸಿ

₹5200

₹50000

ಬ್ರೇಕಿಂಗ್‌: ಉಚಿತ ಪಡಿತರ ಯೋಜನೆ ನಿಲ್ಲಿಸಲು ಕೇಂದ್ರದ ನಿರ್ಧಾರ!

ಈ ಪ್ರಕಾರವಾಗಿ ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಈ ಬಾರಿಯೂ ಕೇಂದ್ರ ಸರ್ಕಾರದ SDRF/NDRF ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರವನ್ನು ನೀಡುತ್ತಿದೆ.

Published On: 13 July 2022, 12:45 PM English Summary: State government for neighboring victims; 5 lakhs as additional compensation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.