1. ಸುದ್ದಿಗಳು

ಡ್ರೋಣ್ ಮೂಲಕ ನ್ಯಾನೋ ಗೊಬ್ಬರಗಳ ಸಿಂಪಡಣೆ : ಇಪ್ಕೋ ಕೃಷಿ ಡ್ರೋನ್ ಸೇವೆ ಚಾಲನೆ ಸಮಾರಂಭ!

Kalmesh T
Kalmesh T
IFFCO Agriculture Drone Service Launch Ceremony!

IFFCO Agriculture Drone Service Launch Ceremony: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರ ರಾಷ್ಟ್ರೀಯ ಸಮಾವೇಶ ಭವನದ ಮುಂಭಾಗದಲ್ಲಿ ಇಫ್ಕೋ ಸಂಸ್ಥೆಯು ಏರ್ಪಡಿಸಿದ್ದ ನ್ಯಾನೋ ಗೊಬ್ಬರ ಅನ್ವೇಷಣೆ ಡ್ರೋಣ್ ಮೂಲಕ ನ್ಯಾನೋ ಗೊಬ್ಬರಗಳ ಸಿಂಪಡಣೆ (Spraying Nano Fertilizers by Drone) ಮಾಡುವ ನೂತನ ವಿಧಾನವನ್ನು ಪರಿಚಯಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡ್ರೋಣ್ ಸೇವೆಗೆ ಚಾಲನೆ ನೀಡಲಾಯಿತು.

ಭಾರತ ಕೃಷಿ ಪ್ರಧಾನ ದೇಶವಾಗಿದ್ದರೂ ಸಹ ಅಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಇತರ ಕ್ಷೇತ್ರಗಳಿಗಿಂತ ಹಿಂದುಳಿದಿದೆ. ಹೆಚ್ಚುತ್ತಿರುವ ಜನಸಂಖ್ಯೆಯನ್ನು ಸಲಹುವ ಮಹತ್ತರವಾದ ಜವಬ್ದಾರಿಯನ್ನು ಹೊತ್ತಿರುವ ಕೃಷಿ ಕ್ಷೇತ್ರದ ಮುಂದೆ ಇಂದು ಹಲವು ಸವಾಲುಗಳಿವೆ.

ಕೃಷಿಯಿಂದ ವಿಮುಖರಾಗುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಕಡಿಮೆ ವೆಚ್ಚದಲ್ಲಿ ಅಧಿಕ ಫಲಿತಾಂಶ ನೀಡುವ ಮತ್ತು ಪರಿಸರ ಸ್ನೇಹಿಯಾಗಿರುವ ಹೊಸ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಿವುದು ಅನಿವಾರ್ಯವಾಗಿದೆ.

ಕೃಷಿಯಲ್ಲಿ ಉತ್ತಮ ಇಳುವರಿಯನ್ನು ಪಡೆಯಲು ಸಮಗ್ರ ಪೊಷಕಾಂಶ ನಿರ್ವಹಣೆ ಅವಶ್ಯಕ ಮತ್ತು ಸಮತೋಲಿತ ರಸಗೊಬ್ಬರಗಳ ಬಳಕೆಯಿಂದ ರೈತರು ಒಳ್ಳೆಯ ಫಸಲನ್ನು ಪಡೆಯಬಹುದು.

ದುಬಾರಿ ರಸಗೊಬ್ಬರಗಳನ್ನು ರೈತರಿಗೆ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಲು ಸರ್ಕಾರ ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನು ನೀಡುತ್ತಾ ಬಂದಿದೆ.

ಅದರ ಅವೈಜ್ಞಾನಿಕ ಕೃಷಿ ಪದ್ಧತಿ ಮತ್ತು ಅಸಮತೋಲಿತ ರಸಗೊಬ್ಬರಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿರುವುದು ಕಳವಳದ ಸಂಗತಿಯಾಗಿದೆ.

ಇಫ್ಕೋ ಸಂಸ್ಥೆಯು ಈ ಒಂದು ಯೋಜನೆಯಿಂದ ಗ್ರಾಮೀಣ ಭಾಗದಲ್ಲಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸಿದಂತಾಗುತ್ತದೆ.

ಅತಿಯಾದ ರಾಸಾಯನಿಕ ಗೊಬ್ಬರ (ಒಟ್ಟು 600 - ಮೆ. ಟನ್ -360 ಲಕ್ಷ ಮೆ.ಟನ್ ಯೂರಿಯಾ ಮತ್ತು 100 ಲಕ್ಷ ಮೆ.ಟನ್‌ ಡಿಪಿಪಿ) ಬಳಕೆಯಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದ್ದು ಬೆಳೆ ಇಳುವರಿ ಸಹ ಕುಂಟಿತವಾಗುತ್ತಿದೆ.

ಒಂದು ಬಾಟಲ್ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ- ಒಂದು ಚೀಲ ಯೂರಿಯಾ ಮತ್ತು ಡಿವಿಜಿಗೆ ಸಮವಾಗಿದೆ. ನ್ಯಾನೋ ಯೂರಿಯಾ ಬಳಕೆಯಿಂದ ಮತ್ತು, ಗಾಳಿ ಹಾಗು ನೀರಿನ ಪ್ರದೂಷಣೆಯನ್ನು ತಡೆಗಟ್ಟಿ ಮಣ್ಣಿನ ಆರೋಗ್ಯ ಕಾಪಾಡಬಹುದಾಗಿದೆ. 

ನ್ಯಾನೋ ಯೂರಿಯಾದ ಬಳಕೆಯಿಂದ ಸರ್ಕಾರದ ಮೇಲೆ ಬೀಳುವ ಆರ್ಥಿಕ ಹೊರೆ ಕಡಿಮೆ ಮಾಡಬಹುದಾಗಿದೆ. 

ಈಗಾಗಲೇ ಭಾರತದಲ್ಲಿ 8 ಕೋಟಿ ನ್ಯಾನೋ ಯೂರಿಯಾ ಬಾಟಲಗಳನ್ನು ರೈತರಿಗೆ ತಲುಪಿಸುವ ಮೂಲಕ 36 ಲಕ್ಷ ಮೆ.ಟನ್‌ ಯೂರಿಯಾ ಗೊಬ್ಬರ ಪ್ರಯೋಜಿಸಲಾಗಿದೆ ಮತ್ತು ಕರ್ನಾಟಕದಲ್ಲಿ 30 ಲಕ್ಷ ನ್ಯಾನೋ ಯೂರಿಯಾದಿಂದಾಗಿ 1.4 ಲಕ್ಷ ಮೆ.ಟನ್ ಯೂರಿಯಾ ಉಳಿಸಲಾಗತ್ತಿದೆ.

Red Banana: ಆಧುನಿಕ ಕೃಷಿ ಪದ್ದತಿಯಿಂದ ́ಕೆಂಪು ಬಾಳೆʼ ಬೆಳೆದು ₹35 ಲಕ್ಷ ಗಳಿಸುತ್ತಿರುವ ಯುವ ರೈತ!

Published On: 26 June 2023, 05:23 PM English Summary: Spraying Nano Fertilizers by Drone : IFFCO Agriculture Drone Service Launch Ceremony!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.