1. ಸುದ್ದಿಗಳು

agriculture ಕೃಷಿಗೆ ಏಳು ತಾಸು ವಿದ್ಯುತ್‌ ಪೂರೈಕೆ: ಸರ್ಕಾರ ಹೇಳಿದ್ದೇನು ?

Hitesh
Hitesh
Seven hours electricity supply for agriculture: What did the government say?

ರಾಜ್ಯದಲ್ಲಿ ಬರದಿಂದ ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ವಿದ್ಯುತ್‌ ಪೂರೈಕೆಯಲ್ಲೂ ವ್ಯತ್ಯಾಸವಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಎರಡರಿಂದ ಮೂರು ತಿಂಗಳಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ.

ಸರ್ಮಪಕವಾಗಿ ವಿದ್ಯುತ್‌ ಪೂರೈಕೆ ಆಗದೆ ಇರುವುದಕ್ಕೆ ರೈತರು ಪ್ರತಿಭಟನೆ ನಡೆಸಿದ್ದಲ್ಲದೇ ರಾಜ್ಯದ ಕೆಲವು ಕಡೆಗಳಲ್ಲಿ ಬಂದ್‌ ಸಹ ನಡೆದಿತ್ತು.

ರಾಜ್ಯದಲ್ಲಿ ಮುಂಗಾರು ಸಂಪೂರ್ಣವಾಗಿ ಕೈಕೊಟ್ಟಿದ್ದು, ಇನ್ನು ಹಿಂಗಾರಿನಲ್ಲಿಯೂ ಉತ್ತಮ ಮಳೆ ಬರುತ್ತದೆಯೇ ಎನ್ನುವುದು ಖಾತ್ರಿಯಾಗುತ್ತಿಲ್ಲ.

ಸಾಮಾನ್ಯವಾಗಿ ಮುಂಗಾರಿನಲ್ಲಿ ಮಳೆಯಾಗದೆ ಇದ್ದರೆ, ಹಿಂಗಾರಿನಲ್ಲಿ ಮಳೆಯಾಗುತ್ತದೆ ಎಂದು ರೈತರು ನಂಬುತ್ತಾರೆ.

ಆದರೆ, ಈ ಬಾರಿ ಹಿಂಗಾರಿನಲ್ಲಿಯೂ ಮಳೆ ಕೈಕೊಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಗಳು ಎಚ್ಚರಿಸಿವೆ.

ಬರದಿಂದ ಕರ್ನಾಟಕಕ್ಕೆ ಈ ಬಾರಿ ಬರೋಬ್ಬರಿ 33,770 ಕೋಟಿ ರೂ. ನಷ್ಟ!

ಈ ನಡುವೆ ಕೃಷಿಗೆ 7 ಗಂಟೆ ವಿದ್ಯುತ್ ಶೀಘ್ರ ನಿರ್ಧಾರ ಶೀಘ್ರ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವ ಕೆ.ಜಿ ಜಾರ್ಜ್‌ ಹೇಳಿದ್ದಾರೆ.  

ರೈತರಿಗೆ ಏಳು ತಾಸು ವಿದ್ಯುತ್‌ ಪೂರೈಸುವ ಬಗ್ಗೆ ಮಾತನಾಡಿರುವ ಅವರು, ರೈತರಿಗೆ ಪ್ರತಿದಿನವೂ  7 ಗಂಟೆ ವಿದ್ಯುತ್ ಪೂರೈಸುವ

ಕುರಿತು ಇಷ್ಟರಲ್ಲೇ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.  

ರಾಜ್ಯದ ಕೆಲವು ಭಾಗದಲ್ಲಿ ಈಗಾಗಲೇ ಮಳೆಯಾಗಿರುವುದರಿಂದ ಬೇಡಿಕೆ ಕಡಿಮೆಯಾಗಿದೆ.

ಜಲ ವಿದ್ಯುತ್, ಉಷ್ಣ, ಪವನ ಹಾಗೂ ಸೌರವಿದ್ಯುತ್ ಉತ್ಪಾದನೆ ಪ್ರಮಾಣವೂ ಹೆಚ್ಚಳವಾಗಿದೆ.  

weather ರಾಜ್ಯದಲ್ಲಿ ಇಂದಿನ ಹವಾಮಾನ ಹೇಗಿದೆ ನೋಡಿ

ಅಲ್ಲದೇ ರಾಜ್ಯವು ಪಂಜಾಬ್ ಮತ್ತು ಉತ್ತರ ಪ್ರದೇಶದಿಂದ ವಿದ್ಯುತ್‌ ಖರೀದಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳಿಂದ ಕೃಷಿಗೆ ಕಡಿಮೆ

ಮಾಡಲಾಗಿರುವ ವಿದ್ಯುತ್‌ ಪೂರೈಕೆ ಪ್ರಮಾಣವನ್ನು ಮತ್ತೆ ಪೂರೈಸಲು ಚಿಂತನೆ ನಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಒಂದೆರಡು ದಿನಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದ ಎಂದಿದ್ದಾರೆ.  

ರಾಜ್ಯದಲ್ಲಿ ಮಳೆಯಾಗದೆ ಇರುವುದರಿಂದ  ಜಲವಿದ್ಯುತ್ ಉತ್ಪಾದನೆ ಇಳಿಕೆಯಾಗಿತ್ತು. ಅಲ್ಲದೇ ಮೋಡ ಕವಿದ ವಾತಾವರಣದಿಂದಾಗಿ

ಸೌರವಿದ್ಯುತ್ ಉತ್ಪಾದನೆ ಪ್ರಮಾಣವೂ ಇಳಿಕೆಯಾಗಿತ್ತು. ಈ ನಡುವೆ ನಿರ್ವಹಣೆ

ಕೆಲಸದಿಂದಾಗಿ ಉಷ್ಣ ವಿದ್ಯುತ್‌ ಉತ್ಪಾದನೆ ಪ್ರಮಾಣದಲ್ಲೂ ಅಲ್ಪ ಇಳಿಕೆಯಾಗಿತ್ತು.

ಈ ಎಲ್ಲ ಬೆಳವಣಿಗೆಗಳಿಂದ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆಯಾಗಿತ್ತು. ಇದೀಗ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆ ಸಾಕಷ್ಟು ಸುಧಾರಿಸಿದೆ ಎಂದು ಹೇಳಿದ್ದಾರೆ.  

Digital Life Certificate ಪಿಂಚಣಿದಾರರಿಗೆ ಸಿಹಿಸುದ್ದಿ: ಒಂದೇ ಸೂರಿನಡಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್!

Published On: 02 November 2023, 03:15 PM English Summary: Seven hours electricity supply for agriculture: What did the government say?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.