1. ಸುದ್ದಿಗಳು

ರಾತ್ರಿ ಕರ್ಫ್ಯೂ ತೆರವು-ಆಗಸ್ಟ್ ಅಂತ್ಯದವರೆಗೂ ಶಾಲಾ ಕಾಲೇಜು ಇಲ್ಲ

Gym

ಜಾಗತಿಕ ಮಹಾಮಾರಿ ಕೊರೋನಾ (corona) ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ಜಾರಿಗೆ ತಂದಿದ್ದ ಲಾಕ್‌ಡೌನ್‌ ಅನ್ನು ಹಂತಹಂತವಾಗಿ ತೆರವುಗೊಳಿಸಲಾಗಿದ್ದು, ಆರ್ಥಿಕತೆಯ ಆರೋಗ್ಯ ಸುಧಾರಣೆ ಜತೆಗೆ ಲಾಕ್ಡೌನ್ (lockdown) ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗ ಮೂರನೇ ಹಂತದಲ್ಲಿ ಅನ್‌ಲಾಕ್‌ ಮಾಡಲಾಗಿದೆ. ಈ ಸಂಬಂಧ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದೆ.

ದೇಶಾದ್ಯಂತ ಜಿಮ್(Gym), ಯೋಗ (Yoga) ಕೇಂದ್ರಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಸೂಕ್ತ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಕಡ್ಡಾಯ ಮಾಡಬೇಕು ಸೇರಿದಂತೆ ಹಲವಾರು ಮಾರ್ಗಸೂಚಿಗಳನ್ನು ಗೃಹ ಸಚಿವಾಲಯ ನೀಡಿದೆ. ಪ್ರಮುಖವಾಗಿ ದೇಶದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ. ಅಂತರ ಕಾಯ್ದುಕೊಳ್ಳುವುದು ಮಾಸ್ಕ್‌ (Mask) ಧರಿಸುವುದು ಕಡ್ಡಾಯ ಮಾಡಲಾಗಿದೆ. ಅಲ್ಲದೇ ರಾತ್ರಿ ಕರ್ಫ್ಯೂ (Night curfew) ಅನ್ನು ತೆರವುಗೊಳಿಸಲಾಗಿದೆ.

 ಶಾಲಾ-ಕಾಲೇಜು (School-collage), ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಹೇರಲಾಗಿದ್ದ ಲಾಕ್‌ಡೌನ್‌ ಅನ್ನು ಆಗಸ್ಟ್‌ 31ರವರೆಗೆ ಮುಂದುವರಿಸಲಾಗಿದೆ.ಕಂಟೇನ್ಮೆಂಟ್ ವಲಯದಲ್ಲಿರುವ ಜಿಮ್, ಯೋಗಕೇಂದ್ರಗಳಿಗೆ ವಿನಾಯಿತಿ ಇರುವುದಿಲ್ಲ. ಉಳಿದಂತೆ ಮೆಟ್ರೋ ರೈಲು (Metro train), ಚಿತ್ರಮಂದಿರ, ಈಜುಕೊಳ, ಆಡಿಟೋರಿಯಂ, ಮನರಂಜನಾ, ಪಾರ್ಕ್, ಬಾರ್, ಸಭಾಂಗಣಗಳು ಹಾಗೂ ಜನರು ಹೆಚ್ಚು ಸೇರುವ ಸ್ಥಳಗಳ ಮೇಲೆ ನಿರ್ಬಂಧ ಮುಂದುವರೆಯಲಿದೆ.

ಏನಿರುತ್ತದೆ?

ಯೋಗ ಸಂಸ್ಥೆಗಳು, ಜಿಮ್ ಗಳು, ಸಾಮಾಜಿಕ ಅಂತರದೊಂದಿಗೆ ಸ್ವಾತಂತ್ರ್ಯ ದಿನ, ವಂದೇ ಭಾರತ್ ನಡಿ ಸೀಮಿತ ಸಂಖ್ಯೆ ವಿಮಾನ ಸಂಚಾರ.

ಏನಿರಲ್ಲ?

ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರ, ಈಜುಕೊಳ, ಮನರಂಜನಾ ಪಾರ್ಕಗಳು, ಬಾರ್, ಸಾಮಾಜಿಕ ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳು, ಅಂತಾರಾಷ್ಟ್ರೀಯ ವಿಮಾನ ಸಂಚಾರ.

Published On: 30 July 2020, 11:02 AM English Summary: Schools colleges and coaching institutions to remain closed till august end

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.