ಭತ್ತ ಬಿತ್ತನೆಯ ಪ್ರದೇಶ ಕಡಿಮೆ ಆಗಿರುವ ಕಾರಣದಿಂದಾಗಿ ಅಕ್ಕಿ ಉತ್ಪಾದನೆಯು ಗರಿಷ್ಠ 70 ಲಕ್ಷ ಟನ್‌ನಷ್ಟು ಕಡಿಮೆ ಆಗಲಿದ್ದು, ಅಕ್ಕಿಯ ಬೆಲೆಯು ಅಧಿಕ ಮಟ್ಟದಲ್ಲಿಯೇ ಉಳಿಯುವ ಸಾಧ್ಯತೆ ಇದೆ. ಇದು ಹಣದುಬ್ಬರವನ್ನು ಹೆಚ್ಚಿನ ಮಟ್ಟದಲ್ಲಿ ಇರಿಸಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿರಿ: Dharwad Krishi Mela: ಟ್ರ್ಯಾಕ್ಟರ್ ಬಳಸುವ ರೈತರಿಗೆ ಡೀಸೆಲ್ ಸಬ್ಸಿಡಿ- ಸಚಿವ ಬಿ.ಸಿ.ಪಾಟೀಲ
Rice production: ಅಹಾರ ವಸ್ತುಗಳ ಬೆಲೆ ಏರಿಕೆ ಪರಿಣಾಮವಾಗಿ ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 7ಕ್ಕೆ ಏರಿಕೆ ಆಗಿದೆ.
ಜೂನ್‌ಗೆ ಕೊನೆಗೊಂಡ 2021- 22ನೇ ಬೆಳೆ ವರ್ಷದಲ್ಲಿ ದೇಶದಲ್ಲಿ ಅಕ್ಕಿಯ ಉತ್ಪಾದನೆಯು ದಾಖಲೆಯ 13.02 ಕೋಟಿ ಟನ್ ಆಗಿದೆ. ಕಳೆದವರ್ಷ ದ ಇದೇ ಅವಧಿಯಲ್ಲಿ ಅಕ್ಕಿ ಉತ್ಪಾದನೆ 12.43 ಟನ್ ಮಾತ್ರ ಆಗಿತ್ತು.
ಕೇಂದ್ರ ಆಹಾರ ಸಚಿವಾಲಯದ ಅಂದಾಜಿನ ಪ್ರಕಾರ, ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಅಕ್ಕಿಯ ಉತ್ಪಾದನೆಯು 60 ಲಕ್ಷ ಟನ್‌ನಿಂದ 70 ಲಕ್ಷ ಟನ್ ಕಡಿಮೆ ಆಗಬಹುದು. ದೇಶದ ಒಟ್ಟು ಅಕ್ಕಿ ಉತ್ಪಾದನೆಯಲ್ಲಿ ಶೇಕಡ ಮುಂಗಾರು ಹಂಗಾಮಿನಲ್ಲಿ ಆಗುತ್ತದೆ.
ರೈತರ ಬೆಳೆ ವಿಮೆ ಬಾಕಿ ಮೊತ್ತ ₹16.52 ಕೋಟಿ ಬಿಡುಗಡೆ; ಸಿಎಂ ಬೊಮ್ಮಾಯಿ
Rice production: ಈಗಿನ ಹಂತದಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ದೇಶದಲ್ಲಿ ಇರುವ ಅಕ್ಕಿಯ ಹೆಚ್ಚುವರಿ ದಾಸ್ತಾನು ಸಾರ್ವಜನಿಕ ಪಡಿತರ ವ್ಯವಸ್ಥೆಯ (ಪಿಡಿಎಸ್) ಅಡಿ ಪೂರೈಕೆಗೆ ಸಾಕಾಗು ವಷ್ಟಿದೆ ಎಂಬುದು ಕೆಲವರ ಅಭಿಪ್ರಾಯ.
ನುಚ್ಚಕ್ಕಿ ರಫ್ತು ನಿಷೇಧ ಹಾಗೂ ಇತರ ಅಕ್ಕಿ ರಫಿಗೆ (ಬಾಸ್ಕತಿ ಹೊರತುಪಡಿಸಿ) ಶೇಕಡ 20ರಷ್ಟು ತೆರಿಗೆ ವಿಧಿಸಿರುವ ಪರಿಣಾಮವಾಗಿ ಬೆಲೆ ನಿಯಂತ್ರಣದಲ್ಲಿ ಇರುತ್ತದೆ ಎಂಬ ಅಭಿಪ್ರಾಯವಿದೆ.
#Rain Alert ದೇಶಾದ್ಯಂತ ಭಾರೀ ಮಳೆ ಮುನ್ಸೂಚನೆ; ಎಲ್ಲೆಲ್ಲಿ ಎಷ್ಟು?
Rice production: ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ನೀಡಿರುವ ಅಂಕಿ ಗಳ ಅನ್ವಯ ಅಕ್ಕಿಯ ಸಗಟು ಬೆಲೆಯು ಒಂದು ವರ್ಷದಲ್ಲಿ ಶೇ 10.7ರಷ್ಟು ಹೆಚ್ಚಾಗಿದೆ, ಚಿಲ್ಲರೆ ಮಾರಾಟ ಬೆಲೆಯು ಕೆ.ಜಿ.ಗೆ ಶೇ 9.47ರಷ್ಟು ಜಾಸ್ತಿ ಆಗಿದೆ.
ಪರಿಸ್ಥಿತಿ ನಿಭಾಯಿಸಲು ಸಾಧ್ಯವಾ ಗುವ ರೀತಿಯಲ್ಲಿ ಈಚೆಗೆ ಕೆಲವು ಕ್ರಮ ಕೈಗೊಂಡಿರುವ ಕಾರಣ ಭಯಪಡುವ ಅಗತ್ಯವಿಲ್ಲ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
Share your comments