Veterinary Assistant Recruitment 2022: ರಾಜ್ಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಶು ವೈದ್ಯಕೀಯ ಸಹಾಯಕರ 250 ಹುದ್ದೆಗಳ ನೇಮಕಾತಿಗೆ ಸೂಚನೆ ಹೊರಡಿಸಲಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ಇದನ್ನೂ ಓದಿರಿ: ಹವಾಮಾನ ಇಲಾಖೆಯಲ್ಲಿ ನೇಮಕಾತಿ; 78 ಸಾವಿರ ಸಂಬಳ! ಇಂದೇ ಅರ್ಜಿ ಸಲ್ಲಿಸಿ..
ವಿದ್ಯಾರ್ಹತೆ
ಪಶು ಆರೋಗ್ಯ (ಪಶುಸಂಗೋಪನೆ) ಡಿಪ್ಲೊಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಹಾಗೂ ನಿರ್ದೇಶಕರು ವೃತ್ತಿ ಶಿಕ್ಷಣ, ಕರ್ನಾಟಕ ಸರ್ಕಾರವು ನಡೆಸಲಾದ ಡೈರಿ / ಪೌಲ್ಟ್ರಿಗೆ ಸಂಬಂಧಿಸಿದ ಎರಡು ವರ್ಷಗಳ ಉದ್ಯೋಗ ಆಧಾರಿತ ಕೋರ್ಸ್ ನಲ್ಲಿ ಉತ್ತೀರ್ಣರಾಗಿರಬೇಕು.
ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಮೀರಿರಬಾರದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 05-10-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 04-11-2022
ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ: 06-10-2022
ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆಯ ಶಾಕ್, ವಿದ್ಯುತ್ ದರ ಹೆಚ್ಚಳಕ್ಕೆ ನಿರ್ಧಾರ!
ಅರ್ಜಿ ಶುಲ್ಕ
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.750.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
ಎಸ್ಸಿ / ಎಸ್ಟಿ / ಪ್ರವರ್ಗ-1 / ವಿಶೇಷ ಚೇತನ ಅಭ್ಯರ್ಥಿಗಳಿಗೆ ರೂ.500.
ನೇಮಕ ವಿಧಾನ: ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆ
100 ಅಂಕಗಳಿಗೆ 100 ಪ್ರಶ್ನೆಗಳ ಒಂದು ಲಿಖಿತ ಪ್ರಶ್ನೆ ಪತ್ರಿಕೆ ಇರುತ್ತದೆ. ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಇರುತ್ತದೆ. ತಪ್ಪು ಉತ್ತರಕ್ಕೆ 1/4 ಅಂಕಗಳನ್ನು ಕಳೆಯಲಾಗುತ್ತದೆ.
ವೇತನ ಶ್ರೇಣಿ: ರೂ.21,400 - 42,000.
ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಆಹ್ವಾನ, ₹ 3.50ಲಕ್ಷ ಸಹಾಯಧನ!
ಅರ್ಜಿ ಸಲ್ಲಿಕೆಗೆ ಲಿಂಕ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಸೆಪ್ಟೆಂಬರ್ 26 ರಂದು ಬಿಡುಗಡೆ ಮಾಡಲಾಗುತ್ತದೆ. ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ತೊಂದರೆ ಆದಲ್ಲಿ ಸಹಾಯವಾಣಿ ಸಂಖ್ಯೆ 080-23460460 ಗೆ ಸಂಪರ್ಕಿಸಬಹುದು.
ಉದ್ಯೋಗ ವಿವರ
- ಹುದ್ದೆಯ ಹೆಸರು ಕಿರಿಯ ಪಶುವೈದ್ಯಕೀಯ ಪರೀಕ್ಷಕರು (ಪಶು ವೈದ್ಯಕೀಯ ಸಹಾಯಕರು)
- ವಿವರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ
- ಪ್ರಕಟಣೆ ದಿನಾಂಕ 2022-09-24
- ಕೊನೆ ದಿನಾಂಕ 2022-11-04
- ಉದ್ಯೋಗ ವಿಧ Full Time
- ಉದ್ಯೋಗ ಕ್ಷೇತ್ರ ಸರ್ಕಾರಿ ಉದ್ಯೋಗ
- ವೇತನ ವಿವರ INR 21400 to 42000 /Month
- ವಿದ್ಯಾರ್ಹತೆ ಪಶು ಆರೋಗ್ಯ ಡಿಪ್ಲೊಮ / ವೃತ್ತಿಪರ ಕೋರ್ಸ್
- ನೇಮಕಾತಿ ಸಂಸ್ಥೆ
- ಸಂಸ್ಥೆಯ ಹೆಸರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ
- ವೆಬ್ಸೈಟ್ ವಿಳಾಸ https://www.ahvs.kar.nic.in/kn-home.html
- ಉದ್ಯೋಗ ಸ್ಥಳ: ಬೆಂಗಳೂರು, ಅಂಚೆ ಸಂಖ್ಯೆ 560012
Share your comments