ಸರ್ಕಾರ ಕಚೇರಿಯ ಸಮಯದ ಬದಲಾವಣೆ ಮಾಡುವುದರಿಂದ ನಮಗೆ ಸಮಸ್ಯೆಯಾಗುತ್ತದೆ. ದೂರದ ಗ್ರಾಮೀಣ ಪ್ರದೇಶದಿಂದ ಬರುವ ನಮ್ಮಂತವರಿಗೆ ಸರಿಯಾದ ಸಮಯದಲ್ಲಿ ಅಧಿಕಾರಿಗಳು ಸಿಗದೆ ಹೋದರೆ ನಮ್ಮ ಕಷ್ಟಗಳಿಗೆ ಸ್ಪಂದಿಸುವವರು ಯಾರು? ಮತ್ತೆ ಸಂಜೆ ಮನೆ ಸೇರಲು ಕೂಡ ತುಂಬಾ ತಡವಾಗುತ್ತದೆ ಎಂದು ರೈತರು CM ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬೇಸಿಗೆ ದಗೆಯ April ಮತ್ತು May ತಿಂಗಳಲ್ಲಿ ರಾಜ್ಯದ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಮತ್ತು ಕಿತ್ತೂರು ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಪ್ರತಿ ವರ್ಷ ಸರ್ಕಾರಿ ಕಚೇರಿಗಳ (Office Timings )ಸಮಯವನ್ನು ಸರ್ಕಾರ ಬದಲಾವಣೆ ಮಾಡುತ್ತಿತ್ತು. ಕಳೆದ ಎರಡು ವರ್ಷ ಕೊರೊನಾ ಕಾರಣದಿಂದ ಸಮಯದ ಬದಲಾವಣೆ ಮಾಡಿರಲಿಲ್ಲ. ಆದರೆ, ಈ ಬಾರಿ ಸಮಯ ಬದಲಾವಣೆಗೆ ಸರ್ಕಾರಿ ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ನೌಕರರ ಆಸೆಗೆ ಸರ್ಕಾರ ತಣ್ಣೀರೆರಚಿದೆ.
ಹೌದು, ಕಲ್ಯಾಣ ಕರ್ನಾಟಕ (North Karnataka - kalyana karnataka )ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ಕಿತ್ತೂರು ಕರ್ನಾಟಕ ಭಾಗದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರತಿ ಬೇಸಿಗೆಯ ಸಮಯದಲ್ಲಿ ಅನಿವಾರ್ಯವಾಗಿ ಸಮಯದ ಬದಲಾವಣೆ ಮಾಡಲಾಗುತ್ತಿತ್ತು.
ಇದನ್ನು ಓದಿರಿ: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಬಂಪರ್ ಸುದ್ದಿ..ಹೆಚ್ಚಳವಾಗುತ್ತಾ HRA..?
ಸರ್ಕಾರಿ ಕಚೇರಿಗಳ ಸಮಯ ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಇದೆ. ಆದರೆ ಬೇಸಿಗೆಯ ಸಮಯದಲ್ಲಿ ಈ ಜಿಲ್ಲೆಗಳಲ್ಲಿ ಕಚೇರಿಗಳ ಸಮಯವನ್ನು ಮುಂಜಾನೆ 8 ಗಂಟೆಯಿಂದಲೇ ಆರಂಭಿಸಿ, ಮಧ್ಯಾಹ್ನ 1.30 ರವರೆಗೆ ಬದಲಾಯಿಸಲಾಗುತ್ತಿತ್ತು. ಆದರೆ ಈ ಬಾರಿ ಸರ್ಕಾರ ಬೇಸಿಗೆಯ ಸಮಯದಲ್ಲಿ ಕಚೇರಿಗಳ ಸಮಯವನ್ನು ಬದಲಾವಣೆ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಸರ್ಕಾರದ ಅಧೀನ ಕಾರ್ಯದರ್ಶಿ ರಮೇಶ್, ದೆಹಲಿಯಲ್ಲಿ ಕಲಬುರಗಿ ಜಿಲ್ಲೆಗಿಂತ ಹೆಚ್ಚಿನ ತಾಪಮಾನವಿದ್ದರು ಕೂಡಾ ಸರ್ಕಾರಿ ಕಚೇರಿಗಳ ಸಮಯದ ಬದಲಾವಣೆ ಮಾಡುವುದಿಲ್ಲ. ಹೀಗಾಗಿ ಈ ಜಿಲ್ಲೆಗಳಲ್ಲಿ ಕೂಡಾ ಕಚೇರಿಗಳ ಸಮಯವನ್ನು ಬದಲಾವಣೆ ಮಾಡುವ ಅಗತ್ಯವಿಲ್ಲಾ ಎಂದು ಹೇಳಿದ್ದಾರೆ.
ಕಚೇರಿ ಸಮಯದ ಬದಲಾವಣೆಗೆ ನೌಕರರ ಆಗ್ರಹ
ಕಲಬುರಗಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗಿರುತ್ತದೆ. ಕಲಬುರಗಿಯಲ್ಲಿ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ 40 ರಿಂದ 44 ಡಿಗ್ರಿವರಗೆ ಬಿಸಿಲಿನ ತಾಪಮಾನ ಇರುತ್ತದೆ. ಹೀಗಾಗಿ ಅನೇಕ ವರ್ಷಗಳಿಂದ ಈ ಎರಡು ತಿಂಗಳಲ್ಲಿ ಸಮಯದ ಬದಲಾವಣೆ ಮಾಡುವುದು ನಡೆದಿತ್ತು. ಆದರೆ, ಕೊರೊನಾದ ಕಳೆದ ಎರಡು ವರ್ಷಗಳು ಕೂಡಾ ಸಮಯದ ಬದಲಾವಣೆಯನ್ನು ಸರ್ಕಾರ ಮಾಡಿರಲಿಲ್ಲಾ. ಆದರೆ ಈ ಬಾರಿ ಕೊರೊನಾದ ಕಾಟವಿಲ್ಲದೇ ಇದ್ದಿದ್ದರಿಂದ ಸರ್ಕಾರಿ ನೌಕರರು ಸಮಯದ ಬದಲಾವಣೆಗೆ ಮನವಿ ಮಾಡಿದ್ದರು.
ಕರ್ನಾಟಕದಲ್ಲಿ ಭಾರೀ ಮಳೆ! ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ
ಸಮಯದ ಬದಲಾವಣೆ ಯಾಕೆ?
ಸುಡುವ ಬಿಸಿಲಿನಲ್ಲಿ ಕೆಲಸ ಮಾಡುವದು ಕಷ್ಟವಾಗುತ್ತದೆ. ನೌಕರರು ತಮ್ಮ ಸಾಮರ್ಥಕ್ಕೆ ತಕ್ಕಂತೆ ಕೆಲಸ ಮಾಡಲು ಆಗುವುದಿಲ್ಲ. ಫ್ಯಾನ್‌ಗಳಿದ್ದರೂ ಕೂಡ ಕಚೇರಿಯೊಳೆಗ ಕುಳಿತು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಮುಂಜಾನೆಯಿಂದ ಮದ್ಯಾಹ್ನದವರಗೆ ಮಾತ್ರ ಕಚೇರಿಯ ಸಮಯ ಬದಲಾವಣೆ ಮಾಡಬೇಕು ಎನ್ನುವುದು ಸರ್ಕಾರಿ ನೌಕರರ ಆಗ್ರಹವಾಗಿದೆ. ಪ್ರತಿ ವರ್ಷ ನೌಕರರು ತಮ್ಮ ನೌಕರರ ಸಂಘಟನೆಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿ, ಕಚೇರಿಯ ಸಮಯವನ್ನು ಬದಲಾವಣೆ ಮಾಡಿಸಿಕೊಳ್ಳುತ್ತಿದ್ದರು.
ಸರ್ಕಾರಿ ಕಚೇರಿಗಳ ಸಮಯದ ಬದಲಾವಣೆಯನ್ನು ಪ್ರತಿ ವರ್ಷ ಸರ್ಕಾರ ಮಾಡುತ್ತಿತ್ತು. ಆದರೆ ಇದು ಎಲ್ಲರಿಗೂ ಅನ್ವಯವಾಗುತ್ತಿರಲಿಲ್ಲಾ. ಪೊಲೀಸರು, ಸಾರಿಗೆ ಇಲಾಖೆ ಸಿಬ್ಬಂಧಿ ಸೇರಿದಂತೆ ಕೆಲ ತುರ್ತು ಕೆಲಸದ ಮೇಲೆ ಇದ್ದ ನೌಕರರು ಪ್ರತಿನಿತ್ಯ ಕೆಲಸ ಮಾಡುತ್ತಿದ್ದರು. ಇವರಿಗೆ ಸಮಯದ ಬದಲಾವಣೆ ಅನ್ವಯವಾಗುತ್ತಿರಲಿಲ್ಲ. ಕಂದಾಯ ಇಲಾಖೆ ಸೇರಿದಂತೆ ಕೆಲ ಇಲಾಖೆಯ ನೌಕರರಿಗೆ ಮಾತ್ರ ಇದು ಜಾರಿಯಾಗುತ್ತಿತ್ತು.
ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ Whatsapp ಕಾರ್ಯನಿರ್ವ ಹಿಸಲ್ಲ..! ಕಾರಣವೇನು.
ಸಮಯದ ಬದಲಾವಣೆಗೆ ಅನೇಕರ ವಿರೋಧ
ಸರ್ಕಾರಿ ನೌಕರರು ಸರ್ಕಾರಿ ಕಚೇರಿಯ ಸಮಯದ ಬದಲಾವಣೆ ಮಾಡಬೇಕು ಅಂತ ಆಗ್ರಹಿಸುತ್ತಿದ್ದರೆ, ಅನೇಕರು ಕಚೇರಿಗಳ ಸಮಯದ ಬದಲಾವಣೆಗೆ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಜನರು ತಮ್ಮ ಕೆಲಸಕ್ಕೆ ನಗರಕ್ಕೆ ಬರಲು ಸಮಯಬೇಕು. ಕೃಷಿ ಕೆಲಸ ಮುಗಿಸಿಕೊಂಡು ಬರೋದಕ್ಕೆ ಸಮಯಬೇಕಾಗುತ್ತದೆ. ಅಧಿಕಾರಿಗಳು ಮಧ್ಯಾಹ್ನವಾದರೆ ಮನೆಗೆ ಹೋದರೆ ನಮಗೆ ಅನಾನುಕೂಲವಾಗುತ್ತದೆ. ಹೀಗಾಗಿ ಸಮಯದ ಬದಲಾವಣೆ ಮಾಡಬಾರದು ಎಂದು ಆಗ್ರಹಿಸುತ್ತಾರೆ.
ಕಲಬುರಗಿ ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಹೆಚ್ಚಾಗಿರುವದರಿಂದ ಸಮಯದ ಬದಲಾವಣೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಸಮಯದ ಬದಲಾವಣೆ ಮಾಡುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಸಮಯದ ಬದಲಾವಣೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವದು ಎಂದು ಕಲಬುರಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೆಂಗಟಿ ಹೇಳಿದ್ದಾರೆ.
ಗುಡ್ ನ್ಯೂಸ್: ಹೈನುಗಾರರಿಗೆ ಕ್ರೆಡಿಟ್ ಕಾರ್ಡ್! ದೇಶದಲ್ಲೆ ಮೊದಲು
Share your comments