1. ಸುದ್ದಿಗಳು

Ration Card Update: ಕುಣಿಕೆ ಬಿಗಿಗೊಳಿಸಿದ ಸರ್ಕಾರ..ಇವರಿಗೆ ಸಿಗೋದಿಲ್ಲ ರೇಷನ್‌..!

Maltesh
Maltesh

ಅನರ್ಹ ಜನರು ಸರ್ಕಾರಕ್ಕೆ ಗೊತ್ತಿಲ್ಲದಂತೆ ಕಾನೂನನ್ನು ಉಲ್ಲಂಘಿಸಿ ರೇಷನ್‌ ಪಡೆಯುತ್ತಿದ್ದು, ಇಂಥವರಿಗೆ ಸರ್ಕಾರ ಕುಣಿಕೆಯನ್ನು ಬಿಗಿಗೊಳಿಸುತ್ತಿದೆ. ಹೌದು ಅನರ್ಹ ಫಲಾನುಭವಿಗಳು ತಮ್ಮ ಪಡಿತರ ಚೀಟಿಯನ್ನು ಒಪ್ಪಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ನೀವು ನಿಯಮವನ್ನು ಉಲ್ಲಂಘಿಸಿದರೆ, ಅಧಿಕಾರಿಗಳು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು. 

EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!

7th Pay Commission: ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ತುಟ್ಟಿಭತ್ಯೆಯಲ್ಲಿ ಶೇ.5ರಷ್ಟು ಹೆಚ್ಚಳ ಫಿಕ್ಸ್!

ಅನರ್ಹ ಪಡಿತರ ಚೀಟಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಪಡಿತರ ಚೀಟಿ ಮತ್ತು ಸರೆಂಡರ್ ನಿಯಮಗಳನ್ನು ಸರ್ಕಾರವು ಅರ್ಹತಾ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಇದುವರೆಗೆ ದೇಶಾದ್ಯಂತ 68 ಲಕ್ಷ ಅನರ್ಹ ಕಾರ್ಡ್‌ಗಳನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ ಎನ್ನಲಾಗುತ್ತಿದೆ.. 

ಪ್ರಸ್ತುತ ದೇಶದಲ್ಲಿ 80 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಪಡಿತರವನ್ನು ಪಡೆಯುತ್ತಿದ್ದಾರೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಡೇಟಾವು ಹೇಳಿದೆ. ಆದರೆ ಇದರಲ್ಲಿ ಹಲವಾರು ಮಂದಿ ಅನರ್ಹರು ಎಂದು ಹೇಳಲಾಗಿದೆ. ತಮ್ಮಲ್ಲಿ ಎಲ್ಲಾ ಸೌಲಭ್ಯಗಳು ಇದ್ದರೂ ಕೂಡಾ ಬಿಪಿಎಲ್‌ ಕಾರ್ಡ್ ಅನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗಿದೆ.

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?

ಈ ಎಲ್ಲಾ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಸಾರ್ವಜನಿಕ ಪಡಿತರ ವಿತರಣಾ ಸಚಿವಾಲಯವು ಪಡಿತರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕ ಮಾಡುವ ಮೂಲಕ ಪ್ರಮುಖ ಬದಲಾವಣೆಯನ್ನು ಮಾಡಲು ಮುಂದಾಗಿದೆ.

"ಈ ನೂತನ ಪಡಿತರ ನಿಯಮ ಬದಲಾವಣೆಯನ್ನು ಶೀಘ್ರದಲ್ಲೇ ಅಂತಿಮ ಮಾಡಲಾಗುತ್ತದೆ. ಈ ನೂತನ ಬದಲಾವಣೆಯನ್ನು ಮಾಡಿದ ಬಳಿಕ ಯಾರು ಅರ್ಹರು ಆಗಿರುತ್ತಾರೋ ಅವರಿಗೆ ಮಾತ್ರ ಪಡಿತರ ಚೀಟಿಯ ಮೂಲಕ ಪಡಿತರ ಅಂಗಡಿಗಳಲ್ಲಿ ರೇಷನ್‌ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅನರ್ಹರಿಗೆ ಪಡಿತರ ದೊರೆಯುವುದಿಲ್ಲ.

ಒನ್‌ನೇಶನ್‌ ಒನ್‌ ರೇಶನ್‌ ಕಾರ್ಡ್ ಯೋಜನೆ

ಡಿಸೆಂಬರ್ 2020 ರಿಂದ ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್ ಯೋಜನೆ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಸುಮಾರು 69 ಕೋಟಿ ಫಲಾನುಭವಿಗಳು ಅಂದರೆ ಶೇಕಡ 86 ರಷ್ಟು ಜನರು ಈ ಯೋಜನೆ ಅಡಿಯಲ್ಲಿ ಪಡಿತರವನ್ನು ಪಡೆಯುತ್ತಿದ್ದಾರೆ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

Bitter Gourd :ಹೈಬ್ರೀಡ್‌ ಹಾಗಲಕಾಯಿ ಕೃಷಿ ಹೇಗೆ..ಇಲ್ಲಿದೆ ಸಿಂಪಲ್‌ ಟಿಪ್ಸ್‌ 

ಇವರಿಗೆ ಸಿಗೋದಿಲ್ಲ ರೇಷನ್‌

ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಕುಟುಂಬಗಳು - ಕಾರಿನಿಂದ ಟ್ರ್ಯಾಕ್ಟರ್‌ಗೆ - ಪಡಿತರ ಚೀಟಿಗಳನ್ನು ಸಲ್ಲಿಸಬೇಕಾಗುತ್ತದೆ.

ಪಡಿತರ ಚೀಟಿದಾರರು ಗ್ರಾಮೀಣ ಅಥವಾ ನಗರ ಪ್ರದೇಶದಲ್ಲಿ 100 ಚದರ ಮೀಟರ್‌ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಪಕ್ಕಾ ಮನೆ ಹೊಂದಿರಬಾರದು.

ಸರ್ಕಾರಿ ನೌಕರರು ಕೂಡ ತಮ್ಮ ಪಡಿತರ ಚೀಟಿಯನ್ನು ಒಪ್ಪಿಸಬೇಕು.

ಆದಾಯ ತೆರಿಗೆಯ ವ್ಯಾಪ್ತಿಗೆ ಬರುವ ವ್ಯಕ್ತಿಗಳು ಸಹ ಕಾರ್ಡ್ ಅನ್ನು ಸರೆಂಡರ್ ಮಾಡಬೇಕಾಗುತ್ತದೆ.

ಮನೆಗಳಲ್ಲಿ AC ಹೊಂದಿರುವ ಕುಟುಂಬಗಳು ಮತ್ತು ಪಕ್ಕಾ ಮನೆಯಲ್ಲಿ 5 kW ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಜನರೇಟರ್ ಸೆಟ್‌ಗಳು ಕಾರ್ಡ್ ಅನ್ನು ಸಲ್ಲಿಸಬೇಕಾಗುತ್ತದೆ.

80 ಚದರ ಮೀಟರ್ ವ್ಯಾಪಾರ ಸ್ಥಳವನ್ನು ಹೊಂದಿರುವ ಕುಟುಂಬಗಳು ಪಡಿತರ ಚೀಟಿಗೆ ಅರ್ಹರಲ್ಲ.

ನಗರ ಪ್ರದೇಶದ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಕಾರ್ಡ್ ಸರೆಂಡರ್ ಮಾಡಬೇಕಾಗುತ್ತದೆ. 

ರೈತ ಸಿರಿ ಯೋಜನೆಯತ್ತ ಒಂದು ನೋಟ

ಮೋದಿ ಸರ್ಕಾರದಿಂದ ರೈತರಿಗೆ ಭರ್ಜರಿ ಉಡುಗೊರೆ! ರೂ. 4000ದ ಯೂರಿಯಾ ಈಗ 266 ಕ್ಕೆ !

Published On: 10 June 2022, 10:08 AM English Summary: Ration Card Update: Govt Guidelines

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.