1. ಸುದ್ದಿಗಳು

7th Pay Commission: ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ತುಟ್ಟಿಭತ್ಯೆಯಲ್ಲಿ ಶೇ.5ರಷ್ಟು ಹೆಚ್ಚಳ ಫಿಕ್ಸ್!

Kalmesh T
Kalmesh T
Good news for employees; 5% increase in net profit

7th Pay Commission: ಸರ್ಕಾರದಿಂದ  ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ದೊರೆತಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಜುಲೈ 1 ರಿಂದ ಹೆಚ್ಚಾಗಲಿದೆ. AICPI ಸೂಚ್ಯಂಕದ ಪ್ರಕಾರ  ನೌಕರರ ತುಟ್ಟಿಭತ್ಯೆ ನೇರವಾಗಿ ಶೇ.39ಕ್ಕೆ ಏರಿಕೆಯಾಗಲಿದೆ.

ಇದನ್ನೂ ಓದಿರಿ: 

7th Pay Commission: ನೌಕರರಿಗೆ ತಾರತಮ್ಯವಿಲ್ಲದೇ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ..!

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಬಹು ದಿನಗಳಿಂದ ಕೇಂದ್ರ ಸರ್ಕಾರಿ ನೌಕರರು ನಿರೀಕ್ಷಿಸುತ್ತಿದ್ದ ಸುದ್ದಿ ಈಗ ಪ್ರಕಟವಾಗಿದೆ. ಜುಲೈ 1 ರಿಂದ ಸರ್ಕಾರ ತುಟ್ಟಿಭತ್ಯೆಯನ್ನು ಶೇ.5 ರಷ್ಟು  ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ.

ತುಟ್ಟಿಭತ್ಯೆಯಲ್ಲಿ ಮತ್ತೆ ಹೆಚ್ಚಳ (7th Pay Commission)

ಸಹಜವಾಗಿ ತುಟ್ಟಿಭತ್ಯೆಯಲ್ಲಿನ ಏರಿಕೆ ಎಐಸಿಪಿಐ (AICPI) ಸೂಚ್ಯಂಕವನ್ನು ಆಧರಿಸಿರುತ್ತದೆ. ಮಾರ್ಚ್ 2022ರಲ್ಲಿ ಎಐಸಿಪಿಐ ಸೂಚ್ಯಂಕದಲ್ಲಿ ಭಾರಿ ಏರಿಕೆಯನ್ನು ಗಮನಿಸಲಾಗಿದೆ.

ಈ ಸೂಚ್ಯಂಕದ ಪ್ರಕಾರ ಸರ್ಕಾರ ತುಟ್ಟಿಭತ್ಯೆಯನ್ನು ಶೇ. 3ರ ಬದಲಿಗೆ ಶೇ.5ಕ್ಕೆ ಹೆಚ್ಚಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

7th Pay commission ಬಿಗ್ ಗಿಫ್ಟ್: ಸರ್ಕಾರಿ ನೌಕರರ DA ಯಲ್ಲಿ 13% ಹೆಚ್ಚಳ, 3 ತಿಂಗಳ ಬಾಕಿ ಖಾತೆಗೆ!

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

ಎಲ್ಲವೂ ಅಂದುಕೊಂಡಂತೆ ಸಾಗಿದರೆ ಮತ್ತು ಸರ್ಕಾರ ಈ ನಿರ್ಧಾರದ ಮೇಲೆ ತನ್ನ ಮುದ್ರೆಯನ್ನು ಒತ್ತಿದರೆ ಸರ್ಕಾರಿ ನೌಕರರ ಡಿಎ (DA) ಶೇ.34 ರಿಂದ ನೇರವಾಗಿ ಶೇ.39ಕ್ಕೆ ಏರಿಕೆಯಾಗಲಿದೆ.

AICPI ಹೇಳುವುದೇನು?

ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ, AICPI ಸೂಚ್ಯಂಕ ಭಾರಿ ಕುಸಿತವನ್ನು ಕಂಡಿದೆ. ಆದರೆ, ಅದರ ನಂತರ AICPI ಅಂಕಿ-ಅಂಶಗಳು ಹೆಚ್ಚಾಗುತ್ತಿವೆ.

ಜನವರಿಯಲ್ಲಿ ಈ ಸೂಚ್ಯಂಕ 125.1 ರಷ್ಟಿದ್ದರೆ, ಫೆಬ್ರವರಿಯಲ್ಲಿ ಅದು 125 ರಷ್ಟು ಮತ್ತು ಮಾರ್ಚ್‌ನಲ್ಲಿ 126 ರಷ್ಟು ಅಂದರೆ ಒಂದು ಅಂಕ ಹೆಚ್ಚಾಗಿದೆ.

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?

ಇದೀಗ ಏಪ್ರಿಲ್ ತಿಂಗಳ ಅಂಕಿ-ಅಂಶಗಳೂ ಕೂಡ ಪ್ರಕಟಗೊಂಡಿದ್ದು. ಏಪ್ರಿಲ್‌ನ ಅಂಕಿ-ಅಂಶಗಳ ಪ್ರಕಾರ, ಎಐಸಿಪಿಐ ಸೂಚ್ಯಂಕವು 127.7 ಕ್ಕೆ ತಲುಪಿದೆ.

ಅಂದರೆ ಸೂಚ್ಯಂಕದಲ್ಲಿ ಶೇ.1.35 ರಷ್ಟು ಏರಿಕೆಯಾಗಿದೆ, ಅಂದರೆ, ಈಗ ಮೇ ಮತ್ತು ಜೂನ್ ಡೇಟಾ 127 ದಾಟಿದರೆ, ಅದು ಶೇ.5 ರಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ವೇತನ ಎಷ್ಟು ಹೆಚ್ಚಾಗಬಹುದು?

ಸರ್ಕಾರ ಒಂದು ವೇಳೆ ತುಟ್ಟಿಭತ್ಯೆಯನ್ನು ಶೇ.5ರಷ್ಟು ಹೆಚ್ಚಿಸಿದರೆ, ನೌಕರರ ಒಟ್ಟು ತುಟ್ಟಿಭತ್ಯೆ ಶೇ. 34 ರಿಂದ ಶೇ.39ಕ್ಕೆ ಏರಿಕೆಯಾಗಲಿದೆ. 

Published On: 05 June 2022, 09:53 AM English Summary: Good news for employees; 5% increase in net profit

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.