1. ಸುದ್ದಿಗಳು

Pulitzer ಹೆಮ್ಮೆಯ ಸುದ್ದಿ: ನಾಲ್ವರು ಭಾರತೀಯರಿಗೆ ಪುಲಿಟ್ಜರ್ ಪ್ರಶಸ್ತಿ! ಇವರ ಸಾಧನೆ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು..!

Kalmesh T
Kalmesh T
Pulitzer Prize for 4 Indians!

ಕಳೆದ ವರ್ಷ ಅಫ್ಘಾನಿಸ್ಥಾನದಲ್ಲಿ ನಡೆದಿದ್ದ ತಾಲಿಬಾನಿಗಳು ಹಾಗೂ ಆಫ್ಘನ್‌ ಸೈನಿಕರ ನಡುವಿನ ಸಂಘರ್ಷವನ್ನು ವರದಿ ಮಾಡಲು ಹೋಗಿ ತಾಲಿಬಾನಿಗಳಿಂದ ಹತ್ಯೆಯಾಗಿದ್ದ ಭಾರತದ ಪತ್ರಿಕಾ ಛಾಯಾಗ್ರಾಹಕ ದಾನಿಶ್‌ ಸಿದ್ದಿಕಿ ಅವರಿಗೆ ಜಾಗತಿಕ ಮಾಧ್ಯಮ ರಂಗದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ ಸಿಕ್ಕಿದೆ.

ಇದನ್ನೂ ಓದಿರಿ: ಸಾಧನೆ: 2022 ರಲ್ಲಿ 661.54 ಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ! 

ರೈತರಿಗೆ ಗುಡ್ನ್ಯೂಸ್: 20ನೇ ಜಾನುವಾರ ಗಣತಿ: ಟ್ಯಾಬ್ಲಾಯಡ್‌ನಲ್ಲಿ ನಿಮ್ಮ ಜಾನುವಾರುಗಳ ಗಣತಿ ಆಗಿದೆಯೇ? ಇದರ ಲಾಭಗಳೇನು ಗೊತ್ತೆ?

ಏನಿದು ಪುಲಿಟ್ಜರ್ ಪ್ರಶಸ್ತಿ! 

ಮೂಲತಃ ಅಮೆರಿಕಾದ ಪುಲಿಟ್ಜರ್ ಪ್ರಶಸ್ತಿಯನ್ನು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದವರಿಗೆ ನೀಡುವ ಬಹುಮಾನವಾಗಿದೆ.

ಪ್ರತಿ ವರ್ಷವು ಬಹುಮಾನವನ್ನು 21 ವಿವಿಧ ವಿಷಯಗಳಿಗೆ ನೀಡಲಾಗುತ್ತದೆ. ಇದರಲ್ಲಿ 20 ಜನರಿಗೆ, ಪ್ರತಿಯೊಬ್ಬ ವಿಜೇತನು ಪ್ರಶಸ್ತಿ ಪ್ರಮಾಣ ಪತ್ರದ ಜೊತೆಗೆ ಅಮೇರಿಕಾದ 10,000 ಡಾಲರ್ ಹಣದ ಪ್ರಶಸ್ತಿಯನ್ನು ಪಡೆಯುತ್ತಾನೆ. 

ಸಾರ್ವಜನಿಕ ಸೇವೆಯ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರಿಕೋದ್ಯಮ ಸ್ಪರ್ಧೆಗೆ, ಚಿನ್ನದ ಪದಕವನ್ನು ನೀಡುವುದಿದ್ದು,ಇದನ್ನು ದಿನಪತ್ರಿಕೆಯ ಮಾಧ್ಯಮಗಳಿಗೆ ನೀಡಲಾಗುತ್ತದೆ. ವೈಯಕ್ತಿಕವಾಗಿ ಆ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರನ್ನೂ ಸಹ ಪರಿಗಣಿಸಲಾಗುತ್ತದೆ.

LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್‌ ಮಾಡಿ ಸಾಕು

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

ದಾನಿಶ್‌ ಸೇವೆ ಸಲ್ಲಿಸುತ್ತಿದ್ದ ರಾಯರ್‌ ಸುದ್ದಿಸಂಸ್ಥೆಯಲ್ಲಿ ಪತ್ರಿಕಾ ಛಾಯಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಇನ್ನೂ ಮೂವರು ಭಾರತೀಯರಾದ ಅದ್ನಾನ್‌ ಅಬಿದಿ, ಸನ್ನಾ ಇರ್ಷಾದ್‌ ಮತ್ತು ಅಮಿತ್‌ ದವೆ ಅವರಿಗೂ ಈ ಪ್ರತಿಷ್ಠಿತ ಗೌರವ ದಕ್ಕಿದೆ. ನಾಲ್ಕು ಭಾರತೀಯರಿಗೆ ಏಕಕಾಲದಲ್ಲಿ ಪುಲಿಟ್ಜರ್‌ ಗೌರವ ಸಂದಿರುವುದು ಇದೇ ಮೊದಲು.

ಇಸ್ರೇಲ್‌ನ ಮಾಜಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ತಂದೆಯ ನೆತನ್ಯಾಹು ಕುರಿತು ಜೋಶುವ ಕೊಹೆನ್‌ ಬರೆದ ಕಾದಂಬರಿಗೂ ಪುಲಿಟ್ಜರ್‌ ಸಿಕ್ಕಿದೆ. ಹಾಗೆಯೇ ಸಾರ್ವಜನಿಕ ಸೇವೆ ವಿಭಾಗದಲ್ಲಿ ವಾಷಿಂಗ್ಟನ್‌ ಪೋಸ್ಟ್‌ಗೂ ಪ್ರಶಸ್ತಿ ಸಿಕ್ಕಿದೆ. ಈ ಪತ್ರಿಕೆಯಲ್ಲಿ ಜ.6ರಂದು ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನ ಕ್ಯಾಪಿಟಲ್‌ ಕಟ್ಟಡದ ಮೇಲಾದ ದಾಳಿಯ ಕುರಿತು ಮಹತ್ವದ ವರದಿ ಪ್ರಕಟವಾಗಿತ್ತು.

ಜರ್ಮನಿಯ ಪ್ರಮುಖ ಇಂಧನ ಕಂಪನಿಗಳೊಂದಿಗೆ ಕೇಂದ್ರ ವಿದ್ಯುತ್ ಸಚಿವರು ದುಂಡು ಮೇಜಿನ ಸಭೆ!

ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂಪಾಯಿಗಳ GST ಆದಾಯ ಸಂಗ್ರಹ!

ಇದುವರೆಗೆ ಪುಲಿಟ್ಜರ್‌ ಪಡೆದ ಭಾರತೀಯರು

1937ರಲ್ಲಿ ಗೋಬಿಂದ್‌ ಬೆಹಾರಿ ಲಾಲ್‌

2000ದಲ್ಲಿ ಝುಂಪಾ ಲಾಹಿರಿ 

2003 ರಲ್ಲಿ ಗೀತಾ ಆನಂದ್‌ 

2011 ರಲ್ಲಿ ಸಿದ್ದಾರ್ಥ ಮುಖರ್ಜಿ

2014 ರಲ್ಲಿ ವಿಜಯ್‌ ಶೇಷಾದ್ರಿ 

Petrol ಬೆಲೆಯಿಂದ ಕಂಗಾಲಾಗಿದ್ದ ಜನರಿಗೆ ಸಿಹಿಸುದ್ದಿ; 2025 ಕ್ಕೆ ಬರಲಿದೆ ಪರಿಸರ ಸ್ನೇಹಿ ಪೆಟ್ರೋಲ್!

ಭಾರತೀಯರಿಗೆ ಹೆಮ್ಮೆಯ ಸುದ್ದಿ : 2022-24 ಕ್ಕೆ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘದ (AAEA) ಅಧ್ಯಕ್ಷರಾಗಿ ಭಾರತ ಆಯ್ಕೆ!

Published On: 12 May 2022, 04:34 PM English Summary: Pulitzer Prize for 4 Indians!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.