1. ಸುದ್ದಿಗಳು

Rain in Bengaluru ಕನಿಷ್ಠ ಮಳೆಯಾದರೂ ಬೆಂಗಳೂರಿನಲ್ಲಿ ಸಮಸ್ಯೆ: ಎಚ್ಚರಿಕೆ

Hitesh
Hitesh
Problem in Bengaluru despite minimal rain: Alert

1. ನೈರುತ್ಯ ಮುಂಗಾರಿನಲ್ಲಿ ವಾಡಿಕೆಯಷ್ಟೇ ಮಳೆ; ಆತಂಕ ಬೇಡ: ಐಎಂಡಿ ವರದಿ
2. ಕನಿಷ್ಠ ಮಳೆಯಾದರೂ ಬೆಂಗಳೂರಿನಲ್ಲಿ ಸಮಸ್ಯೆ: ಎಚ್ಚರಿಕೆ
3. ರಾಜ್ಯದ ವಿವಿಧೆಡೆ ಮುಂದುವರಿದ ಸಾಧಾರಣ ಮಳೆ!
4. ರೈತರ ಮಕ್ಕಳನ್ನು ಮದುವೆಯಾದರೆ 2 ಲಕ್ಷ ರೂ.: ಎಚ್‌.ಡಿ ಕುಮಾರಸ್ವಾಮಿ
5. ಸಮುದ್ರ ಶುದ್ಧೀಕರಣಕ್ಕೆ ಹೊಸ ಮಾಸ್ಟರ್‌ ಪ್ಲಾನ್‌ ! 

1. ಈ ಬಾರಿಯ ನೈರುತ್ಯ ಮುಂಗಾರು ಅವಧಿಯಲ್ಲಿ ವಾಡಿಕೆಯಂತೆಯೇ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

ಎಲ್‌ ನಿನೊ ಪ್ರಭಾವದಿಂದಾಗಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗುವ ಸಾಧ್ಯತೆ ಇದೆ ಎಂದು ಖಾಸಗಿ ಸಂಸ್ಥೆ ವರದಿ ಮಾಡಿತ್ತು.

ಈ ವರದಿ ನೈರುತ್ಯ ಮುಂಗಾರನ್ನೇ ಅಲಂಬಿಸಿರುವ ರೈತರ ಆತಂಕಕ್ಕೆ ಕಾರಣವಾಗಿತ್ತು.

ಆದರೆ, ಹಿಂದೂ ಮಹಾಸಾಗರದ ಮೇಲ್ಮೈ ಉಷ್ಣಾಂಶದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಉತ್ತರ ಗೋಳಾರ್ಧದಲ್ಲಿ ಹಿಮತಾಪದಲ್ಲಿ ಬದಲಾವಣೆ ಆಗಿದೆ.

ಹೀಗಾಗಿ, ಎಲ್‌ ನಿನೊದಿಂದಾಗುವ ಪರಿಣಾಮವನ್ನು ತಗ್ಗಿಸುವ ಮೂಲಕ ವಾಡಿಕೆಯಂತೆ ಮಳೆ ಬೀಳುವುದಕ್ಕೆ ಪೂರಕ ವಾತಾವರಣ ಇದೆ.

ಇನ್ನು ವಾಡಿಕೆ ಹಾಗೂ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಶೇ 76ರಷ್ಟಿದೆ ಎಂದು ವರದಿ ತಿಳಿಸಿದೆ.

ನೈರುತ್ಯ ಮುಂಗಾರಿನಲ್ಲಿ ವಾಡಿಕೆ ಮಳೆಯಾಗಲಿದೆ ಎಂಬ ಮುನ್ಸೂಚನೆ ಇದೀಗ ರೈತರಲ್ಲಿ ನೆಮ್ಮದಿ ಮೂಡಿಸಿದೆ.   

2. ಬೆಂಗಳೂರಿನಲ್ಲಿ ಕನಿಷ್ಠ ಪ್ರಮಾಣದಲ್ಲಿ ಮಳೆಯಾದರೂ, ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ.

ಒಂದು ಸೆಂ.ಮೀ ಮಳೆಯಾದರೆ, ನಗರದ ಐದು ಪ್ರದೇಶಗಳು ಮುಳುಗಡೆ ಆಗುವ ಸಾಧ್ಯತೆ ಇದೆ.

ಇನ್ನು ಒಂದು ದಿನದ ಅವಧಿಯಲ್ಲಿ 10 ಸೆಂ.ಮೀ ವರೆಗೆ ಮಳೆಯಾದರೆ, ಬೆಂಗಳೂರಿನ 2,023 ಸ್ಥಳಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದೆ.    
----------------- 

3. ರಾಜ್ಯದ ವಿವಿಧೆಡೆ ಸಾಧಾರಣ ಮಳೆ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ ಸಾಧಾರಣ ಮಳೆ ಆಗಿರುವುದು ವರದಿ ಆಗಿದೆ.

ಇನ್ನು ಬುಧವಾರ ಹಾಗೂ ಗುರುವಾರ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಒಂದೆರಡು

ಕಡೆಗಳಲ್ಲಿ ಹಗುರದಿಂದ ಕೂಡಿದ ಅಥವಾ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಗರಿಷ್ಠ ಉಷ್ಣಾಂಶವು ಕರಾವಳಿಯ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ.

ಉಳಿದಂತೆ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.  

ಹುಲಿ

4.ಕರ್ನಾಟಕದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಮಕ್ಕಳನ್ನು ಮದುವೆಯಾಗುವವರಿಗೆ 2 ಲಕ್ಷ ರೂಪಾಯಿ ನೀಡುವುದಾಗಿ ಮಾಜಿ ಮುಖ್ಯಮಂತ್ರಿ

ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈಚೆಗೆ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

“ರೈತರ ಮಕ್ಕಳನ್ನು ಮದುವೆಯಾಗಲು ಯಾವುದೇ ಹೆಣ್ಣು ಮಕ್ಕಳು ಮುಂದೆ ಬರುತ್ತಿಲ್ಲ.

ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಹಲವರು ನನಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಹೀಗಾಗಿ, ನಾವು ಗೆದ್ದರೆ ಕರ್ನಾಟಕದ ರೈತರ ಆತ್ಮಗೌರವ ಕಾಪಾಡಲು ಇನ್ನೂ ಹಲವು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದಿದ್ದಾರೆ.
-----------------
5. ಸಮುದ್ರ ಶುದ್ಧೀಕರಣದಲ್ಲಿ ಇದೀಗ ಹೊಸ ಆವಿಷ್ಕಾರವೊಂದು ಪ್ರಾರಂಭವಾಗಿದೆ.

ಉತ್ತರ ಪೆಸಿಫಿಕ್ ಮಹಾಸಾಗರದಿಂದ 200,000 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ದಿ ಓಷನ್ ಕ್ಲೀನಪ್ ಮಿಷನ್ ಮೂಲಕ ತೆಗೆದುಹಾಕಲಾಗಿದೆ.

ಇದುವರೆಗಿನ ಸಾಗರದಿಂದ ಪ್ಲಾಸ್ಟಿಕ್ ತ್ಯಾಜ್ಯ ತೆಗೆಯುವಲ್ಲಿ ಹೊಸ ಮೈಲಿಗಲ್ಲು ಎಂದು ವರದಿಯಾಗಿದೆ.

ಅಲ್ಲದೇ ಈ ಪ್ರಮಾಣದಲ್ಲಿ ತ್ಯಾಜ್ಯವನ್ನು ಸಮುದ್ರದಿಂದ ತೆಗೆದಿರುವುದು ಇದೇ ಮೊದಲು.

ಜನಸಾಮಾನ್ಯರು ದಿನನಿತ್ಯದ ಜೀವನದಲ್ಲಿ ಬಳಸುವ ಬಹುತೇಕ ಪ್ಲಾಸ್ಟಿಕ್‌ಗಳು ಜಲಮೂಲಗಳ ಮೂಲಕ ಸಮುದ್ರಕ್ಕೆ ಸೇರುತ್ತವೆ.

ಪ್ಲಾಸ್ಟಿಕ ತ್ಯಾಜ್ಯ ಸಂಗ್ರಹವಾಗುವುದು ಸಮುದ್ರ ಜೀವಿಗಳಿಗೆ ದೊಡ್ಡ ಅಪಾಯವಾಗಿದೆ.

ಲಾಭೋದ್ದೇಶವಿಲ್ಲದ ಸಂಸ್ಥೆಯು ಉತ್ತರ ಪೆಸಿಫಿಕ್ ಮಹಾಸಾಗರದಿಂದ 200,000 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ಅವಶೇಷಗಳನ್ನು ತೆಗೆದುಹಾಕಿದ್ದು, ಹೊಸ ದಾಖಲೆ ಸೃಷ್ಟಿಸಿದೆ.
-----------------
6. ಬಿಸಿಬಿಸಿ ಬಿರಿಯಾನಿ ಇನ್ಮುಂದೆ ಎಟಿಎಂನಲ್ಲೂ ಸಿಗಲಿದೆ. ಬಿರಿಯಾನಿ ಪಡೆಯಲು ಎಟಿಎಂ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಚೆನ್ನೈ ಮೂಲದ ಬಾಯಿ ವೀಟು ಕಲ್ಯಾಣಂ ರೆಸ್ಟೋರೆಂಟ್‌ನಲ್ಲಿ ಈ ಬಿರಿಯಾನಿ ಎಟಿಎಂ ಲಭ್ಯವಿದೆ.

ಫೆಬ್ರವರಿ 8 ರಂದು, ರೆಸ್ಟೋರೆಂಟ್ ಈ ಯಂತ್ರವನ್ನು ಪರಿಚಯಿಸಿದೆ. ಯಂತ್ರವು 32-ಇಂಚಿನ ಡಿಸ್ಪ್ಲೇ ಟಚ್‌ಪ್ಯಾಡ್ ಪರದೆಯನ್ನು ಹೊಂದಿದೆ.

ಕಾರ್ಡ್ ಅಥವಾ UPI ಮೂಲಕ ಹಣ ಪಾವತಿ ಮಾಡಬಹುದು. ಆರ್ಡರ್ ಮಾಡಿದ ನಂತರ, ಈ ಯಂತ್ರವು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಸಹ ಸೂಚಿಸುತ್ತದೆ.

ರೆಸ್ಟೋರೆಂಟ್‌ನ ಇನ್‌ಸ್ಟಾಗ್ರಾಮ್ ಪುಟದ ಪ್ರಕಾರ, ಸರಾಸರಿ ನಾಲ್ಕು ನಿಮಿಷಗಳಲ್ಲಿ ಬಿರಿಯಾನಿ ಆರ್ಡರ್‌ಗಳು ಸಿದ್ಧವಾಗುತ್ತವೆ.
-----------------
7. ಇಲ್ಲಿಯವರೆಗೆ ಕಬ್ಬಿನಿಂದ ಸಕ್ಕರೆ, ಬೆಲ್ಲ ತಯಾರಿಸಿರುವ ಬಗ್ಗೆ ನೀವು ಕೇಳಿರುತ್ತೀರಿ.

ಇದೀಗ ಕಬ್ಬಿನಿಂದ ಮಾಡಿದ ಕುಲ್ಫಿ ಫೇಮಸ್‌ ಆಗುತ್ತಿದೆ. ಕುಲ್ಫಿ ಮಾತ್ರವಲ್ಲ ಚಟ್ನಿ, ಸ್ಲಶ್, ಐಸ್ ಬಾಲ್, ಜಾಮ್‌ಗಳನ್ನು ಕಬ್ಬಿನಿಂದ ತಯಾರಿಸಲಾಗುತ್ತದೆ.

ಮಹಾರಾಷ್ಟ್ರದ ದೌಂಡ್ ತಾಲ್ಲೂಕಿನ ಅಲೆಗಾಂವ್‌ನ 10 ರೈತರು ಒಗ್ಗೂಡಿ ಮ್ಯಾಜಿಕ್ ಕ್ಯಾನ್ ಸೆಲೆಬ್ರೇಟಿಂಗ್ ಫಾರ್ಮರ್ಸ್ ಗ್ರೂಪ್ ರಚಿಸಿದ್ದಾರೆ.

ಈ ಗುಂಪಿನ ಮೂಲಕ ರೈತರು ಕಬ್ಬಿನಿಂದ ಕುಲ್ಫಿ, ಚಟ್ನಿ, ಐಸ್ ಕ್ರೀಮ್, ಜಾಮ್ ತಯಾರಿಸುತ್ತಿದ್ದಾರೆ.

ಸದ್ಯ ಕುಲ್ಫಿಗೆ ಉತ್ತಮ ಬೇಡಿಕೆ ಇದೆ. ಈ ಹತ್ತು ರೈತರು ತಲಾ ಅರ್ಧ ಎಕರೆ ಕಬ್ಬು ನಾಟಿ ಮಾಡಿದ್ದಾರೆ.

ಕಬ್ಬಿನಿಂದ ಉಪ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಕಬ್ಬಿನ ರಸವನ್ನು ಹೆಪ್ಪುಗಟ್ಟಿ ಇಡಲಾಗುತ್ತದೆ.

ಕಾರ್ಖಾನೆಗೆ ಕಬ್ಬು ನೀಡಿದರೆ ಟನ್ ಗೆ 2ರಿಂದ 3 ಸಾವಿರ ಸಿಗುತ್ತಿದ್ದರೂ ಕುಲ್ಫಿ ಮಾಡಿದ ನಂತರ ಟನ್ ಗೆ 15 ಸಾವಿರ ಸಿಗುತ್ತಿದೆ ಎನ್ನುತ್ತಾರೆ ರೈತರು. 

Southwest Monsoon Rainfall: ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ದೇಶದಲ್ಲಿ ಶೇ.96 ರಷ್ಟು ಮಳೆ ಸಾಧ್ಯತೆ!

Tiger Population ಭಾರತದಲ್ಲಿ ಹುಲಿಗಳ ಸಂತತಿ ಹೆಚ್ಚಳ: ಎಷ್ಟಿದೆ ನಮಲ್ಲಿ ಹುಲಿ?!

150 ಅಪರೂಪದ ಸಿರಿಧಾನ್ಯಗಳ Seed Bank ನಿರ್ಮಿಸಿದ ಬುಡಕಟ್ಟು ಮಹಿಳೆ ಲಹರಿಬಾಯಿ 

Published On: 12 April 2023, 02:31 PM English Summary: Problem in Bengaluru despite minimal rain: Alert

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.