1. ಸುದ್ದಿಗಳು

#WorldElephantDay: ಆನೆ ಸಂರಕ್ಷಕರ ಪ್ರಯತ್ನ ಶ್ಲಾಘಿಸಿದ ಪ್ರಧಾನಿ ! ಮೋದಿ ಹೊಗಳಿದ ಆನೆ ದಿನದ ಬಗ್ಗೆ ಇಲ್ಲಿದೆ ಕುತೂಹಲಕರ ಮಾಹಿತಿ

Kalmesh T
Kalmesh T
PM lauds the efforts of Elephant conservationists

ಕಳೆದ 8 ವರ್ಷಗಳಲ್ಲಿ ಆನೆಗಳ ಮೀಸಲು ಪ್ರದೇಶಗಳ ಸಂಖ್ಯೆ ಹೆಚ್ಚಾಗಿರುವುದಕ್ಕೆ ಸಂತಸ ವ್ಯಕ್ತಪಡಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಆನೆ ದಿನದ ಸಂದರ್ಭದಲ್ಲಿ ಆನೆ ಸಂರಕ್ಷಕರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿರಿ: World Snake Day: “ವಿಶ್ವ ಹಾವುಗಳ ದಿನ”ದ ಕುರಿತು ನಾಗರಾಜ್ ಬೆಳ್ಳೂರು ಅವರು ಬರೆದ ಕುತೂಹಲಕಾರಿ ಲೇಖನ!

ಕಳೆದ 8 ವರ್ಷಗಳಲ್ಲಿ ಆನೆಗಳ ಮೀಸಲು ಪ್ರದೇಶಗಳ ಸಂಖ್ಯೆ ಹೆಚ್ಚಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ.

ವಿಶ್ವ ಆನೆ ದಿನದ ಸಂದರ್ಭದಲ್ಲಿ ಆನೆ ಸಂರಕ್ಷಕರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಕಳೆದ 8 ವರ್ಷಗಳಲ್ಲಿ ಆನೆಗಳ ಮೀಸಲು ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, "#WorldElephantDay ರಂದು, ಆನೆಯನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ.

ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ? ಹೌದು! ಇಲ್ಲಿದೆ “ಮೇ 20 - ವಿಶ್ವ ಜೇನು ದಿನ”ದ ನಿಮಿತ್ತ ಕುತೂಹಲಕಾರಿ ಲೇಖನ

ಏಷ್ಯಾದ ಎಲ್ಲಾ ಆನೆಗಳಲ್ಲಿ ಭಾರತವು ಸುಮಾರು ಶೇ. 60 ರಷ್ಟು ಆನೆಗಳನ್ನು ಹೊಂದಿದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ.

ಕಳೆದ 8 ವರ್ಷಗಳಲ್ಲಿ ಆನೆಗಳ ಮೀಸಲು ಪ್ರದೇಶಗಳ ಸಂಖ್ಯೆ ಹೆಚ್ಚಾಗಿದೆ. ಆನೆಗಳನ್ನು ರಕ್ಷಿಸುವಲ್ಲಿ ತೊಡಗಿರುವ ಎಲ್ಲರನ್ನೂ ನಾನು ಶ್ಲಾಘಿಸುತ್ತೇನೆ," ಎಂದು ಹೇಳಿದರು.

"ಆನೆ ಸಂರಕ್ಷಣೆಯಲ್ಲಿನ ಯಶಸ್ಸನ್ನು ಮಾನವ-ಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡಲು ಭಾರತದಲ್ಲಿ ನಡೆಯುತ್ತಿರುವ ದೊಡ್ಡ ಪ್ರಯತ್ನಗಳ ಹಿನ್ನೆಲೆಯಲ್ಲಿ ಮತ್ತು ಸ್ಥಳೀಯ ಸಮುದಾಯಗಳನ್ನು ಮತ್ತು ಪರಿಸರ ಪ್ರಜ್ಞೆಯನ್ನು ಹೆಚ್ಚಿಸುವಲ್ಲಿ ಅವರ ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಸಂಯೋಜಿಸುವ ಸಂದರ್ಭದಲ್ಲಿ ನೋಡಬೇಕು" ಎಂದಿದ್ದಾರೆ.

ಜೂನ್‌ 1 "ವಿಶ್ವ ಹಾಲು ದಿನ": ಹಾಲಿನ ಪ್ರಾಮುಖ್ಯತೆ ಮತ್ತು ಅದರ ವಿಶಿಷ್ಟ ಪ್ರಯೋಜನಗಳೇನು ಗೊತ್ತಾ?

ವಿಶ್ವ ಆನೆ ದಿನದ ಇತಿಹಾಸ

ಅವಸಾನದ ಅಂಚಿನಲ್ಲಿರುವ ಆನೆಗಳನ್ನು ರಕ್ಷಿಸುವ ಸಲುವಾಗಿ 2012 ಆಗಸ್ಟ್ 12 ರಿಂದ ವಿಶ್ವ ಆನೆ ದಿನವನ್ನು ಆಚರಿಸಲು ಆರಂಭಿಸಲಾಯಿತು. ಇದಕ್ಕೆ ಪ್ರಮುಖ ಕಾರಣಿಕರ್ತರು ಕೆನಡಾದ ಚಿತ್ರ ನಿರ್ದೇಶಕರಾದ ಪ್ಯಾಟ್ರೀಷಿಯಾ ಸಿಮ್ಸ್ ಮತ್ತು ಮೈಕಲ್ ಕ್ಲಾರ್ಕ್ ಹಾಗೂ ಥೈಲ್ಯಾಂಡಿನ ಆನೆ ಉಳಿಯುವಿಕೆ ಪ್ರಧಾನ ಕಾರ್ಯದರ್ಶಿಯಾದ ಶಿವಪೋರ್ನ್ ದರ್ದಾರನಂದ.

ಆನೆಯ ಕುರಿತಾಗಿಯೇ ಮೊದಲ ವಿಶ್ವ ಆನೆ ದಿನಾಚರಣೆ ದಿನದಂದು ಹಾಲಿವುಡ್‌ ನಟ ವಿಲಿಯಂ ಶಟ್ನೇರ್ "ರಿಟನ್ಸ್ ಟೂ ಫಾರೆಸ್ಟ್" ಎಂಬ ಸಾಕ್ಷಚಿತ್ರವನ್ನು ನಿರ್ಮಿಸಿದ್ದರು. ವಿಶ್ವದ ವಿವಿಧ ದೇಶಗಳಲ್ಲಿರುವ 65 ವನ್ಯಜೀವಿ ಸಂಸ್ಥೆಗಳು ಹಾಗೂ ಲಕ್ಷಾಂತರ ಮಂದಿ ವನ್ಯಜೀವಿ ತಜ್ಞರು ವಿಶ್ವ ಆನೆ ದಿನಾಚರಣೆಗೆ ಬೆಂಬಲ ಸೂಚಿಸಿದ್ದರು.

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

ವಿಶ್ವ ಆನೆ ದಿನಾಚರಣೆ ಮಹತ್ವ

ಆನೆಗಳ ಸಹಜ ಜೀವನ ನಡೆಸಲು ಮನುಷ್ಯರು ಅನುವು ಮಾಡಿಕೊಡಬೇಕು. ಆ ಪ್ರಾಣಿಗಳಿಗೆ ಅಗತ್ಯವಿರುವ ಪ್ರದೇಶ ಸುರಕ್ಷತೆಯನ್ನು ಒದಗಿಸಿಕೊಡಬೇಕು.

ಅವುಗಳನ್ನು ಬೇಟೆಯಾಡುವುದನ್ನು ನಿಲ್ಲಿಸಬೇಕು ಎಂಬುವುದನ್ನು ಸಾರುವುದೇ ಈ ವಿಶ್ವ ಆನೆಗಳ ದಿನದ ಪ್ರಮುಖ ಉದ್ದೇಶವಾಗಿದೆ. ಇದೇ ಕಾರಣಕ್ಕೆ ಆಗಸ್ಟ್‌ 12 ರಂದು ಆನೆಗಳ ದಿನವಾಗಿ ಆಚರಣೆ ಮಾಡಲಾಗುತ್ತಿದೆ.

ದಂತ ಮತ್ತು ಇತರ ಕಾರಣಕ್ಕಾಗಿ ಆನೆಗಳ ಬೇಟೆಯನ್ನು ನಿಲ್ಲಿಸಬೇಕು. ಕಾಡಾನೆಗಳ ಆವಾಸಗಳನ್ನು ರಕ್ಷಿಸಬೇಕಿದೆ. ಅಲ್ಲಿ ಮನುಷ್ಯ ಹಸ್ತಕ್ಷೇಪ ಮಾಡಬಾರದು.

ಆನೆಗಳ ಜೀವನ ಪದ್ಧತಿ

ಆನೆಗಳು ಸಹ ಮನುಷ್ಯರಂತೆಯೆ ಕುಟುಂಬ ಜೀವನವನ್ನು ನಡೆಸುತ್ತವೆ. ಸಾಮಾನ್ಯವಾಗಿ ಆನೆಗಳು ತಮ್ಮದೇ ಆದ ಸಾಮಾಜಿಕ ನಿಯಮದಡಿ ಬದಕುತ್ತವೆ.

ಹೆಣ್ಣು ಆನೆಗಳು ತಮ್ಮ ಜೀವನವನ್ನು ಸಂಪೂರ್ಣವಾಗಿ ಕುಟುಂಬ ವ್ಯವಸ್ಥೆಯಲ್ಲಿಯೇ ಕಳೆಯುತ್ತವೆ. ಸಾಮಾನ್ಯವಾಗಿ ಆನೆಗಳ ಕುಟುಂಬಗಳು 5 ರಿಂದ 15 ಆನೆಗಳನ್ನು ಒಳಗೊಂಡಿರುತ್ತವೆ.

ಅನೇಕ ಎಳೆಯ ಮರಿ ಆನೆಗಳನ್ನು ಈ ಆನೆಗಳ ಗುಂಪುಗಳು ಹೊಂದಿರುತ್ತವೆ. ಜೊತೆಗೆ ಹೆಣ್ಣಾನೆಗಳು ತಮ್ಮ ಗುಂಪಿನಿಂದ ಹೊರೆಗೆ ಬಂದು ತಮ್ಮದೇ ಕುಟುಂಬವನ್ನು ಕಟ್ಟಿಕೊಳ್ಳುತ್ತವೆ.

Published On: 12 August 2022, 04:25 PM English Summary: PM lauds the efforts of Elephant conservationists

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.