1. ಸುದ್ದಿಗಳು

ಮತ್ತೆ ತೈಲ ದರ ಜಿಗಿತ, ಹಲವು ಕಡೆ ಶತಕ ಬಾರಿಸಿದ ಪೆಟ್ರೋಲ್‌ ದರ

Ramlinganna
Ramlinganna

ಪೆಟ್ರೋಲ್, ಡೀಸೆಲ್ ದರ ದೇಶಾದ್ಯಂತ ಏರಿಕೆಯಾಗುತ್ತಲೇ ಇದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಈ ತಿಂಗಳಿನಲ್ಲಿ ಇದುವರೆಗೆ ಆರು ಬಾರಿ ದರ ಹೆಚ್ಚಿಸಿದೆ. ಮಂಗಳವಾರ ಮತ್ತೆ ಪೆಟ್ರೋಲ್ ದರ ಲೀಟರಿಗೆ 27 ಪೈಸೆ, ಡೀಸೆಲ್ ದರ 30 ಪೈಸೆ ಹೆಚ್ಚಳವಾಗಿದೆ.

ದೇಶಾದ್ಯಂತ ಪೆಟ್ರೋಲ್‌ ದರ ಶತಕದ ಸಮೀಪಕ್ಕೆ ಜಿಗಿದಿದೆ. ಬೆಂಗಳೂರಿನಲ್ಲಿ ಲೀಟರ್‌ಗೆ 94.85 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ ಡೀಸೆಲ್ ದರ ಕೂಡ 87.31 ರೂಪಾಯಿ ಆಗಿದೆ.. ಕಳೆದ 8 ದಿನಗಳಲ್ಲಿ ಪೆಟ್ರೋಲ್‌ ದರದಲ್ಲಿ 1.41 ರೂಪಾಯಿ ಡೀಸೆಲ್‌ ನಲ್ಲಿ1.68 ರೂಪಾಯಿ ಏರಿಕೆಯಾಗಿದೆ ಎಂದು ಸಾರ್ವಜನಿಕ ವಲಯದ ತೈಲ ಕಂಪನಿಗಳ ವರದಿ ತಿಳಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್‌ ಮಾದರಿಯ ಕಚ್ಚಾ ತೈಲ ದರದಲ್ಲಿ ಈ ವರ್ಷ ಶೇ. 30ರಷ್ಟು ಏರಿಕೆಯಾಗಿದೆ. ಒಪೆಕ್‌ ಉತ್ಪಾದನೆ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಏರಿಕೆಯಾಗಿತ್ತು. ಬ್ಯಾರೆಲ್‌ ದರ ಮಂಗಳವಾರ 68.45 ಡಾಲರ್‌ನಷ್ಟಿತ್ತು.

ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಶತಕ

ರಾಜಸ್ಥಾನದ ಗಂಗಾನಗರ ಜಿಲ್ಲೆ ಹಾಗೂ ಮಧ್ಯಪ್ರದೇಶದ ಅನೂಪ್‌ಪುರ್‌ನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 102 ರೂಪಾಯಿಗೆ ತಲುಪಿದೆ. ಫೆಬ್ರವರಿ ನಂತರ ಎರಡನೇ ಬಾರಿಗೆ ದೇಶದ ಕೆಲವು ಕಡೆಗಳಲ್ಲಿ ಪೆಟ್ರೋಲ್‌ ದರ 100 ರೂಪಾಯಿಗಳ ಗಡಿ ದಾಟಿದಂತಾಗಿದೆ.

ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಸಂದರ್ಭ ತಡೆ ಹಿಡಿಯಲಾಗಿದ್ದ ತೈಲ ದರವನ್ನು ಪಶ್ಚಿಮ ಬಂಗಾಳದ ಫಲಿತಾಂಶದ ನಂತರ ಏರುಗತಿಯಲ್ಲಿದೆ. ಸತತ 4 ದಿನಗಳ ಏರಿಕೆಯ ಪರಿಣಾಮ ಈ ಎರಡು ರಾಜ್ಯಗಳ ಕೆಲ ಭಾಗಗಳಲ್ಲಿ ಪೆಟ್ರೋಲ್‌ ದರ ಶತಕದ ಗಡಿ ದಾಟಿದೆ.

ಪೆಟ್ರೋಲ್‌ ದರ ಎಲ್ಲಿ-ಎಷ್ಟು?

ಬೆಂಗಳೂರು: 94.85 ರೂಪಾಯಿ, ಚೆನ್ನೈ: 93.62 ರೂಪಾಯಿ, ದೆಹಲಿಯಲ್ಲಿ  91.80 ರೂಪಾಯಿ, ಮುಂಬಯಿ: 98.12 ರೂಪಾಯಿ,
ಹೈದರಾಬಾದ್‌: 95.41 ರೂಪಾಯಿ ಇದೆ. ಆರು ದಿನಗಳಲ್ಲಿ ಪೆಟ್ರೋಲ್ ದರ ಲೀಟರಿಗೆ 1.41 ರಷ್ಟು ಮತ್ತು ಡೀಸೆಲ್ ದರ ಲೀಟರಿಗೆ 1.63 ರಷ್ಟು ಹೆಚ್ಚಳವಾಗಿದೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.