ಗೇರು ಬೆಳೆಯುವ ರೈತರಿಗೆ ಗುಡ್ ನ್ಯೂಸ್ (Goodnews), ಇನ್ನೂ ಮುಂದೆ ಗೇರು ಬೆಳೆ (Cashew apple) ಹೇಗೆ ಬೆಳೆಸಬೇಕು ಅದಕ್ಕೆ ತಗಲುವ ಕೀಟ ಹಾಗೂ ರೋಗ ನಿರ್ವಹಣೆ ಸೇರಿದಂತೆ ಇನ್ನಿತರ ಮಾಹಿತಿಗಾಗಿ ಚಿಂತೆ ಮಾಡಬೇಕಾಗಿಲ್ಲ. ನಿಮ್ಮ ಅಂಗೈಯಲ್ಲಿಯೇ ಎಲ್ಲಾ ಮಾಹಿತಿಯು ಕ್ಷಣಾರ್ಧದಲ್ಲಿ ರೈತರಿಗೆ ಸಿಗಲಿದೆ.
ಕ್ಯಾಶು ಇಂಡಿಯಾ ಆ್ಯಪ್ ಡೌನ್ಲೋಡ್ (Download) ಮಾಡಿಕೊಂಡರೆ ಸಾಕು. ನಿಮಗೆ ಬೇಕಾದ ಮಾಹಿತಿ ನಿಮ್ಮ ಅಂಗೈಯಲ್ಲಿಯೇ ಸಿಗಲಿದೆ. ಹೌದು, ಪುತ್ತೂರಿನ ಐಸಿಎಆರ್‌ನ ಗೇರು ಸಂಶೋಧನಾ ನಿರ್ದೇಶನಾಲಯವು ಗೇರು ಬೆಳೆಗಾರರಿಗೆ ಸಂಪೂರ್ಣ ಮಾಹಿತಿ ನೀಡುವ ಹೊಸ ಆ್ಯಪ್ ‘ಕ್ಯಾಶು ಇಂಡಿಯಾ (Cashew India) ಹೊರತಂದಿದೆ.
ಈ ಆ್ಯಪ್‌ನ (App) ಪರಿಕಲ್ಪನೆ, ವಿನ್ಯಾಸ ಹಾಗೂ ಅಭಿವೃದ್ಧಿಯನ್ನು ಪುತ್ತೂರಿನ ಐಸಿಎಆರ್‌ನ ಸಂಶೋಧನಾ ನಿರ್ದೇಶನಾಲಯದ ಹಿರಿಯ ವಿಜ್ಞಾನಿ ಡಾ.ಮೋಹನ ಜಿ.ಎಸ್. ಹಾಗೂ ಅವರ ತಂಡ ಮಾಡಿದೆ.
ಭಾರತದ 11 ಪ್ರಾದೇಶಿಕ ಭಾಷೆಗಳಲ್ಲಿ (11 Regional language) ಲಭ್ಯವಿರುವ ಈ ಆ್ಯಪ್‌ನಲ್ಲಿ ಗೇರು ಕೃಷಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ಲಭ್ಯವಾಗಲಿದೆ. ಹಿಂದಿ, ಇಂಗ್ಲಿಷ್, ಗುಜರಾತಿ, ಮರಾಠಿ, ಕನ್ನಡ, ಮಲಯಾಳ, ತಮಿಳು, ತೆಲಗು, ಒರಿಯಾ, ಬೆಂಗಾಲಿ ಭಾಷೆಗಳಲ್ಲಿ ಈ ಆ್ಯಪ್ ಲಭ್ಯವಾಗಿದೆ. ಗೇರು ಸಸಿಯ ಕಸಿ, ನರ್ಸರಿ, ಗೇರು ಗಿಡದ ಬೆಳವಣಿಗೆ, ಗಿಡದ ಸಂರಕ್ಷಣೆ, ಕೊಯ್ಲು, ಸಂಸ್ಕರಣೆ, ಮಾರುಕಟ್ಟೆ, ಇ–ಮಾರುಕಟ್ಟೆಯಂತಹ ಮಾಹಿತಿಗಳನ್ನು ಗೇರು ಕೃಷಿಕರಿಗೆ ಕ್ಷಣಾರ್ಧದಲ್ಲಿ ಒದಗಿಸಲಾಗಿದೆ.
ಕೃಷಿಕ ಅಥವಾ ಬಳಕೆದಾರ ತನ್ನ ತೋಟದ ಮಾಹಿತಿ ಚಿತ್ರ, ವೀಡಿಯೋ (Video) ಗಳನ್ನು ಇಲ್ಲಿ ನನ್ನ ಗೇರು ಬೆಳೆ ಎಂಬ ಉಪ ವಿಭಾಗದಲ್ಲಿ ಸಂಗ್ರಹಿಸಿಡುವ ಅವಕಾಶವನ್ನೂ ಸಹ ನೀಡಲಾಗಿದೆ.ದೇಶದ ನಾನಾ ಸಂಶೋಧನಾ ಕೇಂದ್ರಗಳಿಂದ ತಮಗೆ ಬೇಕಾದ ಗೇರು ಸಸಿಗಳನ್ನು ಆನ್ ಲೈನ್ ನಲ್ಲಿಯೇ ಬುಕ್ ಮಾಡಬಹುದು. ಕಸಿ ಮಾಡಿದ ಸಸಿಗಳನ್ನು ಆನ್‌ಲೈನ್‌ನಲ್ಲಿಯೇ ತರಿಸಿಕೊಳ್ಳಬಹುದು. ಮಾರ್ಕೆಟ್ ಇನ್ಫೋ ಮೂಲಕ ಗೇರು ಬೆಳೆಗಾರರು ತಮ್ಮ ಉತ್ಪನ್ನಗಳ ಮಾರಾಟವನ್ನೂ ಮಾಡಬಹುದು.
Share your comments