1. ಸುದ್ದಿಗಳು

Most Expensive Cow : ಬರೋಬ್ಬರಿ ₹35 ಕೋಟಿಗೆ ಹರಾಜಾದ ನೆಲ್ಲೋರ್ ತಳಿ ಹಸು! ಇದು ವಿಶ್ವದ ದುಬಾರಿ ಹಸು ಗೊತ್ತೆ?

Kalmesh T
Kalmesh T
Nellore breed cow auctioned for ₹35 crore! Do you know which is the most expensive cow in the world?

Most expensive cow : ಸಾಮಾನ್ಯ ಒಂದು ಹಸುವಿನ ಬೆಲೆ ಎಷ್ಟು? ಅಬ್ಬಬ್ಬಾ ಎಂದರೆ ಒಂದು ಲಕ್ಷದವರೆಗೆ. ಆದರೆ, ಇಲ್ಲೊಂದು ಹಸು ಬರೋಬ್ಬರಿ ₹35 ಕೋಟಿಗೆ ಹರಾಜಾಗುವ ಮೂಲಕ ವಿಶ್ವದಲ್ಲೆ ಅತಿ ದುಬಾರಿ ಬೆಲೆಯ ಹಸುವಿನ ಪಟ್ಟಿಗೆ ಸೇರಿದೆ. ಪೂರ್ತಿ ಮಾಹಿತಿಗೆ ಇದನ್ನೂ ಓದಿ

Nellore breed cow: ಸಾಕಷ್ಟು ಬಾರಿ ನಾವೆಲ್ಲ ನಂಬಲು ಕೂಡ ಸಾಧ್ಯವಾಗದಂತ ಸುದ್ದಿಗಳಿರುತ್ತವೆ. ಈಗ ಅಂತಹುದೆ ಒಂದು ಸುದ್ದಿಯನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಹೌದು! ಈ ನೆಲ್ಲೂರು ತಳಿಯ ಹಸುವು ಬರೋಬ್ಬರಿ ₹35 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ಸದ್ಯ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಬ್ರೆಜಿಲ್‌ನಲ್ಲಿ ನಡೆದಿದ್ದ ಹರಾಜೊಂದರಲ್ಲಿ ದಾಖಲೆಯ ಬೆಲೆಗೆ ಈ ಹಸು ಹರಾಜು ಆಗಿದೆ. ದೈತ್ಯಾಕಾರದ ಬಲಿಷ್ಠ ಬಿಳಿ ಬಣ್ಣದ ಹಸು ಇದಾಗಿದ್ದು, ಈ ಹಸುವಿಗೆ ಅತ್ಯಂತ ಹೆಚ್ಚಿನ ಬೆಲೆ 35 ಕೋಟಿ ರೂಪಾಯಿಗೆ ಹರಾಜು ಕೂಗಲಾಗಿದೆ.

ಈ ವರ್ಷದ ಕಳೆದ ಜೂನ್‌ ತಿಂಗಳಲ್ಲಿ ಬ್ರೆಜಿಲ್‌ನಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಹರಾಜಿನಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗುವ ಮೂಲಕ ಇದೀಗ ವಿಶ್ವದ ಅತ್ಯಂತ ದುಬಾರಿ ಹಸು ಎನ್ನುವ ಪ್ರಶಂಸೆಗೆ ಪಾತ್ರವಾಗಿದೆ.

ಗೋಮಯ ಬೇಸಾಯದಿಂದ ಕೋಟಿಗಟ್ಟಲೇ ಆದಾಯ ಗಳಿಸುತ್ತಿದ್ದಾನೆ ಈ ರೈತ! ಹೇಗೆ ಗೊತ್ತಾ?

ಏನಿದರ ವಿಶೇಷತೆ? ಯಾವುದು ಈ ಹಸು?

ನೆಲ್ಲೋರ್ ತಳಿ (Nellore breed cow) ಎನ್ನುವ ಪ್ರಭೇದದ ಹಸು ಇದಾಗಿದೆ. ಇದನ್ನ ವಿಶೇಷವಾಗಿ ಹಸು ಮಾರ್ಬಲ್ಡ್ ಗೋಮಾಂಸ ಉತ್ಪಾದನೆಗೆ ಬಳಕೆ ಮಾಡಲಾಗುತ್ತದೆ.

ಅಲ್ಲದೇ ಈ ತಳಿ ಹಸುವು ಶುಭ್ರ-ಪ್ರಕಾಶಮಾನವಾದ ಬಿಳಿ ತುಪ್ಪಳ ಮತ್ತು ಹಸುವಿನ ಭುಜದ ಮೇಲಿರುವ ಗೂನು ಹೀಗೆ ಮುಂತಾದ ವಿಶಿಷ್ಟವಾದ ಲಕ್ಷಣಗಳ ಕಾರಣದಿಂದಲೇ ಪ್ರಸಿದ್ಧಿ ಪಡೆದುಕೊಂಡಿದೆ.

ಅಲ್ಲದೇ ನೆಲ್ಲೋರ್ ತಳಿಯ (Nellore breed cow) ಈ ಹಸು ತನ್ನ ಸಡಿಲವಾದ ಮತ್ತು ಇಳಿಬಿದ್ದ ಚರ್ಮದಿಂದಾಗಿ ಹೆಚ್ಚಿನ ತಾಪಮಾನವನ್ನು ಸಹಿಸಿಕೊಳ್ಳುವ ಗುಣವನ್ನು ಕೂಡ ಹೊಂದಿದೆ.

ಅಷ್ಟೇ ಅಲ್ಲದೇ ಈ ತಳಿಯ ಹಸುಗಳು ಯುರೋಪಿಯನ್ ಹಸುಗಳಿಗೆ ಹೋಲಿಕೆ ಮಾಡಿದರೆ ಎರಡು ಪಟ್ಟು ಹೆಚ್ಚು ಬೆವರು ಗ್ರಂಥಿಗಳನ್ನು ಹೊಂದಿದೆ.

ಹವ್ಯಾಸವನ್ನೇ ಉದ್ಯಮವಾಗಿಸಿಕೊಂಡ 21ರ ಯುವತಿ; ತಿಂಗಳಿಗೆ 40ರಿಂದ 45 ಸಾವಿರ ಆದಾಯ!

ಭಾರತ ಮೂಲದ ತಳಿ “ನೆಲ್ಲೂರು ಹಸು”

ನೆಲ್ಲೂರು ತಳಿಯ ಈ ಹಸುಗಳು ಮೂಲತಃ ಭಾರತದ ಆಂಧ್ರ ರಾಜ್ಯದವು ಎಂದು ಹೇಳಲಾಗುತ್ತದೆ. ನೆಲ್ಲೋರ್  ತಳಿಯ ಹಸುಗಳು ಆಂಧ್ರಪ್ರದೇಶದ ರಾಜ್ಯದ ನೆಲೋರ್ ಜಿಲ್ಲೆಯಲ್ಲಿ ಹುಟ್ಟಿಕೊಂಡಿವೆ.

ಅದರ ಪರಿಣಾಮಕಾರಿ ಚಯಾಪಚಯ (Metabolism) ಕ್ರಿಯೆಯೊಂದಿಗೆ ಕಡಿಮೆ-ಗುಣಮಟ್ಟದ ಆಹಾರದಲ್ಲಿ ಅಭಿವೃದ್ಧಿ ಹೊಂದುವ ಸಾಮರ್ಥ್ಯದಿಂದಾಗಿ ಇದು ಬ್ರೆಜಿಲ್‌ನಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಈ ಹಸುವನ್ನು 2022 ರಲ್ಲಿ ಸುಮಾರು 800,000 ಡಾಲರ್‌ಗಳಿಗೆ ಅಂದರೆ 6 ಕೋಟಿ ರೂಪಾಯಿ ಬೆಲೆಗೆ ಮಾರಾಟ ಮಾಡಲಾಗಿತ್ತು.

Red Banana: ಆಧುನಿಕ ಕೃಷಿ ಪದ್ದತಿಯಿಂದ ́ಕೆಂಪು ಬಾಳೆʼ ಬೆಳೆದು ₹35 ಲಕ್ಷ ಗಳಿಸುತ್ತಿರುವ ಯುವ ರೈತ!

ಬ್ರೆಜಿಲ್‌ನಲ್ಲಿ ಬೇಡಿಕೆ ಪಡೆದುಕೊಂಡ ನೆಲ್ಲೂರು ಹಸು

ನೆಲ್ಲೂರು ಜಾನುವಾರುಗಳು ಮೂಲತಃ ಭಾರತದಿಂದ ಬ್ರೆಜಿಲ್‌ಗೆ ತಂದ ಒಂಗೋಲ್ ಜಾನುವಾರು ಜಾನುವಾರುಗಳಿಂದ ಹುಟ್ಟಿಕೊಂಡಿವೆ. ನೆಲೋರ್ ಭುಜ ಮತ್ತು ಕತ್ತಿನ ಮೇಲ್ಭಾಗದಲ್ಲಿ ಒಂದು ವಿಶಿಷ್ಟವಾದ ದೊಡ್ಡ ಗೂನು ಹೊಂದಿದೆ.

ಅವುಗಳು ಉದ್ದವಾದ ಕಾಲುಗಳನ್ನು ಹೊಂದಿದ್ದು ಅವು ನೀರಿನಲ್ಲಿ ನಡೆಯಲು ಮತ್ತು ಮೇಯುವಾಗ ಸಹಾಯ ಮಾಡುತ್ತದೆ. ನೆಲ್ಲೂರು ಹಸು ಅತ್ಯಂತ ಶೀತ ಹವಾಮಾನವನ್ನು ಹೊರತುಪಡಿಸಿ ಎಲ್ಲದಕ್ಕೂ ಹೊಂದಿಕೊಳ್ಳುತ್ತದೆ.  

Inspiring story : ಕೆಮೆಸ್ಟ್ರಿಯಲ್ಲಿ ಪಿಎಚ್‌ಡಿ ಪಡೆದ ಕೃಷಿ ಕಾರ್ಮಿಕ ಮಹಿಳೆ ! ನಿಜಕ್ಕೂ ಸ್ಪೂರ್ತಿದಾಯಕ ಕಥೆ

Published On: 02 August 2023, 11:43 AM English Summary: Nellore breed cow auctioned for ₹35 crore! which is the most expensive cow in the world?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.