ರಾಜ್ಯದಲ್ಲಿ ಯಾವುದೇ ವಾಹನಗಳ ನೋಂದಣಿ ಫಲಕಗಳ ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುತ್ತಿರುವ ಸಂಘ, ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನವನ್ನು ಸರ್ಕಾರ ಅಧಿಕೃತವಾಗಿ ತೆರವುಗೊಳಿಸುವಂತೆ ಖಡಕ್ ಆದೇಶವನ್ನು ಹೊರಡಿಸಿದೆ.
ಇದನ್ನೂ ಓದಿರಿ: Rain Alert: ನಾಳೆ, ನಾಡಿದ್ದು ಕರ್ನಾಟಕದಲ್ಲಿ ಗುಡುಗು-ಮಿಂಚು ಸಮೇತ ಭಾರೀ ಮಳೆ ಸಾಧ್ಯತೆ..!
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ಈ ಕುರಿತಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಸುತ್ತೋಲೆ ಹೊರಡಿಸಿದ್ದು, ವಾಹನಗಳ ನೋಂದಣಿ ಸಂಖ್ಯಾ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮದ ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.
ಖಾಸಗಿ ವಾಹನಗಳು ಸರ್ಕಾರದ ಲಾಂಛನ ಮತ್ತು ಹೆಸರುಗಳನ್ನು ವಾಹನಗಳ ಮೇಲೆ ಪ್ರದರ್ಶಿಸುವುದನ್ನು ನಿರ್ಬಂಧಿಸಲಾಗಿದೆ. ತಮ್ಮ ವಾಹನಗಳ ಮೇಲೆ ಸರ್ಕಾರಿ ಲಾಂಛನ ಅಥವಾ ಹೆಸರುಗಳನ್ನು ಅಳವಡಿಸಬೇಕಾದಲ್ಲಿ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದು ಅವಶ್ಯಕ ಎಂದು ತಿಳಿಸಿದೆ.
ಗುಡ್ ನ್ಯೂಸ್: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!
ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!
ಈ ಬಗ್ಗೆ ಕೋರ್ಟ್ ಆದೇಶ ಕೂಡ ಇದ್ದು, ಸರ್ಕಾರದ ಲಾಂಛನಗಳನ್ನು ಉಪಯೋಗಿಸದಂತೆ ಹಾಗೂ ವಾಹನಗಳ ಮೇಲೆ ನಿಗಮ, ಮಂಡಳಿ ಮತ್ತು ಸಂಸ್ಥೆಗಳ ಹೆಸರುಗಳನ್ನು ಬರೆದ ಯಾವುದೇ ತರಹದ ಫಲಕ ಅಥವಾ ಬರಹಗಳನ್ನು ಅಳವಡಿಸಬಾರದು ಎಂದು ಸ್ಪಷ್ಟ ಆದೇಶ ಮಾಡಿದೆ.
ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮ ತೆಗೆದುಕೊಂಡು, ತ್ವರಿತವಾಗಿ ಅನಧಿಕೃತ ಫಲಕಗಳನ್ನು ತೆರವುಗೊಳಿಸಲು ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಮಾಹಿತಿ ರೂಪದಲ್ಲಿ ನೀಡಲು ತಿಳಿಸಿದ್ದಾರೆ.
ನಿಯಮದ ಪ್ರಕಾರ, ವಾಹನದ ನಂಬರ್ಪ್ಲೇಟ್ ಮೇಲೆ ಯಾವುದೇ ಹೆಸರು, ಹುದ್ದೆಯನ್ನು ಹಾಕುವಂತಿಲ್ಲ.ಆದೇಶ ಪಾಲನೆಯ ಗಡುವಿನ ಬಳಿಕ ನಾಮಫಲಕ ತೆರವುಗೊಳಿಸದಿದ್ರೆ ಅಂತಹ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆದೇಶದಲ್ಲಿ ತಿಳಿಸಿದ್ದಾರೆ.
Asani Cyclone ನ ಕಾರಣ ಕರ್ನಾಟದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ!
PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಕ್ಷಣಾರ್ಧದಲ್ಲಿ ಮೆಸೇಜ್
ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಕ್ಷಣಾರ್ಧದಲ್ಲಿ ಆ ವಾಹನಗಳ ಮಾಲೀಕರ ಮೊಬೈಲ್ಗೆ ಸಂಚಾರ ಉಲ್ಲಂಘನೆ ಸ್ವರೂಪ ಹಾಗೂ ದಂಡದ ವಿವರಗಳನ್ನು ಎಸ್ಎಂಎಸ್ ಮೂಲಕ ಮಾಹಿತಿ ನೀಡುವ ಹೊಸ ವ್ಯವಸ್ಥೆಯನ್ನು ನಗರ ಸಂಚಾರ ವಿಭಾಗದ ಪೊಲೀಸರು ಆರಂಭಿಸಿದ್ದಾರೆ.
3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?
Share your comments