1. ಸುದ್ದಿಗಳು

ಮತ್ತೆ ಕರ್ನಾಟಕ ದಲ್ಲಿ 'ಲಾಕ್ ಡೌನ್'! ಯಾಕೆ ಈ ಒಂದು ಧೋರಣೆ?

Ashok Jotawar
Ashok Jotawar
Lock Down pic

ಕರ್ನಾಟಕ ಸರ್ಕಾರದಿಂದ ಮತ್ತೆ ಅನೌನ್ಸ್ ಆಗಬಹುದು 'ಲಾಕ್ ಡೌನ್'

ಒಮಿಕ್ರೋನ್ ಕರೋನ ವೈರಸ್ ನ ಹೊಸ ಅಭ್ಯರ್ಥಿಯ ದಾಂದಲಿಯಿಂದ  ಮತ್ತೆ ಕರ್ನಾಟಕದಲ್ಲಿ ಲಾಕ್ ಡೌನ್ ಆಗುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ.

ಕರ್ನಾಟಕ ದಲ್ಲಿ ಈಗಷ್ಟೇ ಎಲ್ಲ ಸುಧಾರಿಸುತ್ತಿತ್ತು ಆದರೆ  ವಿಧಿಗೆ ಮತ್ತೆ ಬೇರೆ ಏನೋ ಹೊಸದು ಮಾಡಲು ಇಚ್ಛೆ ಇರಬೇಕೋ  ಏನೋ? ಮತ್ತೆ ಜನರ ಜೀವನದಲ್ಲಿ ಆಟವಾಡಲು ಬಂದಿದೆ ಈಒಂದು ಓಮೈಕ್ರೋನ್ ಎಂಬ ಹೊಸ  ರಾಕ್ಷಸ. ಕರ್ನಾಟಕ  ಈ ವರ್ಷ ತುಂಬಾ ನೋವಿನಿಂದ ಬಳಲುತ್ತಿದೆ. ಏಕೆಂದರೆ ಈ ಸಾರಿ ವರುಣನ ಆರ್ಭಟದಿಂದ್ ಭೂಮಿಪುತ್ರರು ತುಂಬಾ ನೋವನ್ನು  ಅನುಭವಿಸಿ ಬೇಸತ್ತು ಹೋಗಿದ್ದಾರೆ.

ಕಾರಣ ಹಾಕಿದ ಬೆಳೆಯ ಹೂಡಿಕೆಗೆ ಏನು ರಿಟರ್ನ್ ಆಗಿಲ್ಲ. ಇಂತಹ  ವ್ಯವಸ್ಥೆಯಲ್ಲಿ ಮತ್ತೆ ಈ ಓಮೈಕ್ರೋನ್ ಎಂಬ ಹೊಸ ಧರಿದ್ರ ವಕ್ಕರಿಸಿಕೊಂಡಿದೆ.

ಈಸಾರಿ ಮೊದಲು ಓಮೈಕ್ರೋನ್ ನ ಕೇಸು ಮೊದಲು ಕರ್ನಾಟಕ ದಲ್ಲಿಯೇ ಕಂಡು ಬಂದಿತ್ತು. ಈಗ ಇಡೀ ಭಾರತವನ್ನು ವ್ಯಾಪಿಸಲು ಸಜ್ಜಾಗುತ್ತಿದೆ.

ನಿನ್ನೆ ನಡೆದ ಒಂದು ಪತ್ರಿಕಾ ಘೋಷ್ಠಿ ಯಲ್ಲಿ ಕರ್ನಾಟಕ ಸರ್ಕಾರ ಈ ಒಂದು ಅನೌನ್ಸ್ಮೆಂಟ್ ಮಾಡಿದೆ. ಕರ್ನಾಟಕದ ಟೆಕ್ನಿಕಲ್ ಕೋವಿಡ್ Advisory  Commitee (TAC ) ಯು ಈ ಒಂದು ನಿರ್ಧಾರಕ್ಕೆ ಬಂದಿದೆ, ಆ ನಿರ್ಧಾರ ಏನಪ್ಪಾ ಅಂದರೆ, ಈಗ ಏನಾದರು ಓಮೈಕ್ರೋನ್ ನಿಂದ

ಸೋಂಕಿತರ ಸಂಖ್ಯೆ ಸುಮಾರು 5 %ಹೆಚ್ಚಾದರೆ ಮತ್ತೆ ಈ  ಒಂದು ಲೊಕ್ಡೌನ್ ಎಂಬ ಪ್ರಕ್ರಿಯೆಯನ್ನು ಪ್ರತಿ ಒಂದು ಜಿಲ್ಲೆಗಳಲ್ಲೂ ಮಾಡಿ ಎಂದು ತಮ್ಮ ಒಂದು ನಿರ್ಣಯ ನೀಡಿದ್ದಾರೆ.

ನೋಡಿ ಓದುಗರೇ ನೀವು ಮಾಡುವ ಕೆಲಸ ತುಂಬಾ ಇದೆ. ಏನಪ್ಪಾ ಅಂದರೆ ನೀವು ಮನೆಯಿಂದ ಹೊರಗಡೆ ಹೋಗುವಾಗ ನಿಮ್ ಮೂಗಿಗೆ ಮಾಸ್ಕ ಹಾಕಿ, ಕೈಯನ್ನು ಸದಾ ತೊಳೆಯುತ್ತ ಇರಿ ಮತ್ತು ಕೈಯನ್ನ  ಸ್ಯಾನಿಟೈಸರ್ ನಿಂದ  ವಾಶ್ ಮಾಡುತ್ತ ಇರಿ, ಮತ್ತು ನಿಮ್ ನಿಮ್ ನಡುವೆ ಕನಿಷ್ಠ 2 ಮೀಟರ್ ನಷ್ಟು ಅಂತರ ಇಡಿ, ಏಕೆಂದರೆ ಈ ಸರಿ ಸರ್ಕಾರ ಮತ್ತೆ ಲಾಕ್ ಡೌನ್  ಮಾಡಿದರೆ ಎಲ್ಲ ಜನರಿಗೆ ಮತ್ತೆ ತುಂಬಾ ಹಾನಿಯಾಗಲಿದೆ.

ಯೋಚನೆ! ಮಾಡಬೇಕು ಏಕೆಂದರೆ ಇಷ್ಟೊಂದು ಲಸಿಕೆಕರಣ ಆಗಿದೆಯೆಂದರೆ ಏಕೆ ಹೆದರುತ್ತಿದೆ? ಮತ್ತು ಈ ಒಂದು ಹೊಸ ಅಥಿತಿಯನ್ನು ಇನ್ನೊಮ್ಮೆ ಲಸಿಕೆ ಮಾಡಿಸಿದರೆ ಇದರಿಂದ ಬಚಾವ್ ಆಗಬಹುದು. ಓದುಗರೇ ನೀವೇ ವಿಚಾರ ಮಾಡಿ ಈ ಸಮಸ್ಯೆಯನ್ನು ನಾವು  ಹೇಗೆ ನಿವಾರಿಸಬೇಕು ಎಂಬುದನ್ನು.

ಇನ್ನಷ್ಟು ಓದಿರಿ :

ಚಿಕ್ಕ ಮಕ್ಕಳೆ, ಅಂಕಲ್ ಗಳೇ, ಆಂಟಿಗಳೇ, ಅಜ್ಜರೆ, ಮತ್ತು ಅಜ್ಜಿಯರೇ ಕೇಳಿ ಕೇಳಿ! ಒಬ್ಬ ಸಾಹಸ ಹುಡುಗನ ಸಾಹಸ ಯುಕ್ತ ಕಥೆ ಕೇಳಿ ಕ್ಷಮಿಸಿ ಓದಿರಿ!

ಕೇಳಿ ಕೇಳಿ ಕೇಳಿ! ಫ್ರೀ ನಲ್ಲಿ ಸಿಗಲಿದೆ ಬೆಳಕು? 2021 ರಲ್ಲಿ ಶುರುವಾಗಿದೆ ಸರ್ಕಾರದ ವತಿಯಿಂದ ಫ್ರೀ ಯಾಗಿ ಬಲ್ಬ್ ಕೊಡುವ ಪ್ರಕ್ರಿಯೆ.

Published On: 16 December 2021, 10:44 AM English Summary: Lock Down ! One More Time? Nooo!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.