1. ಸುದ್ದಿಗಳು

ಕರ್ನಾಟಕ ಚುನಾವಣೆ: ತೇಜಸ್ವಿನಿ ಅನಂತಕುಮಾರ್ ಒಂದು ಟ್ವೀಟ್‌; ನೂರು ಚರ್ಚೆ!

Hitesh
Hitesh

ರಾಜ್ಯದಲ್ಲಿ ಚುನಾವಣೆ ದಿನ ಸಮೀಸುತ್ತಿರುವಾಗಲೇ ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ತೇಜಸ್ವಿನಿ ಅನಂತಕುಮಾರ್ ಅವರ ಒಂದು ಟ್ವೀಟ್‌ ಹಲವು ಚರ್ಚೆಗೆ ಕಾರಣವಾಗಿದೆ.

ಈಚೆಗೆ ಹಲವು ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ ಆಗಿದ್ದು, ಕಳೆದ ಒಂದು ವಾರದಿಂದ ತೇಜಸ್ವಿನಿ ಅನಂತಕುಮಾರ್

ಅವರು ಮಾಡುತ್ತಿರುವ ಟ್ವೀಟ್‌ಗಳು ರಾಜಕೀಯ ವಲಯದಲ್ಲಿ ಹಲವು ಚರ್ಚೆಗೆ ಕಾರಣವಾಗಿದೆ.

ಅಷ್ಟಕ್ಕೂ ಅವರು ಮಾಡಿದ ಎರಡು ಟ್ವೀಟ್‌ಗಳಾದರೂ ಏನು ಚುನಾವಣೆಗೆ ಇನ್ನು 20 ದಿನಗಳಿರುವಾಗ ಇದು ಪ್ರಮುಖವಾಗುತ್ತಿರುವುದೇಕೆ ಎನ್ನುವ ವಿವರ ಇಲ್ಲಿದೆ.  

ಈಚೆಗೆ ಕಾಂಗ್ರೆಸ್‌ ಸೇರ್ಪಡೆ ಆಗಿರುವ ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ಕೆಲವರ ಹಿಡಿತಕ್ಕೆ ಸಿಗುತ್ತಿದ್ದು,

ಇದು ಒಳ್ಳೆಯ ಬೆಳವಣಿಗೆಯಲ್ಲ ಇದರಿಂದ ಬಿಜೆಪಿಯ ಕಂಬಗಳು ಅಲುಗಾಡುತ್ತಿವೆ ಎಂದಿದ್ದರು. 

ಇದೀಗ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಆಗಿರುವ ತೇಜಸ್ವಿನಿ ಅನಂತಕುಮಾರ್ ಅವರು ತಮ್ಮ ಪತಿ ಅನಂತಕುಮಾರ್‌

ಅವರು ಲಾಲ್‌ಬಾಗ್‌ನಲ್ಲಿ ನೆಟ್ಟ ಗಿಡದ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಅನಂತಕುಮಾರ್‌ ಅವರು ನೆಟ್ಟಿದ್ದ ಗಿಡ

ಬಾಡಿ ಹೋಗಿದೆ ಎನ್ನುವ ಟ್ವೀಟ್‌ ಚರ್ಚೆಗೆ ಗ್ರಾಸವಾಗಿದೆ. ಅನಂತಕುಮಾರ್‌ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಬೆಳೆಸಿದವರಲ್ಲಿ ಪ್ರಮುಖರು.

ಈಚೆಗೆ ಬಿಜೆಪಿಯಲ್ಲಿ ನಡೆಯುತ್ತಿರುವ ಚರ್ಚೆ ಹಾಗೂ ತೇಜಸ್ವಿನಿ ಅನಂತಕುಮಾರ್‌ ಅವರ ಟ್ವೀಟ್‌ ಒಂದಕ್ಕೊಂದು ತಳಕು ಹಾಕಿಕೊಂಡಿದೆ.  

ತೇಜಸ್ವಿನಿ ಅನಂತಕುಮಾರ್‌ ಅವರು ಅವರ ಟ್ವಿಟ್ಟರ್‌ ಖಾತೆಯಲ್ಲಿ 2015ರ ಜೂನ್‌ 5ರಂದು

ಲಾಲ್‌ಬಾಗ್‌ ಪಶ್ಚಿಮ ದ್ವಾರದ ಬಳಿ ಅನಂತಕುಮಾರ್‌ ಅವರು ಗಿಡ ನೆಟ್ಟಿದ್ದರು.

ಯಾಕೋ ಅದು ಮುದುರಿ ಹೋಗಿದೆ. ಲಾಲ್‌ಬಾಗ್‌ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಿದ್ದೇವೆ.

ಅನಂತಕುಮಾರ ಅವರ ಅನುಪಸ್ಥಿತಿಯಲ್ಲಿ ಈ ಗಿಡವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎನ್ನುವುದು ನನ್ನ ಭಾವನೆ ಎಂದು ಟ್ವೀಟ್ಟಿಸಿದ್ದಾರೆ. 

Jagdish Shettar ಜಗದೀಶ್‌ ಶೆಟ್ಟರ್‌ ಜೊತೆ ಗುರುತಿಸಿಕೊಳ್ಳದಂತೆ ಬಿಜೆಪಿ ನಾಯಕರಿಗೆ ಖಡಕ್‌ ಸೂಚನೆ?!

ಇದೇ ವಾರದಲ್ಲಿ ಅವರು ಮಾತು ಬೆಳ್ಳಿ ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ಮೌನ ಮಾತ್ರ ಬಂಗಾರ. ಏನಂತೀರಿ? ಎಂದು ಟ್ವೀಟ್‌ ಮಾಡಿದ್ದರು.

ತೇಜಸ್ವಿನಿ ಅವರು ವಿಧಾನಸಭಾ ಚುನಾವಣೆ ಟಿಕೆಟ್‌ ಆಕಾಂಕ್ಷಿಯಾಗಿದ್ದರು ಎನ್ನಲಾಗಿದೆ.

ಕಳೆದ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ನೀಡಬೇಕು

ಎನ್ನುವ ಒತ್ತಾಯಗಳು ಕೇಳಿಬಂದಿತ್ತಾದರೂ, ಅದರ ಹೊರತಾಗಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ನೀಡಲಾಗಿತ್ತು. 

ಲಾಲ್‌ಬಾಗ್‌ನಲ್ಲಿ ದಿವಂಗತ ಅನಂತಕುಮಾರ್‌ ಅವರು ನೆಟ್ಟಿದ್ದ ಗಿಡ

ಸಂತೋಷ್‌ ಮೇಲೆ ಕಿಡಿಕಾರಿದ್ದ ಜಗದೀಶ ಶೆಟ್ಟರ್‌

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಬಿ.ಎಲ್‌. ಸಂತೋಷ್‌ ಅವರ ವಿರುದ್ಧ

ಈಚೆಗೆ ಜಗದೀಶ ಶೆಟ್ಟರ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಿ.ಎಲ್‌ ಸಂತೋಷ್‌ ಅವರ ಕಾರಣದಿಂದಲೇ ನನಗೆ ಟಿಕೆಟ್‌ ತಪ್ಪಿದ್ದು, ಅವರು ಪಕ್ಷದ ಕಂಬವನ್ನು ಅಲುಗಾಡಿಸುತ್ತಿದ್ದಾರೆ.

ಕೆಲವರ ಹಿತಾಸಕ್ತಿಗಾಗಿ ಪಕ್ಷವನ್ನು ಬಲಿಕೊಡಲಾಗುತ್ತಿದೆ ಎಂಬರ್ಥದಲ್ಲಿ ಮಾತನಾಡಿದ್ದರು. 

Today Weather Update ರಾಜ್ಯದಲ್ಲಿ ಮುಂದುವರಿದ ಒಣಹವೆ; ಅಲ್ಲಲ್ಲಿ ಮಳೆ 

Published On: 19 April 2023, 01:48 PM English Summary: Karnataka Elections: Tejaswini Ananthakumar's One Tweet; A hundred discussions!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.