1. ಸುದ್ದಿಗಳು

Karnataka Election 2023 ರಾಜ್ಯ ಚುನಾವಣೆಯಲ್ಲಿ ಮಾದಕವಸ್ತುಗಳ ಸದ್ದು!

Hitesh
Hitesh
Drugs

ರಾಜ್ಯ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಇಂತಹ ಸಂದರ್ಭದಲ್ಲಿ ಸಾವಿರಾರು ಕೋಟಿ ರೂಪಾಯಿ ಪತ್ತೆಯಾಗುತ್ತಿದೆ.

ಪ್ರತಿ ಬಾರಿಯೂ ವಿವಿಧ ಚುನಾವಣೆಗಳು ನಡೆಯುವ ಸಂದರ್ಭದಲ್ಲಿ ಸಾವಿರಾರೂ ಕೋಟಿ ರೂಪಾಯಿ ಮೊತ್ತವನ್ನು ಚುನಾವಣಾ ಆಯೋಗ ಸೇರಿದಂತೆ

ಪರಿಶೀಲನಾ ಅಧಿಕಾರಿಗಳು ವಶಕ್ಕೆ ಪಡೆಯುವುದು ವರದಿ ಆಗುತ್ತಲ್ಲೇ ಇರುತ್ತದೆ.

ಈ ಬಾರಿಯೂ ಅಂತಹದ್ದೇ ಪ್ರಕರಣಗಳು ಬೆಳಕಿಗೆ ಬಂದಿದ್ದರೂ, ಈ ಬಾರಿಯ ಮೊತ್ತ ಎಲ್ಲರನ್ನೂ ಚಕಿತರನ್ನಾಗಿಸುವಂತಿದೆ.

ಈ ಬಾರಿಯ ರಾಜ್ಯ ಚುನಾವಣೆಯಲ್ಲಿ ಅಕ್ರಮ ಹಣ ವಹಿವಾಟಿನ ಕುರಿತು  ಹೆಚ್ಚು ವರದಿ ಆಗುತ್ತಿದೆ.

ಅಲ್ಲದೇ ಭಾರೀ ಪ್ರಮಾಣದಲ್ಲಿ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ.

ಚುನಾವಣೆ ಸಮಯದಲ್ಲಿ ನಗದು ಮೊತ್ತವಷ್ಟೇ ಅಲ್ಲದೇ ಡ್ರಗ್ಸ್‌ ಸಹ ಪತ್ತೆ ಆಗಿರುವುದು ಇದನ್ನು ಯಾರು ಸರಬರಾಜು ಮಾಡುತ್ತಿದ್ದಾರೆ ಎನ್ನುವುದು ಸಹ ಚರ್ಚೆಗೆ ಗ್ರಾಸವಾಗಿದೆ. 

ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಭಾನುವಾರದ ವರೆಗೆ ಬರೋಬ್ಬರಿ ಒಟ್ಟು 250 ಕೋಟಿ ರೂಪಾಯಿಗೂ ಹೆಚ್ಚು

ಮೊತ್ತದ ನಗದು ಹಾಗೂ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚುನಾವಣಾ ಆಯೋಗ ವಶಪಡಿಸಿಕೊಂಡಿರುವುದರಲ್ಲಿ 82 ಕೋಟಿ ರೂಪಾಯಿ ನಗದು, 57 ಕೋಟಿ ರೂಪಾಯಿ ಮೌಲ್ಯದ ಮದ್ಯ, 78 ಕೋಟಿ ರೂ.

ಮೊತ್ತದ ಬೆಳ್ಳಿ, 20 ಕೋಟಿ ರೂಪಾಯಿ ಮೊತ್ತದ ಉಡುಗೊರೆಗಳು ಹಾಗೂ ಬರೋಬ್ಬರಿ 17 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೇರಿದೆ.

ಇನ್ನು ಅಕ್ರಮ ಹಣ ಮತ್ತು ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ 1,930 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ

ಎಂದು ಚುನಾವಣ ಆಯೋಗದ ಪ್ರಕಟಣೆ ತಿಳಿಸಿದೆ.

Karnataka Election ಕರ್ನಾಟಕ ಚುನಾವಣೆ ದಿನಾಂಕ ಘೋಷಣೆ, ಮೇ 10ಕ್ಕೆ ಕರ್ನಾಟಕ ಚುನಾವಣೆ!

The noise of drugs in the state election!

17 ಕೋಟಿ ಮೊತ್ತದ ಡ್ರಗ್ಸ್‌

ಕರ್ನಾಟಕ ವಿಧಾನಸಭೆ ಚುನಾವಣೆ -2023ರಲ್ಲಿ ಅತೀ ಹೆಚ್ಚು ಆತಂಕ ಮೂಡಿಸಿರುವುದು.

ಪ್ರಸಕ್ತ ಚುನಾವಣೆ ಪರಿಶೀಲನೆ ಸಂದರ್ಭದಲ್ಲಿ ವಿವಿಧ ಭಾಗದಲ್ಲಿ ಡ್ರಗ್ಸ್‌ ಹಾಗೂ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದು.

ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 17 ಕೋಟಿ ರೂಪಾಯಿ ಬೆಲೆ ಬಾಳುವ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ.

ಚುನಾವಣೆಯಲ್ಲಿ ನಗದು, ಐಷಾರಾಮಿ ಉಡುಗೊರೆಗಳಷ್ಟೇ ಸುದ್ದಿ ಮಾಡುತ್ತಿದ್ದವು.

ಈ ಬಾರಿ ಮಾದಕವಸ್ತುಗಳ ಸರಬರಾಜೂ ನಡೆಯುತ್ತಿರುವುದು ಆತಂಕಕ್ಕೆ ಎಡೆಮಾಡಿದೆ.

ಐಷಾರಾಮಿ ಉಡುಗೊರೆ; ಅನಾಹುತ

ರಾಜ್ಯದ ಬೇಲೂರು ಸೇರಿದಂತೆ ವಿವಿಧ ಭಾಗದಲ್ಲಿ ಅಭ್ಯರ್ಥಿಗಳು ನೀಡಿದ್ದರೂ ಎನ್ನಲಾದ ಕುಕ್ಕರ್‌ ಸ್ಫೋಟವಾಗಿರುವುದು ವರದಿ ಆಗಿದೆ.

ಇನ್ನು ದಕ್ಷಿಣ ಕರ್ನಾಟಕದ ವಿವಿಧ ಭಾಗದಲ್ಲಿ ಕೆಲವು ಅಭ್ಯರ್ಥಿಗಳು ಸ್ಟೌವ್‌ ನೀಡಿದ್ದರು ಎನ್ನಲಾಗಿದ್ದು, ಸ್ಟೌವ್‌ ಸ್ಫೋಟವಾಗಿರುವುದು ಸಹ ವರದಿಯಾಗಿದೆ.

ಈ ಬಾರಿಯ ಚುನಾವಣೆ ಆಮಿಷ ಹಾಗೂ ಅಕ್ರಮವಾಗಿ ಹಣ ಹಂಚಿಕೆಯಾಗುತ್ತಿರುವುದು ಬೆಳಕಿಗೆ ಬರುತ್ತಿದೆ.

ಚುನಾವಣೆಗೆ ಇನ್ನು ಎರಡು ವಾರಗಳಷ್ಟೇ ಉಳಿದಿದ್ದು, ಇನ್ನು ಎಷ್ಟು ಅಕ್ರಮ ಹಣ ಪತ್ತೆಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. 

ಕರ್ನಾಟಕ ಚುನಾವಣೆ: ತೇಜಸ್ವಿನಿ ಅನಂತಕುಮಾರ್ ಒಂದು ಟ್ವೀಟ್‌; ನೂರು ಚರ್ಚೆ!

Pic Credits: Social Media 

Published On: 26 April 2023, 11:48 AM English Summary: karnataka election 2023 The noise of drugs in the state election!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.