ಶಿಸ್ತು, ಸಂಯಮಕ್ಕೆ ಹೆಸರು ವಾಸಿಯಾಗಿದ್ದ ವೀರಕನ್ನಡಿಗ
ಸದಾ ಶಿಸ್ತು ಮತ್ತು ಸಂಯಮದಿಂದಲೇ ಹೆಸರು ವಾಸಿಯಾಗಿದ್ದ ಕನ್ನಡದ ಅಪರೂಪದ ನಟರಲ್ಲಿ ಪುನೀತ್ ಕೂಡ ಒಬ್ಬರು. ಅಚ್ಚ ಕನ್ನಡ, ಸ್ವಚ್ಚ ಮನಸಿನಿಂದ ಎಲ್ಲರನ್ನೂ ಅಪ್ಪಿಕೊಳ್ಳುತ್ತಿದ್ದರು. ಹಿರಿಯರು ಕಿರಿಯರು ಎಲ್ಲರನ್ನೂ ಅಷ್ಟೇ ಪ್ರೀತಿಯಿಂದ ಕಂಡವರು. ಕುಳಿತವರು ಥಟ್ಟನೇ ಎದ್ದು ಹೋದಂತೆ ನಮ್ಮೆಲ್ಲರನ್ನ ಅಗಲಿದ್ದು ಮಾತ್ರ ಅರಗಿಸಿಕೊಳ್ಳಲಾಗದ ತುತ್ತು. ಸದ್ಯ ಪುನೀತ್ ನಮ್ಮ ಜೊತೆ ದೈಹಿಕವಾಗಿಲ್ಲವಷ್ಟೇ. ಜೇಮ್ಸ್ ಸಿನಿಮಾ ಮೂಲಕ ನಮ್ಮ ಸುತ್ತಲೇ ಇದ್ದಾರೆ.
Big screenನಲ್ಲಿ ಪುನೀತ್‌ರನ್ನು ಕಂಡು ಖುಷ್ !
‘ಜೇಮ್ಸ್’ ಸಿನಿಮಾದ ಕೆಲಸಗಳು ಚಾಲ್ತಿಯಲ್ಲಿರುವಾಗಲೇ ಅವರು ನಿಧನ ಹೊಂದಿದ್ದು ನಿಜಕ್ಕೂ ನೋವಿನ ಸಂಗತಿ. ಈಗ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಿದೆ. ಪುನೀತ್ ಇಲ್ಲ ಎಂಬ ಸತ್ಯವನ್ನು ಎದೆಯಲ್ಲಿಟ್ಟುಕೊಂಡೇ ಜನರು ಈ ಚಿತ್ರ ನೋಡುತ್ತಿದ್ದಾರೆ. ಹೀಗಾಗಿ, ಫ್ಯಾನ್ಸ್ಗೆ ಸಿನಿಮಾ ಭಾವನಾತ್ಮಕವಾಗಿ ಸಖತ್ ಕನೆಕ್ಟ್ ಆಗುತ್ತಿದೆ. ಅವರನ್ನು ದೊಡ್ಡ ಪರದೆಯಲ್ಲಿ ನೋಡುತ್ತಿರುವುದು ಒಂದು ಕಡೆ ಖುಷಿ, ಮತ್ತೊಂದು ಕಡೆ ನೋವನ್ನು ನೀಡುತ್ತಿದೆ.
ಇದನ್ನು ಓದಿರಿ:
ಆಸ್ಕರ್ ರೇಸ್ ನಲ್ಲಿ ಸೂರಾರೈ ಪೊಟ್ರು ಚಿತ್ರ
40,000 ರೂ.ನಲ್ಲಿ 66ಕಿಮೀ ಮೈಲೇಜ್ ನೀಡುವ ಯಮಹಾ ಸ್ಕೂಟರ್!
James one man show!
ಸಿನಿಮಾ ಹೇಗಿದೆ ಎಂದು ನೋಡುವುದಾದರೆ ಜೇಮ್ಸ್ ಹೆಸರಿನ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಓರ್ವ Powerful Soldier ಈ ಸಂತೋಷ್ (ಪುನೀತ್ ರಾಜ್ಕುಮಾರ್). ಆತ ರೇಸ್ಗೆ ಇಳಿದರೆ, ಅಲ್ಲಿ ರೇಸ್ ಇರೋದಿಲ್ಲ, Only one man show. ಎದುರಾಳಿಯ ಎದೆಯಲ್ಲಿ ಭಯ ಹುಟ್ಟಿಸುತ್ತಾನೆ. ವೈರಿಗಳು ಎಷ್ಟೇ ಬರಲಿ, ಒಂದೇ ಗನ್ನಿಂದ ಎಲ್ಲರನ್ನೂ ಸುಟ್ಟು ನಾಶ ಮಾಡುತ್ತಾನೆ. ಅಷ್ಟು ಪವರ್ಫುಲ್ ಇರುವ ಈ ಜೇಮ್ಸ್ಗೆ ಗೆಳೆಯರೇ ಕುಟುಂಬ. ಅವರಿಗೋಸ್ಕರ ಏನು ಮಾಡೋಕೆ ಈತ ರೆಡಿ. ಆದರೆ, ಈ ಸಂತೋಷ್ ವೈರಿಗಳ ರಕ್ಷಣೆಗೆ ನಿಲ್ಲುತ್ತಾನೆ. ಅದು ಏಕೆ? ಇದರ ಉದ್ದೇಶ ಏನು? ಸಂತೋಷ್ ಹಿನ್ನೆಲೆ ಏನು? ಈ ಚಿತ್ರಕ್ಕೆ ‘ಜೇಮ್ಸ್’ ಅಂತ ಹೆಸರಿಡೋಕೆ ಕಾರಣ ಏನು? ಇದೆಲ್ಲವನ್ನೂ ತಿಳಿಯೋಕೆ ಸಿನಿಮಾ ಕಣ್ತುಂಬಿಕೊಳ್ಳಬೇಕು.
Double Shadeನಲ್ಲಿ ಮಿಂಚಿದ ಪುನೀತ್
‘ಜೇಮ್ಸ್’ ಸಿನಿಮಾದಲ್ಲಿ ಎರಡು Shade ನಲ್ಲಿ ಪುನೀತ್ ಮಿಂಚಿದ್ದಾರೆ. ಸಿನಿಮಾ ಆರಂಭದಲ್ಲಿ ಅವರ Entry ಥ್ರಿಲ್ ನೀಡುತ್ತದೆ. ಕಾರ್ ಚೇಸಿಂಗ್ ದೃಶ್ಯಗಳು ಪ್ರೇಕ್ಷಕನ ಮೈಯಲ್ಲಿ ಪವರ್ ಹರಿಸುತ್ತದೆ. ಇಡೀ ಚಿತ್ರವನ್ನು ಪುನೀತ್ ಆವರಿಸಿಕೊಂಡಿದ್ದಾರೆ. Screen ಮೇಲೆ ಪುನೀತ್ ಅವರನ್ನು ಕಾಣುವ ಅಭಿಮಾನಿಗಳಿಗೆ, ಅಪ್ಪು ಇಲ್ಲ ಎಂಬ ನೋವು ಪ್ರತಿ ದೃಶ್ಯದಲ್ಲೂ ಕಾಡದೆ ಬಿಡದು.
ಇನ್ನಷ್ಟು ಓದಿರಿ:
ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.
ಯುವಜನರಲ್ಲಿ ಹೆಚ್ಚುತ್ತಿರುವ ʼಹಾರ್ಟ್ ಅಟ್ಯಾಕ್ʼ..! ತಪ್ಪಿಸಲು ಇರೋ ಮಾರ್ಗಗಳೇನು..?
ನಡುವೆ ಒಂದು ಲವ್ Track
ಈ ಸಿನಿಮಾದಲ್ಲಿ ನಿಶಾ ಗಾಯಕ್ವಾಡ್ಗೂ (ಪ್ರಿಯಾ ಆನಂದ್) ಜೇಮ್ಸ್ ನಡುವೆ ಒಂದು ಲವ್ Track ಸಾಗುತ್ತದೆಯಾದರೂ ಅದಕ್ಕೆ ನಿರ್ದೇಶಕರು ಹೆಚ್ಚು ಪ್ರಾಮುಖ್ಯತೆ ನೀಡಿಲ್ಲ. ಚಿತ್ರದ ಕಥೆ ಹಾಗೂ ನಿರೂಪಣೆ ವಿಚಾರದಲ್ಲಿ ನಿರ್ದೇಶಕರು ಮತ್ತಷ್ಟು ಗಮನ ವಹಿಸಬೇಕಿತ್ತು. ಈ ಸಿನಿಮಾದಲ್ಲಿ ವಿಲನ್ಗಳ ಸಂಖ್ಯೆ ತುಸು ಹೆಚ್ಚೆ ಇದೆ. ಕೆಲವು ಕಡೆಗಳಲ್ಲಿ ಇದೇ ವಿಚಾರ ಪ್ರೇಕ್ಷಕನಲ್ಲಿ ಗೊಂದಲ ಮೂಡಿಸುತ್ತದೆ.
ಜಿದ್ದಿಗೆ ಬಿದ್ದು ನಟಿಸಿದ ಕಲಾವಿದರ ಬಳಗ
ಶ್ರೀಕಾಂತ್, ಆರ್. ಶರತ್ಕುಮಾರ್, ಮುಕೇಶ್ ರಿಷಿ, ಆದಿತ್ಯ ಮೆನನ್ ಮೊದಲಾದವರು ವಿಲನ್ ಆಗಿ ಮಿಂಚಿದ್ದಾರೆ. ಸಾಧು ಕೋಕಿಲ, ಅನು ಪ್ರಭಾಕರ್ ಮೊದಲಾದವರ ಪಾತ್ರ ಹೀಗೆ ಬಂದು ಹಾಗೆ ಹೋಗುತ್ತದೆ. ಶೈನ್ ಶೆಟ್ಟಿ, ಚಿಕ್ಕಣ್ಣ, ತಿಲಕ್, ಹರ್ಷ ಈ ನಾಲ್ವರು ಪುನೀತ್ ಗೆಳೆಯರ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಮಾಡಿರುವ ಪಾತ್ರ ಎಂತಹದ್ದು ಎಂಬುದನ್ನು ಚಿತ್ರಮಂದಿರದಲ್ಲೇ ಕಣ್ತುಂಬಿಕೊಳ್ಳಬೇಕು. ಪ್ರಿಯಾ ಆನಂದ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಹಿನ್ನೆಲೆ ಸಂಗೀತದ ಮೂಲಕ ಸಂಗೀತ ನಿರ್ದೇಶಕ ಚರಣ್ ರಾಜ್ ಚಿತ್ರದ ತೂಕ ಹೆಚ್ಚಿಸಿದ್ದಾರೆ. ಅವರ ಬತ್ತಳಿಕೆಯಿಂದ ಇನ್ನೂ ಉತ್ತಮ ಹಾಡುಗಳನ್ನು ತರಲು ಅವಕಾಶ ಇತ್ತು. ಸ್ವಾಮಿ ಗೌಡ ಛಾಯಾಗ್ರಹಣ ಚಿತ್ರದ ಅಂದ ಹೆಚ್ಚಿಸಿದೆ. ಕಾರ್ ಚೇಸಿಂಗ್ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶ ಸಂಕಲನಕಾರ ದೀಪು ಎಸ್. ಕುಮಾರ್ ಅವರಿಗೆ ಇತ್ತು.
ಮತ್ತಷ್ಟು ಓದಿರಿ:
Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ
Chocolates price hike: ಶೀಘ್ರದಲ್ಲೆ ಗಗನಕ್ಕೆರಲಿದೆ ಚಾಕೊಲೇಟ್ಸ್ ಬೆಲೆ.. ಇದೇ ಕಾರಣ
Share your comments