1. ಆರೋಗ್ಯ ಜೀವನ

ಯುವಜನರಲ್ಲಿ ಹೆಚ್ಚುತ್ತಿರುವ ʼಹಾರ್ಟ್‌ ಅಟ್ಯಾಕ್‌ʼ..! ತಪ್ಪಿಸಲು ಇರೋ ಮಾರ್ಗಗಳೇನು..?

KJ Staff
KJ Staff
heart attacks on the rise among youths

ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಹಠಾತ್‌ ನಿಧನದಿಂದ ಈಡೀ ಚಿತ್ರರಂಗವೇ ಶಾಕ್‌ಗೆ ಒಳಗಾಗಿತ್ತು. ಯಾಕಂದ್ರೆ ಒಬ್ಬ ಫಿಟ್‌ ಆಗಿದ್ದ ನಟ ಕಾರ್ಡಿಯಾಕ್‌ ಅರೆಸ್ಟ್‌ಗೆ ಒಳಗಾಗುತ್ತಾನೆ ಎಂಬುದನ್ನು ಯಾರೂ ಕೂಡ ಊಹಿಸಲು ಸಾದ್ಯವಿರಲಿಲ್ಲ. ಇನ್ನು ಈ ಬೆಳವಣಿಗೆ ನಡೆದ ಮೇಲೆ ಯುವ ಜನರು ತಮ್ಮ ದಿನ ನಿತ್ಯದ ವರ್ಕೌಟ್‌ ಮೇಲೆ ಸಾಕಷ್ಟು ನಿಗಾ ವಹಿಸಿಕೊಂಡಿದ್ದಾರೆ.

ಇದನ್ನು ಓದಿರಿ:

ಆರೋಗ್ಯವೇ ಭಾಗ್ಯ: ʼsugar free potatoʼ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ

ವೈದ್ಯರು ಹೇಳೊದೇನು..?

ಹೌದು ಮೀತಿ ಮೀರಿದ ವ್ಯಾಯಾಮ ದೇಹಕ್ಕೆ ಅಪಾಯಕಾರಿ, ಉತ್ತಮ ಎಂಬ ಅಂತೆ ಕಂತೆಗಳು ಇನ್ನು ಸಮಾಜದಲ್ಲಿ ಚಲಿಸುತ್ತಲೇ ಇವೆ. ಯಾಕಂದ್ರೆ ತಜ್ಞ ವೈದ್ಯರು ಹೇಳುವ ಪ್ರಕಾರ ನಿಯಮಿತ ವ್ಯಾಯಾಮ ಮಾಡುವುದು ದೇಹಕ್ಕೆ ಉತ್ತಮದಾದದು ಎಂದು. ಒಬ್ಬ ಮನುಷ್ಯ ತನ್ನ ಭಾರಕ್ಕೆ ಸಮನಾಗಿ ವ್ಯಾಯಾಮವನ್ನು ರೂಢಿಸಿಕೊಳ್ಳಬೇಕೆ ವಿನಃ ಹೆಚ್ಚಿನ ವರ್ಕೌಟ್‌ ಅಪಾಯ ತಂದೊಡ್ಡುವ ಸಾಧ್ಯತೆಗಳಿರುತ್ತವೆ ಎನ್ನಲಾಗಿದೆ.

ಇದನ್ನು ಓದಿರಿ:

Bamboo Farmingನಲ್ಲಿ Zero Investmentನಿಂದ ನೀವು ಒಂದು ಹೆಕ್ಟೇರ್ನಲ್ಲಿ 7 Lakh ರೂಪಾಯಿಗಳನ್ನು ಪಡೆಯುತ್ತೀರಿ!

ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತ ಹೆಪ್ಪುಗಟ್ಟುವಿಕೆಯನ್ನು ಸೂಚಿಸುತ್ತದೆ, ಇದು ಹೃದಯಕ್ಕೆ ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಹೀಗೆ ರಕ್ತದ ಹರಿವು ಇದ್ದಕ್ಕಿದ್ದಂತೆ ನಿರ್ಬಂಧಿಸಲ್ಪಟ್ಟಾಗ, ಕೊಲೆಸ್ಟ್ರಾಲ್ ಸೇರಿದಂತೆ ಕೊಬ್ಬಿನ ನಿಕ್ಷೇಪಗಳಿಂದ ಪರಿಧಮನಿಯ ಅಪಧಮನಿಗಳು ಕಿರಿದಾಗಬಹುದು, ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ಕೆಲವೊಂದು ಕ್ರಮಗಳನ್ನು ಅಲವಡಿಸಿಕೊಳ್ಳುವದರಿಂದ ಹೃದಯಾಘಾತದಿಂದ ದೂರವಾಗಿರಬಹುದು.

ಇದನ್ನು ಓದಿರಿ:

1 ACRE,120Trees ಮತ್ತುನೀವು ಕೋಟ್ಯಾಧಿಪತಿ! ಹೇಗೆ?

ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ:

1) ಕುಟುಂಬದಲ್ಲಿ ಬೇರೆ ಸದಸ್ಯರಿಗೆ ಹೃದಯ ಕಾಯಿಲೆಯ ಸಮಸ್ಯೆಯಿದ್ದರೆ ಹೃದ್ರೋಗಶಾಸ್ತ್ರಜ್ಞರನ್ನು ಭೇಟಿ ಮಾಡಿ.
2) ನಿಯಮಿತ ಹೃದಯ ತಪಾಸಣೆ.
3) ಹೆಚ್ಚುವರಿ ಸಕ್ಕರೆ ಸೇವನೆ ಮತ್ತು ಕೊಬ್ಬಿನ ಸೇವನೆಯನ್ನು ನಿಯಂತ್ರಿಸಿ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಬೇಕು.
4) ಜೀವನಶೈಲಿಯನ್ನು ಬದಲಾಯಿಸಿ.

Published On: 16 March 2022, 04:46 PM English Summary: heart attacks on the rise among youths

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.