1. ಸುದ್ದಿಗಳು

ಸರ್ಕಾರಿ ನೌಕರರಿಗೆ ಡಿಎ ಜೊತೆಗೆ ಈ ಭತ್ಯೆಗಳಲ್ಲೂ ಹೆಚ್ಚಳ: ಈ ಭರ್ಜರಿ ಹೆಚ್ಚಳ ಯಾರಿಗೆ ಎಷ್ಟು ಗೊತ್ತೆ?

Kalmesh T
Kalmesh T
Increase in these allowances along with DA for government employees

ಸರ್ಕಾರಿ ನೌಕರರ ಗಮನಕ್ಕೆ ಇಲ್ಲಿದೆ ಮಹತ್ವದ ಮಾಹಿತಿ. ಡಿಎ ಅಷ್ಟೇ ಅಲ್ಲದೇ ಅದರೊಟ್ಟಿಗೆ ಇನ್ನೂ ಕೆಲವು ಭತ್ಯೆಗಳಲ್ಲಿ ಹೆಚ್ಚಳ. ಯಾರಿಗೆ ಎಷ್ಟು ಗೊತ್ತೆ? ಇಲ್ಲಿದೆ ವಿವರ…

ಡಿಎ ಹೆಚ್ಚಳದಿಂದಾಗಿ ಪಿಂಚಣಿ ಪ್ರಯೋಜನಗಳು, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ. ಜುಲೈ 2023 ರಲ್ಲಿ, ಕೇಂದ್ರ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗಲಿದೆ. ಇದಲ್ಲದೇ ಪ್ರಯಾಣ ಭತ್ಯೆ (TA) ಕೂಡಾ ಹೆಚ್ಚಾಗುವ ನಿರೀಕ್ಷೆಯಿದೆ.

ಇನ್ನು ಜುಲೈ ತಿಂಗಳಲ್ಲಿ ಏರಿಕೆಯಾಗುವ ಭತ್ಯೆಯನ್ನು ಅಕ್ಟೋಬರ್ ತಿಂಗಳ ವೇತನದಲ್ಲಿ ನೀಡಲಾಗುವುದು. ಅಂದರೆ  3 ತಿಂಗಳ ಡಿಎ ಬಾಕಿಯೊಂದಿಗೆ ವೇತನ ನೀಡಲಾಗುವುದು.

ಇದರೊಂದಿಗೆ ಜುಲೈ 2023ರ ನಂತರ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ  ಗಣನೀಯ ಏರಿಕೆ ಕಂಡು ಬರಲಿದೆ ಎನ್ನುವುದು ಸ್ಪಷ್ಟ.

ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಮಾತ್ರವಲ್ಲದೆ ಪ್ರಯಾಣ ಭತ್ಯೆ ಮತ್ತು ನಗರ ಭತ್ಯೆಯಲ್ಲಿ ಕೂಡಾ ಏರಿಕೆಯಾಗಲಿದೆ.

ಡಿಎ ಹೆಚ್ಚಳದಿಂದಾಗಿ ಪಿಂಚಣಿ ಪ್ರಯೋಜನಗಳು, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡುಬರುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಏರಿಕೆಯಾಗಲಿದೆ.

ಮುಂದಿನ ದಿನಗಳಲ್ಲಿ, ಸಿಪಿಐ-ಐಡಬ್ಲ್ಯೂ ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ಡಿಎ ಎಷ್ಟು ಹೆಚ್ಚಾಗುತ್ತದೆ ಎನ್ನುವುದು  ಸ್ಪಷ್ಟವಾಗುತ್ತದೆ.

ಜನವರಿ 2023 ರಿಂದ ಜೂನ್ 2023 ರವರೆಗಿನ  ಅಂಕಿಅಂಶಗಳ ಆಧಾರದ ಮೇಲೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗುತ್ತದೆ. 

ಅಕ್ಟೋಬರ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಬಹುದಾದರೂ, ಇದು ಜುಲೈನಿಂದ ಅನ್ವಯವಾಗಲಿದೆ. ಹೀಗಾದರೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಬಾಕಿಯೂ (ಡಿಎ ಬಾಕಿ) ನೌಕರರಿಗೆ ಲಭ್ಯವಾಗಲಿದೆ.

ಕೃಷಿ ಜೊತೆಗೆ ಕುರಿ ಸಾಕಾಣಿಕೆ: 7ರಿಂದ 8 ಲಕ್ಷದವರೆಗೆ ಗಳಿಸುತ್ತಿರುವ ಮಹಿಳೆ!

ಬೆಲೆ ಏರಿಕೆಗೆ ಅನುಗುಣವಾಗಿ ತುಟ್ಟಿಭತ್ಯೆ ಶೇಕಡಾ 4 ರಷ್ಟು ಹೆಚ್ಚಾಗಬಹುದು. 2023ರ ಮಾರ್ಚ್‌ನಲ್ಲಿ ಶೇ 4ರಷ್ಟು ಹೆಚ್ಚಿಸಲಾಗಿದೆ.

ಈ ಹೆಚ್ಚಳ ಜನವರಿಯಿಂದಲೇ ಅನ್ವಯವಾಗಲಿದೆ. ಇನ್ನು ಜುಲೈಯಲ್ಲಿ ಕೂಡಾ ಶೇಕಡಾ 4 ರಷ್ಟೇ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೂಡಾ ಹೇಳಲಾಗುತ್ತಿದೆ.   

Turkey Farming: ಇಲ್ಲಿದೆ ಲಾಭದಾಯಕ “ಟರ್ಕಿ ಕೋಳಿ ಸಾಕಾಣಿಕೆ” ಕುರಿತಾದ ಮಾಹಿತಿ

Published On: 13 April 2023, 08:02 PM English Summary: Increase in these allowances along with DA for government employees

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.